ನನ್ನನ್ನು ಟ್ರೋಲ್(Troll) ಮಾಡುವಂತೆ ಕಾಂಗ್ರೆಸ್ ಪಕ್ಷದ(Congress Party) ಕಾರ್ಯಕರ್ತರಿಗೆ ನಮ್ಮ ಪಕ್ಷದ ಕಚೇರಿಯಿಂದಲೇ ಆದೇಶ ನೀಡಲಾಗಿದೆ. ಆದರೆ ನನ್ನನ್ನು ಟ್ರೋಲ್ ಮಾಡುವ ತೊಂದರೆಯನ್ನು ನೀವು ತೆಗೆದುಕೊಳ್ಳಬೇಡಿ.
Office = @INCKarnataka under the leadership of the honourable KPCC president @DKShivakumar
— Divya Spandana/Ramya (@divyaspandana) May 12, 2022
ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ಟ್ರೋಲ್ ಮಾಡಿರುವ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡು ಮಾಜಿ ಕಾಂಗ್ರೆಸ್ ಸಂಸದೆ ಮತ್ತು ನಟಿ ರಮ್ಯಾ ಪರೋಕ್ಷವಾಗಿ ಕೆಲ ಕಾಂಗ್ರೆಸ್ ನಾಯಕರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಚಿವ ಅಶ್ವತ್ಥ್ ನಾರಾಯಣ್ ಮತ್ತು ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್ ರಹಸ್ಯವಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಭೇಟಿಯ ಮುಖ್ಯ ಉದ್ದೇಶ ಸಂಧಾನ ನಡೆಸುವುದಾಗಿದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್, ಎಂ.ಬಿ ಪಾಟೀಲ್ ವಿರುದ್ದ ಅಸಮಾಧಾನ ಹೊರಹಾಕಿದ್ದರು.
After I quit, ‘she duped the congress of 8 crores & ran away’ was planted in the news esp Kannada channels in an attempt to destroy my credibility. I didn’t run away. I resigned for personal reasons. I certainly did not dupe the party of 8 crores. My mistake was staying silent-
— Divya Spandana/Ramya (@divyaspandana) May 12, 2022
ಡಿ.ಕೆ ಶಿವಕುಮಾರ್ ಅವರ ಈ ಹೇಳಿಕೆಯನ್ನು ಖಂಡಿಸಿರುವ ಮಾಜಿ ಕಾಂಗ್ರೆಸ್ ಸಂಸದೆ ರಮ್ಯಾ, ಎಂ.ಬಿ ಪಾಟೀಲರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಟ್ಟಾಳು. ಅವರಿಬ್ಬರೂ ಸ್ನೇಹಿತರಾಗಿ, ಸಂಬಂಧಿಗಳಾಗಿ ಭೇಟಿಯಾಗಿರಬಹುದು. ರಾಜಕೀಯ ನಾಯಕರು ಪಕ್ಷಾತೀತವಾಗಿ ಭೇಟಿಯಾಗಬಾರದೆ. ಡಿ.ಕೆ ಶಿವಕುಮಾರ್ ಅವರ ಹೇಳಿಕೆ ನನಗೆ ಅಚ್ಚರಿ ಉಂಟು ಮಾಡಿದೆ. ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬಾರದೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

ಇನ್ನು ಮಾಜಿ ಸಂಸದೆ ರಮ್ಯಾ ಅವರು ಮಾಡಿದ ಈ ಟ್ವೀಟ್ನಿಂದ ಡಿ.ಕೆ ಶಿವಕುಮಾರ್ ಅವರ ಬಣ ರಮ್ಯಾ ವಿರುದ್ದ ತೀವ್ರ ಆಕ್ರೋಶ ಹೊರಹಾಕಿ ಟ್ರೋಲ್ಗಳನ್ನು ಮಾಡಲು ಸಿದ್ದತೆ ನಡೆಸಿದ್ದರು. ಆದರೆ ಟ್ರೋಲ್ಗಳು ಸಾಮಾಜಿಕ ಜಾಕತಾಣದಲ್ಲಿ ಕಾಣಿಸಿಕೊಳ್ಳುವ ಮುನ್ನವೇ ಮತ್ತೊಂದು ಟ್ವೀಟ್ ಮಾಡಿದ ರಮ್ಯಾ ಅವರು, ನನ್ನನ್ನು ಟ್ರೋಲ್ ಮಾಡಲು ಕಾಂಗ್ರೆಸ್ ಕಚೇರಿಯಿಂದ ಆದೇಶ ಹೊರಟಿದೆ. ನಿಮಗೆ ಆ ತೊಂದರೆಯನ್ನು ನಾನು ನೀಡುವುದಿಲ್ಲ. ನನ್ನನ್ನು ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದರು.