ಭ್ರೂಣ ಹತ್ಯೆ ಪ್ರಕರಣ: ಎಸ್ಐಟಿ ತನಿಖೆಗೆ ಒಪ್ಪಿಸಿ, ಆರೋಪಿಗಳನ್ನು ಗಲ್ಲಿಗೇರಿಸಿ: ಆರ್ ಅಶೋಕ್

Belagavi: ಭ್ರೂಣ ಹತ್ಯೆ ಪ್ರಕರಣವು ಕರ್ನಾಟಕದಾದ್ಯಂತ (RAshok about Feticide case) ಆತಂಕ ಸೃಷ್ಟಿಸಿದ್ದು, ತನಿಖೆಗೆ ಎಸ್ಐಟಿ (SIT) ತನಿಖೆಗೆ ನೀಡಿ ಎಂದು‌ ವಿರೋಧ ಪಕ್ಷದ ನಾಯಕ

ಆರ್.ಅಶೋಕ್ (R Ashok) ಆಗ್ರಹಿಸಿದ್ದಾರೆ. ಈಗಾಗಲೇ ಈ ಪ್ರಕರಣವನ್ನು ಸಿಐಡಿ ತನಿಖೆಗೆ‌ ನೀಡಲಾಗಿದ್ದು, ಆದರೆ‌ ಸಿಐಡಿಗಿಂತ (CID) ಎಸ್ಐಟಿಗೆ ನೀಡುವುದಲ್ಲದೆ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ

ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಭ್ರೂಣ ಹತ್ಯೆ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ್ದು, ಇಷ್ಟೆಲ್ಲಾ ಚರ್ಚೆಯಾದರೂ ಹೊಸಕೋಟೆಯಲ್ಲಿ 16 ವಾರಗಳ ಭ್ರೂಣ ಹತ್ಯೆ ಮಾಡಲಾಗಿದೆ.

ಕಾನೂನಿಗೆ ಎಷ್ಟು ಗೌರವ ಕೊಡ್ತಾರೆ? ಎಷ್ಟು ಬಲಾಢ್ಯರಿದ್ದಾರೆ? ಎಂದು ಅರ್ಥ (RAshok about Feticide case) ಆಗುತ್ತದೆ ಎಂದರು.

ಒಬ್ಬೊಬ್ಬ ವೈದ್ಯರು 300 ಭ್ರೂಣ ಹತ್ಯೆ


ಆರೋಗ್ಯ ಇಲಾಖೆಯಲ್ಲಿ (Health Department) 27 ವರ್ಷಗಳಲ್ಲಿ ಕೇವಲ 87 ಪ್ರಕರಣ ದಾಖಲಾಗಿದ್ದು, ಒಬ್ಬೊಬ್ಬ ವೈದ್ಯರು (Doctors) 300 ಭ್ರೂಣ ಹತ್ಯೆ ಮಾಡಿದ್ದು, ಇದೊಂದು ರೀತಿಯಲ್ಲಿ ಕೊಲೆಯಾಗಿದೆ.

ಇನ್ನು ಗಂಡು ಮಗ ಬೇಕು ಎಂಬುದು‌ ಒಂದು ಕಾರಣವಾದರೆ ವರದಕ್ಷಿಣೆ ಕೂಡಾ ಇದಕ್ಕೆ ಮುಖ್ಯ ಕಾರಣವಾಗ್ತಿದೆ ಎಂದು‌ ಹೇಳಿದರು.

ಈ ಪ್ರಕರಣದ ಹಿಂದೆ ದೊಡ್ಡ ಜಾಲ:


ಇದರ ಹಿಂದೆ ದೊಡ್ಡ ಜಾಲವಿದ್ದು, ಮೊದಲು ಕುಟುಂಬದಲ್ಲೇ ಮಹಿಳೆಗೆ ಟಾರ್ಚರ್‌ ನೀಡಲಾಗುತ್ತದೆ. ಬಳಿಕ ಏಜೆಂಟ್ ಹುಡುಕಿ ಆಲೆಮನೆಗೆ (Alemane) ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ (Scanning)

ಮಾಡಲಾಗುತ್ತದೆ. ಈ ಕೃತ್ಯದಲ್ಲಿ ವೈದ್ಯರೂ ಸೇರಿರುವುದು ಅಹಿತಕರ, ಅವರಿಗೆ ನಾಚಿಕೆ ಆಗಬೇಕು ಎಂದರು.

ಎಸ್ ಎಂ ಕೃಷ್ಣ (S M Krushna) ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಇಂತಹ ಘಟನೆ ಚರ್ಚೆ ಆಗಿತ್ತು. ಅಂದಿನಿಂದ ಇದು ಕಡಿಮೆಯಾಗಿಲ್ಲ. 2015-16 ರಲ್ಲಿ 1000 ಕ್ಕೆ 1029 ಹೆಣ್ಣುಮಕ್ಕಳು ‌ಇದ್ದರು

2019-20 ರಲ್ಲಿ 1000 ಕ್ಕೆ 797 ಹೆಣ್ಣು ಮಕ್ಕಳ ಅನುಪಾತ ಇದೆ ದಾವಣಗೆರೆಯಲ್ಲಿ. ಹಾಸನದಲ್ಲಿ (Hassan) 1000 ಗಂಡು ಮಕ್ಕಳಿಗೆ 870 ಹೆಣ್ಣು ಮಕ್ಕಳ ಅನುಪಾತ ಆಗಿದೆ ಎಂದು ವಿವರಿಸಿದರು.

ಮೈಸೂರು, (Mysore) ಮಂಡ್ಯ (Mandya) ಜಿಲ್ಲೆ ಸೇರಿದಂತೆ ಕೆಲವೆಡೆ ಇತ್ತೀಚೆಗೆ ಭಾರೀ ಸದ್ದು ಮಾಡಿದ್ದ ಭ್ರೂಣ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳ ಪ್ರಶ್ನೆಗಳಿಗೆ ಬುಧವಾರ ವಿಧಾನಸಭೆಯಲ್ಲಿ

ಉತ್ತರಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಅವರು, ಕರ್ನಾಟಕದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾರಿಯಲ್ಲಿರುವ ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂಬುದನ್ನು

ಒಪ್ಪಿಕೊಂಡಿದ್ದರು. ಇದಕ್ಕೆ ಹೊಸ ನೀತಿಯನ್ನು ಜಾರಿಗೆ ತರುವುದಾಗಿ ತಿಳಿಸಿದ್ದರು.

ನಕಲಿ ವೈದ್ಯರ ವಿರುದ್ಧ ಕ್ರಮ ಜರುಗಿಸಿ


ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮನ್ವಯತೆ ತರಬೇಕು. ನಕಲಿ ವೈದ್ಯರ ವಿರುದ್ಧ ದಾಳಿ ಮಾಡಲು ಆದೇಶ ಮಾಡಿದೆ ಆದರೆ ಎಂಪಿ ಎಂಎಲ್ ಎ ಗಳಿಂದಲೇ ಕಾಲ್ ಬಂದಿತ್ತು ನನಗೆ

ಎಂದರು. ನಕಲಿ ವೈದ್ಯರ ಸಂಖ್ಯೆ ನಾಲ್ಕೈದು ಸಾವಿರಕ್ಕೂ ‌ಹೆಚ್ಚಿದೆ. ಇದನ್ನು ಮಟ್ಟ ಹಾಕಬೇಕು ಎಂದರು.

ಇದನ್ನು ಓದಿ: ಲೋಕಸಭೆಗೆ ನುಗ್ಗಿದ ಇಬ್ಬರು ಕಿಡಿಗೇಡಿಗಳು: ಸಂಸದರತ್ತ ನುಗ್ಗಿ ಅಶ್ರುವಾಯು ಸಿಡಿಸಿದ ಅಪರಿಚಿತರು

Exit mobile version