ಅವಧಿ ಮುಗಿದ ಆಹಾರ ಪದಾರ್ಥಗಳ ಬಳಕೆ: ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

Hyderabad: ಬೆಂಗಳೂರು (Bengaluru) ಮೂಲದ ರಾಮೇಶ್ವರಂ ಕೆಫೆ ಇತ್ತೀಚೆಗೆ ತನ್ನ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ (QSR) ಜಾಲವನ್ನು ಟೆಕ್ ರಾಜಧಾನಿ ಬೆಂಗಳೂರಿನಿಂದ ವಿಸ್ತರಿಸಿದೆ. ಈ ವರ್ಷದ ಜನವರಿ (January) ಯಲ್ಲಿ ಹೈದರಾಬಾದ್​ನ ಮಾಧಾಪುರ ಪ್ರದೇಶದಲ್ಲಿ ಹೋಟೆಲ್​ ಪ್ರಾರಂಭಿಸಲಾಗಿತ್ತು. ಈ ಕೆಫೆಯು ತುಪ್ಪದ ಇಡ್ಲಿ ಮತ್ತು ದೋಸೆಗಳಿಗೆ ಹೆಸರುವಾಸಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಹೋಟೆಲ್​ನ ಆಹಾರ ಪ್ರಿಯರಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಸಂಪೂರ್ಣ ಜನದಟ್ಟಣೆಯ ರೆಸ್ಟೋರೆಂಟ್ಗೆ ಅನೇಕ ಸೆಲೆಬ್ರಿಟಿಗಳು ಆಗಾಗ್ಗೆ ಭೇಟಿ ನೀಡಿ ಇಲ್ಲಿನ ಸ್ಪೆಷಲ್ ದೋಸೆ, ಇಡ್ಲಿ ಸವಿಯುತ್ತಾರೆ.

Food Safety Officials

ಹೈಟೆಕ್​ ರೀತಿಯಲ್ಲಿ ದೋಸೆ ಸೇರಿದಂತೆ ಆಹಾರ ಪದಾರ್ಥಗಳನ್ನು ತಯಾರಿ ಮಾಡುವ ಮತ್ತು ದಕ್ಷಿಣ ಭಾರತದ ಉಪಾಹಾರಕ್ಕೆ ಹೆಸರುವಾಸಿಯಾದ ಬೆಂಗಳೂರು ಮೂಲದ ರಾಮೇಶ್ವರಂ ಕೆಫೆಯ ಹೈದ್ರಾಬಾದ್ ಬ್ರಾಂಚ್
ಮೇಲೆ ಹೈದರಾಬಾದ್​​ನ (Hyderbad) ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆಲಂಗಾಣ (Telangana) ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಗುರುವಾರ ರೆಸ್ಟೋರೆಂಟ್ (Restaurant) ಅವಧಿ ಮೀರಿದ ಮತ್ತು ಲೇಬಲ್ ಮಾಡದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿದ್ದರಿಂದ ಅನೇಕ ನಿಯಮಗಳನ್ನು ಉಲ್ಲಂಘನೆ ಮಾಡಿದ್ದನ್ನು ಕಂಡು ಹಿಡಿದಿದ್ದಾರೆ .

ಇನ್ನು ಆಹಾರ ಸುರಕ್ಷತಾ ಇಲಾಖೆಯ ಪ್ರಕಾರ, 16,000 ರೂ ಮೌಲ್ಯದ 100 ಕೆಜಿ ಉದ್ದಿನ ಬೇಳೆ, 10 ಕೆ.ಜಿ. ನಂದಿನಿ ಮೊಸರು ಮತ್ತು ಎಂಟು ಲೀಟರ್ ಹಾಲು ಅವಧಿ ಮೀರಿದ ಪದಾರ್ಥಗಳು ಅಡುಗೆಮನೆಯಲ್ಲಿ ಪತ್ತೆಯಾಗಿದೆ. ಅಸ್ಪಷ್ಟ ಲೇಬಲ್ ಮಾಡಿದ್ದಕ್ಕಾಗಿ ಅಧಿಕಾರಿಗಳು ಅಡುಗೆಮನೆಯಲ್ಲಿದ್ದ ಇನ್ನೂ ಕೆಲವು ಆಹಾರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. 450 ಕೆ.ಜಿ ಹಸಿ ಅಕ್ಕಿ, 300 ಕೆಜಿ ಲೇಬಲ್ ಮಾಡದ ಬೆಲ್ಲವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.

ಏತನ್ಮಧ್ಯೆ, ಆಹಾರ ತಯಾರಿಸುವವರಿಗೆ ವೈದ್ಯಕೀಯ ಫಿಟ್ನೆಸ್ (Fitness) ಪ್ರಮಾಣ ಪತ್ರವನ್ನು ಸಲ್ಲಿಸಲಾಗಿಲ್ಲ ಹಾಗೂ ರಾಮೇಶ್ವರಂ ಕೆಫೆಯಲ್ಲಿ ಕಸದ ಬುಟ್ಟಿಗಳನ್ನು ಮುಚ್ಚಳಗಳಿಂದ ಮುಚ್ಚಲಾಗಿಲ್ಲ ಎಂದು ಅಧಿಕಾರಿಗಳು ದೂರಿದ್ದಾರೆ. ರಾಮೇಶ್ವರಂ ಕೆಫೆ (Rameshwaram Cafe) ಕೆಲವು ತಿಂಗಳ ಹಿಂದೆ ರಾಷ್ಟ್ರ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು. ಬೆಂಗಳೂರಿನ ವೈಟ್​ಫೀಲ್ಡ್ (Whitefield)​ ಶಾಖೆಯ ಮೇಲೆ ಬಾಂಬ್​ ದಾಳಿ ನಡೆದ ಬಳಿಕ ಸಂಚಲನ ಮೂಡಿಸಿತ್ತು. ಈ ಪ್ರಕರಣದ ಬಗ್ಗೆ ಈಗಲೂ ತನಿಖೆ ನಡೆಯುತ್ತಿದೆ.

Exit mobile version