‘ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ’ ಹೇಳಿಕೆಯ ಬಗ್ಗೆ ಸದನದಲ್ಲಿ ಕ್ಷಮೆ ಕೇಳಿದ ರಮೇಶ್‌ ಕುಮಾರ್

ಬೆಳಗಾವಿ ಡಿ 17 : ನಿನ್ನೆ ಸದನದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದ ಮಾಜಿ ಸಚಿವ ರಮೆಶ್‌ ಕುಮಾರ್‌ ಇಂದು ಸದನದಲ್ಲಿ ಕ್ಷಮೆ ಕೋರಿದ್ದಾರೆ. ನನಗೆ ಮಹಿಳೆಯರ ಬಗ್ಗೆ ಗೌರವವಿದೆ. ಯಾವುದೇ ದುರುದ್ಧೇಶ, ಉದ್ದೇಶದಿಂದ ನಿನ್ನೆ ಸದನದಲ್ಲಿ ಅತ್ಯಾಚಾರದ ಬಗ್ಗೆ ಮಾತನಾಡಿದ ಮಾತು ಅದಾಗಿರಲಿಲ್ಲ. ಸಾಂದರ್ಭಿಕವಾಗಿ ಹೇಳಿದ ಮಾತಾಗಿತ್ತು ಅಷ್ಟೇ. ನನಗೆ ಕ್ಷಮೆ ಕೋರುವುದಕ್ಕೆ ಯಾವುದೇ ಪ್ರತಿಷ್ಠೆ, ಗೌರವ ಅಡ್ಡ ಬರೋದಿಲ್ಲ. ಯಾರಿಗೇ ನನ್ನ ಮಾತನಿಂದ ನೋವಾಗಿದ್ದರೇ ಕ್ಷಮೆ ಕೋರುತ್ತೇನೆ. ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್, ಸದನದಲ್ಲೇ ಕ್ಷಮೆ ಕೋರಿದರು.

ಈ ಬಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸದನ ಉದ್ದೇಶಿಸಿ ಮಾತನಾಡಿದಂತ ಅವರು, ನಾನು ಹೆಣ್ಣಿಗೆ ಅವಮಾನ ಮಾಡೋದಾಗಲೀ, ಅವರ ವಿರುದ್ಧ ಮಾತನಾಡೋದಾಗಲೀ ಮಾತನಾಡಿದ್ದಲ್ಲ. ನಾನು ಇಲ್ಲಿ ಉಲ್ಲೇಖಿಸಿದಂತ ಮಾತುಗಳು, ಯಾರಿಗೇ ನೋವಾಗಿದ್ದರೂ, ನನಗೆ ಯಾವುದೇ ಪ್ರತಿಷ್ಠೆಯಿಲ್ಲ. ಸದಾ ಕಾಲ ಗೌರವದಿಂದ ನಡೆದುಕೊಳ್ಳಬೇಕೆಂದುಕೊಂಡಿರುವನು. ಸದನದ ಗೌರವ ಕಾಪಾಡಲು ಬದ್ಧರಿದ್ದೇವೆ. ಒಂದು ವೇಳೆ ನನ್ನ ಮಾತಿನಿಂದ ನೋವಾಗಿದ್ದರೇ, ಮುಜುಗರವಾಗಿದ್ದರೆ ಕ್ಷಮೆ ಇರಲಿ. ನನ್ನಿಂದ ಅಪರಾಧ ಆಗಿದೆ ಎನ್ನುವಂತ ತೀರ್ಪು ಕೊಟ್ಟಿರೋ ಕಾರಣ, ನಾನು ಕ್ಷಮೆ ಕೇಳುತ್ತೇನೆ ಎಂದರು.

ಸ್ಪೀಕರ್ ಆದ ನಿಮ್ಮನ್ನು ಅಪರಾಧಿ ಮಾಡಿದ್ದೇನೆ. ತಾವು ಕ್ಷಮೆ ಕೇಳುವುದಾದರೇ ಕೇಳಿ. ಸದನದ ಸಮಯ ಇದೇ ವಿಚಾರವಾಗಿ ಹಾಳು ಮಾಡೋದು ಬೇಡ. ನೆರೆ, ರಾಜ್ಯದ ಜ್ವಲ್ಪಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸದನದಲ್ಲಿ ಕಾಲಾವಕಾಶ ಸಿಗಲಿ. ನಾನು ಮಾತನಾಡಿದಂತ ವಿಚಾರದ ಬಗ್ಗೆ ಕ್ಷಮೆ ಕೇಳೋದಕ್ಕೆ ನನಗೆ ಯಾವುದೇ ಪ್ರತಿಷ್ಠೆಯಿಲ್ಲ. ನನ್ನ ಮಾತಿನಿಂದ ಯಾರಿಗೇ ನೋವಾಗಿದ್ದರೂ ಕ್ಷಮೆ ಕೇಳುತ್ತೇನೆ. ವಿಷಾದ ವ್ಯಕ್ತ ಪಡಿಸುತ್ತೇನೆ ಎಂದು ಹೇಳಿದರು.

ಘಟನೆ ಹಿನ್ನಲೆ :

ಗುರುವಾರ ವಿಧಾನಸಭೆಯಲ್ಲಿ ರಮೇಶ್ ಕುಮಾರ್ ಅವರು ‘ದೆರ್ ಈಸ್ ಎ ಸೇಯಿಂಗ್, ವೆನ್ ರೇಪ್ ಈಸ್ ಇನೆವಿಟೆಬಲ್ ಲೆಟ್ ಲೇಡೌನ್ ಆ್ಯಂಡ್ ಎಂಜಾಯ್’ ( ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ) ಎಂದು ಹೇಳಿದ್ದರು.

ಸದನದಲ್ಲಿ ಅತಿವೃಷ್ಟಿ ಕುರಿತು ನಿಯಮ 69ರ ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಜೆ 5ರ ವೇಳೆ ಚರ್ಚೆಗೆ ಹೆಚ್ಚಿನ ಸಮಯಬೇಕು ಎಂದು ಸದಸ್ಯರು ವಿನಂತಿಸಿದ್ದರು. ಆಗ ಸಂಜೆ 6 ಗಂಟೆಯವರೆಗೆ ಸಮಯ ಕೊಡುತ್ತೇನೆ ಎಂದು ಸ್ಪೀಕರ್ ಹೇಳಿದ್ದರು.

ಎಲ್ಲರೂ ಮಾತನಾಡಬೇಕು ಎನ್ನುತ್ತಾರೆ. ನನಗೆ ಸದನದ ಕಲಾಪ ನಡೆಯುವುದು ಮುಖ್ಯ. ಇದು ನಿಮ್ಮದೇ ಸದನ, ಈಗ ನನ್ನ ಪರಿಸ್ಥಿತಿ ಹೇಗಾಗಿದೆ ಅಂದರೆ ಲೆಟ್ಸ್ ಎಂಜಾಯ್ ದ ಸಿಚುಯೇಷನ್ ಅನ್ನೋ ರೀತಿ ಆಗಿದೆ ರಮೇಶ್ ಕುಮಾರ್ ಅವರು ಹೇಳಿದ್ದರು

Exit mobile version