ಬಿಡುವಿನ ಸಮಯದಲ್ಲಿ ರಾಪಿಡೋ ಓಡಿಸುತ್ತಿರುವ ಸಾ. ಇಂಜಿನಿಯರ್ ; ರಾಪಿಡೋ ಓಡಿಸುತ್ತಿರುವ ಕಾರಣ ಕೇಳಿದ್ರೆ ಅಚ್ಚರಿಗೊಳ್ತೀರಾ!

Rapido Bike

ನಿಖಿಲ್ ಸೇಠ್ ಎಂಬ ವ್ಯಕ್ತಿ ತಾವು ಬಯಸಿದ ಜಾಗಕ್ಕೆ ಹೋಗಲು ರಾಪಿಡೋ ಬೈಕ್(Rapido Bike) ಅನ್ನು ಬುಕ್ ಮಾಡಿದರು. ಬೈಕ್ ಬುಕ್ ಮಾಡಿದ ಬಳಿಕ ಚಾಲಕನೊಂದಿಗೆ ಮಾತನಾಡುತ್ತಾ ಪ್ರಯಾಣ ಬೆಳಸಿದ ನಿಖಿಲ್, ಒಂದಷ್ಟು ವಿಚಾರಗಳನ್ನು ಮಾತನಾಡಲು ಪ್ರಯತ್ನಿಸಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದ ಚಾಲಕ, ನಿಖಿಲ್ ಕೇಳಿದ ಒಂದು ಪ್ರಶ್ನೆಗೆ ಶಾಕಿಂಗ್ ಉತ್ತರ ಕೊಟ್ಟಿದ್ದಾರೆ. ರಾಪಿಡೋ ಓಡಿಸುತ್ತಿದ್ದ ಚಾಲಕ ತಾನು ಮೈಕ್ರೋಸಾಫ್ಟ್‌(Microsoft) ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್(Software Engineer) ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ಮಾತನ್ನು ಕೇಳಿ ಅಚ್ಚರಿಗೊಂಡ ನಿಖಿಲ್ಗೆ ಮತ್ತೊಂದು ಮಾತನ್ನು ಕೇಳಿ ಅಶ್ಚರ್ಯ ಚಕಿತರಾಗಿದ್ದಾರೆ. ಹೌದು, ನೀವು ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು, ರಾಪಿಡೋ ಓಡಿಸುವ ಉದ್ದೇಶವೇನು ಎಂದು ಕೇಳಿದಾಗ, ನಾನು ರಾಪಿಡೋ ಓಡಿಸುತ್ತಿರುವುದು ಜನರನ್ನು ಮಾತನಾಡಿಸಲು ಮತ್ತು ಒಂದಿಷ್ಟು ವಿಚಾರಗಳನ್ನು ತಿಳಿಯಲು ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ನಿಖಿಲ್ ಮಾತನಾಡದೆ ಕೆಲ ಕಾಲ ನಿಶಬ್ದವಾಗಿ ಕುಳಿತ್ತಿದ್ದಾರೆ. ಇದು ಇವರೊಬ್ಬರ ಪರಿಸ್ಥಿತಿಯಲ್ಲ!

ಬದಲಾಗಿ ಬೆಂಗಳೂರಿನ ಪ್ರತಿಷ್ಠಿತ ಎಂಎನ್‌ಸಿಗಳಲ್ಲಿ(MNC) ಕೆಲಸ ಮಾಡುವ ವೃತ್ತಿಪರರು ಖುಷಿ ಸಿಗದೆ, ತಮ್ಮ ಜೀವನದ ಸಣ್ಣ ಸಂತೋಷಗಳನ್ನು ಹುಡುಕಲು ಇಂಥ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿರುವ ಅನೇಕ ನಿದರ್ಶನಗಳು ಉಂಟು. ಈ ಅನುಭವವನ್ನು ನಿಖಿಲ್ ಸೇಠ್ ಅವರು ತಮ್ಮ ಟ್ವಿಟ್ಟರ್(Tweeter) ಖಾತೆಯಲ್ಲಿ ತಮ್ಮ ಬೆಂಗಳೂರಿನ ಜೀವನದಲ್ಲಿನ ಒಂದು ವಿಚಿತ್ರ ಘಟನೆಯನ್ನು ಹಂಚಿಕೊಂಡಿದ್ದಾರೆ. ನಿಖಿಲ್ ಅವರು ಬಯಸಿದ ಸ್ಥಳಕ್ಕೆ ಪ್ರಯಾಣಿಸಲು ರಾಪಿಡೋ ಬೈಕ್ ಅನ್ನು ಬುಕ್ ಮಾಡಿದರು ಮತ್ತು ಚಾಲಕನೊಂದಿಗೆ ಸ್ನೇಹದಿಂದ ಮಾತನಾಡಿದರು.

ಮಾತಿನ ಭರಾಟೆಯಲ್ಲಿ ತಿಳಿದುಬಂದದ್ದು, ಅವರೊಬ್ಬರು ಮೈಕ್ರೋಸಾಫ್ಟ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಎಂಬುದು. ನಿಖಿಲ್ ಅವರ ಈ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅನೇಕ ನೆಟ್ಟಿಗರು ಈ ಒಂದು ಪೋಸ್ಟ್‌ಗೆ ಕಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

Exit mobile version