Bengaluru : ಬೆಂಗಳೂರಿನ (Rameshwaram Cafe Blast Update) ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಕರ್ನಾಟಕದ ಬಳ್ಳಾರಿಯ (Bellary)
ಶಬ್ಬಿರ್ ಎಂಬಾತನನ್ನು ಬಂಧಿಸಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದವನಿಗೂ ಹಾಗೂ ಬಳ್ಳಾರಿಯಲ್ಲಿ ಬಂಧಿತವಾದ ವ್ಯಕ್ತಿಗೂ ಲಿಂಕ್ ಇರುವುದನ್ನು ಎನ್ಐಎ
ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ರಾಮೇಶ್ವರಂ ಬಾಂಬ್ ಪ್ರಕರಣಕ್ಕೂ ಯುವಕನಿಗೂ ಲಿಂಕ್ ಇರುವ ಅನುಮಾನದ ಮೇಲೆ ವಶಕ್ಕೆ ಪಡೆದು
ತನಿಖೆ ನಡೆಸಲಾಗುತ್ತಿದೆ.
ಇನ್ನು ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿ ಬಳ್ಳಾರಿಯ ಟ್ಯಾಂಕ್ ಬಂಡ್ ರಸ್ತೆಯ ಗಲ್ಲಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿ ಶಬ್ಬೀರ್ ತೋರಣಗಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಟ್ಯಾಂಕ್ ಬಂಡ್ ರಸ್ತೆಯ ಬಳಿಯ ಬುಡಾ ಕಾಂಪ್ಲೆಕ್ಸ್ ಬಳಿ ಶಂಕಿತ ಉಗ್ರನನ್ನ ಬೇಟಿ ಮಾಡಿದ್ದ ಎಂಬ ಅನುಮಾನದ
ಹಿನ್ನೆಲೆ ವಶಕ್ಕೆ (Rameshwaram Cafe Blast Update) ಪಡೆದಿದ್ದಾರೆ.
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಉಗ್ರ ಬಳ್ಳಾರಿಗೆ ಬಂದ ಸಮಯದಲ್ಲಿ ಟ್ಯಾಂಕ್ ಬಂಡ್ ಏರಿಯಾ ನಿವಾಸಿ ಶೆಬ್ಬಿರ್ ನನ್ನು ಭೇಟಿ ಮಾಡಿದ್ದನು. ಅಲ್ಲದೇ ಬಾಂಬರ್ನನ್ನು ಹೈದ್ರಾಬಾದ್
(Hyderabad)ಗೆ ಹೋಗಲು ಸಹಾಯ ಮಾಡಿದ್ದನು ಎಂದು ಕೇಳಿಬಂದಿದೆ. ಶಂಕಿತ ಉಗ್ರ ಹೈದರಾಬಾದ್ಗೆ ಹೋದ ಸಮಯದಲ್ಲಿ ಬಳ್ಳಾರಿಯ ಶಬ್ಬೀರ್ ಆತನನ್ನು ಭೇಟಿ ಮಾಡಿ ಬಂದಿದ್ದನು ಎನ್ನಲಾಗುತ್ತಿದೆ.
ಎನ್ಐಎ (NIA) ಅಧಿಕಾರಿಗಳು ಉಗ್ರರ ತಲಾಶ್ ನಲ್ಲಿದ್ದಾರೆ. ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ಗಾಗಿ ತೀವ್ರ ಶೋಧ ನಡೆಯುತ್ತಿದೆ. ಬೆಂಗಳೂರು ಬಾಂಬ್ ಬಾಂಬ್ ಬ್ಲಾಸ್ಟ್ ಆದ ದಿನ ಮುಜಾಫೀರ್ ಇಲ್ಲೇ
ವಾಸ್ತವ್ಯ ಹೂಡಿದ್ದ. ಮುಜಾಫೀರ್ ಹುಸೇನ್ ಶಹಬಾಜ್ಗಾಗಿ ತೀವ್ರ ಹುಡಕಾಟ ನಡೆಯುತ್ತಿದೆ. ಸೈಯದ್ ಅಲಿ (Syed Ali) ಬಾಂಬ್ ತಯಾರಿಕೆಗೆ ಸಹಾಯ ಮಾಡಿದ್ದ. ಸೈಯದ್ ಅಲಿ ಟೆಕ್ನಿಷಿಯನ್ ಕಾರ್ಯ
ನಿರ್ವಾಹಣೆ ಮಾಡಿದ್ದ. ಡಾರ್ಕ್ ವೆಬ್ (Dark Web) ಮೂಲಕ ವಸ್ತುಗಳನ್ನ ಸಂಗ್ರಹಿಸಿ ಬಾಂಬ್ ತಯಾರಿಕೆ ಶಂಕೆ ವ್ಯಕ್ತವಾಗಿದೆ.
ಸೈಯದ್ ಆಲಿ, ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್, ಮುಜಾಫೀರ್ಗಾಗಿ ಎನ್ಐಎ ತಂಡ ತೀವ್ರ ಹುಡಕಾಟ ನಡೆಸುತ್ತಿದೆ. ಬೆಂಗಳೂರು ಬಾಂಬ್ ಬ್ಲಾಸ್ಟ್ಗೂ (Bomb Blast) ಇವರಿಗೂ ಲಿಂಕ್ ಇರುವ ಬಗ್ಗೆ
ಮಾಹಿತಿ ಸಿಕ್ಕಿದೆ. ಶಂಕಿತ ಆಂಧ್ರ ಪ್ರದೇಶದ ತಿರುಪತಿ ಅಥವಾ ಹೈದ್ರಾಬಾದ್ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಇದ್ದು, ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನು ಓದಿ: ಶಿರಾಡಿಘಾಟಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಗ್ಯಾಸ್ ಸೋರಿಕೆಯಿಂದ ವಾಹನಗಳ ಸಂಚಾರ ಬಂದ್, ಬದಲಿ ಮಾರ್ಗ ಬಳಸಲು ಸೂಚನೆ