Bengaluru: ಇತ್ತೀಚಿಗೆ ರಾಜಧಾನಿ ಬೆಂಗಳೂರಿನ ಖ್ಯಾತ ಉಪಹಾರ ಗೃಹ ರಾಮೇಶ್ವರಂ (Rameswaram Cafe Blast-Horrific Plan) ಕೆಫೆಯಲ್ಲಿ ಸ್ಪೋಟ ನಡೆಸಿದ ಉಗ್ರರ ಜಾಲ ಬೆನ್ನು ಹತ್ತಿರುವ
ರಾಷ್ಟ್ರೀಯ ತನಿಖಾ ದಳಕ್ಕೆ ಹಲವು ಮಹತ್ವದ ಸಂಗತಿಗಳು ದೊರಕಿವೆ. ಕಳೆದ ಕೆಲ ದಿನಗಳಿಂದ ದೇಶದಾದ್ಯಂತ ಅನೇಕ ದಾಳಿಗಳನ್ನು ನಡೆಸಿರುವ ರಾಷ್ಟ್ರೀಯ ತನಿಖಾ ದಳ (National Investigation
Agency) ಇದೀಗ ಉಗ್ರರ ಫೋಟೋಗಳನ್ನು ಬಿಡುಗಡೆ ಮಾಡಿ ಮಾಹಿತಿ ನೀಡಿದ ವ್ಯಕ್ತಿಗಳಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಪ್ರಕಟಿಸಿದೆ.
ಇನ್ನು ಪ್ರಾಥಮಿಕ ಮಾಹಿತಿಯ ಪ್ರಕಾರ, ಉಗ್ರರು ತಮ್ಮ ಹೆಸರುಗಳನ್ನು ಬದಲಿಸಿಕೊಂಡು, ನಕಲಿ ಐಡಿ ಕಾರ್ಡ್ಗಳನ್ನು (Fake ID Cards) ಹಿಂದೂಗಳ ಹೆಸರಿನಲ್ಲಿ ಪಡೆದುಕೊಂಡಿರುವ ಸಂಗತಿ
ಬೆಳಕಿಗೆ ಬಂದಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದ ವ್ಯಕ್ತಿಯನ್ನು ಮುಸ್ಸಾವಿರ್ ಹುಸೇನ್ ಎಂದು ಗುರುತಿಸಲಾಗಿದೆ. 30 ವರ್ಷದ ಈತ ವಿಘ್ನೇಶ್, ಸುಮಿತ್ (Vignesh, Sumith) ಅಥವಾ
ಹೀಗೆ ಅನೇಕ ಹಿಂದೂ ಹೆಸರಿನಲ್ಲಿ ನಕಲಿ ಐಡಿ ದಾಖಲೆಯನ್ನು ಹೊಂದಿದ್ದನು ಎನ್ನಲಾಗಿದೆ. ಮೊಹಮ್ಮದ್ ಜುನೈದ್ ಸಯ್ಯದ್ ಹೆಸರಿನಲ್ಲಿ ಡ್ರೈವಿಂಗ್ ಲೈಸೆನ್ಸ್ (Driving License) ಹೊಂದಿದ್ದನು.
ಈತನಿಗೆ ಸಹಾಯ ಮಾಡಿರುವ ಇನ್ನೊಬ್ಬ ಉಗ್ರನ ಪೋಟೋವನ್ನು ಕೂಡಾ ಎನ್ಐಎ (NIA) ಬಿಡುಗಡೆ ಮಾಡಿದೆ. ಅಬ್ದುಲ್ ಮತೀನ್ ಅಹ್ಮದ್ ಎಂದು ಈತನನ್ನು ಗುರುತಿಸಲಾಗಿದ್ದು, 5.5 ಅಡಿ
ಎತ್ತರವಾಗಿದ್ದು, ತಲೆ ಬೋಳಾಗಿದ್ದು, (Rameswaram Cafe Blast-Horrific Plan) ಹೆಚ್ಚಾಗಿ ಕ್ಯಾಪ್ ಧರಿಸುತ್ತಾನೆ.
ಈ ಇಬ್ಬರು ಉಗ್ರರು ಹಾಸ್ಟೆಲ್, ಪಿಜಿಯಲ್ಲಿ ನೆಲೆಸುತ್ತಾರೆ. ಕಡಿಮೆ ಬಜೆಟ್ ಹೋಟೆಲ್, ಲಾಡ್ಜ್ನಲ್ಲಿ ಇರುತ್ತಾರೆ ಎಂದು ಎನ್ಐಎ ತಿಳಿಸಿದೆ. ಇವರಿಬ್ಬರ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿಗಳ ವಿವರವನ್ನು ಗೌಪ್ಯವಾಗಿ
ಇಡಲಾಗುವುದು ಮತ್ತು ನಿಖರ ಮಾಹಿತಿ ನೀಡಿದರೆ 10 ಲಕ್ಷ ಬಹುಮಾನ ನೀಡುವುದಾಗಿ ಎನ್ಐಎ ತಿಳಿಸಿದೆ.
ಹಿಂದೂಗಳ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್ : ಪ್ರಮುಖ ಉಗ್ರ ಮುಸ್ಸಾವಿರ್ ಹುಸೇನ್ (Mussavir Hussain) ತಾನು ತಂಗಿರುವ ಬಹುತೇಕ ಹೊಟೇಲ್ ಹಾಗೂ ಹಾಸ್ಟೇಲ್ಗಳಲ್ಲಿ ವಿಘ್ನೇಶ ಎಂಬ ಹೆಸರಿನ
ನಕಲಿ ಐಡಿ ಕಾರ್ಡ್ನ್ನು ಬಳಸಿದ್ದಾನೆ. ಹಿಂದೂಗಳ ಹೆಸರಿನ ಐಡಿ ಕಾರ್ಡ್ಗಳನ್ನು ಹೊಂದಿದ್ದರೆ, ಯಾರಿಗೂ ಅನುಮಾನ ಮೂಡುವುದಿಲ್ಲ ಎಂಬುದು ಉಗ್ರರ ತಂತ್ರ. ಹೀಗೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರಿನ
ಹಿಂದೂ ಹೆಸರಿನ ಐಡಿ ಕಾರ್ಡ್ಗಳನ್ನು ಈತ ಬಳಸಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ; ಕೆ.ವಿ ಗೌತಮ್ಗೆ ಕೋಲಾರ ಕಾಂಗ್ರೆಸ್ ಟಿಕೆಟ್: ಇಬ್ಬರ ಜಗಳ 3ನೇ ವ್ಯಕ್ತಿಗೆ ಲಾಭ