ರೇಷನ್ ಕಾರ್ಡ್ ದೋಖಾ! ರೇಷನ್ ಕಾರ್ಡ್ ಬಳಕೆದಾರರ ಬ್ಯಾಂಕ್ ಖಾತೆಗೆ ಖನ್ನಾ ಹಾಕ್ತಿದ್ದಾರೆ ಖದೀಮರು

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರಿಗೆ ಮೋಸಗೊಳಿಸುವುದರಲ್ಲಿ ಪ್ರಳಯಾಂತಕರಾಗಿರುವ ವಂಚಕರು ಈಗ ರೇಷನ್ ಕಾರ್ಡ್ ದಾರರನ್ನು ಹೇಗೆಲ್ಲ (ration card scam) ಮೋಸಗೊಳಿಸುತ್ತಾರೆ ಮತ್ತು

ಇದರಿಂದ ಪಾರಾಗುವುದು ಹೇಗೆ ಎಂಬುದಕ್ಕೆ (ration card scam) ಇಲ್ಲಿದೆ ಮಹತ್ವದ ಮಾಹಿತಿ

ಗ್ಯಾರಂಟಿ ಯೋಜನೆಗಳು ಒಂದರ ಹಿಂದೊಂದು ಜಾರಿಯಾದಂತೆ ರೇಷನ್ ಕಾರ್ಡ್ ಗೆ (Ration Card) ಭಾರಿ ಮಹತ್ವದ ಬೇಡಿಕೆ ಬಂದಿದ್ದು, ಈಗಾಗಲೇ ರೇಷನ್ ಕಾರ್ಡ್ ಇರುವವರು ಹೊಸ ಪಡಿತರ

ಚೀಟಿಗೆ ಅರ್ಜಿ ಸಲ್ಲಿಸುವವರು ಹಾಗೂ ಅರ್ಜಿ ಸಲ್ಲಿಸಬೇಕೆಂದು ಕಾದು ಕುಳಿತವರನ್ನು ಟಾರ್ಗೆಟ್ (Target) ಮಾಡಿ ವಂಚಕರು ಕಳ್ಳಾಟ ಆಡುತ್ತಿದ್ದಾರೆ.

ಕೆಲವು ದಲ್ಲಾಳಿಗಳು ಹೊಸ ರೇಷನ್ ಕಾರ್ಡ್ ಮಾಡಿಸಿಕೊಡುವುದಾಗಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಎಲ್ಲೆಡೆ ಕೇಳಿ ಬರುತ್ತಿದೆ. ತಿಳಿಯಬೇಕಾದ ವಿಷಯವೆಂದರೆ ಹೊಸ ಪಡಿತರ ಕಾರ್ಡ್ ಗೆ

ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವ ಆಹಾರ ಇಲಾಖೆಯ ಪೋರ್ಟಲ್ (Portal) ವರ್ಷಗಳಿಂದ ಲಾಕ್ ಆಗಿದ್ದು, ಇದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶವಿರುವುದಿಲ್ಲ.

ಕೆಲವರು ನಿಮಗೆ ತಕ್ಷಣ ಹೊಸ ರೇಷನ್ ಕಾರ್ಡ್ (Ration Card) ಮಾಡಿಸಿ ಕೊಡುತ್ತೇನೆ ಎಂದು ನಂಬಿಸಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾದು ಕೂತವರಿಂದ ಹಣ ದೋಚುತ್ತಿದ್ದಾರೆಂದು

ಹೇಳಲಾಗುತ್ತಿದೆ. ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ಆದೇಶ ಹೊರಡಿಸದೇ ಅರ್ಜಿ ಸಲ್ಲಿಕೆಗಾಗಿ ಇರುವ ಆಹಾರ ಇಲಖೆಯ ಪೋರ್ಟಲ್ ಓಪನ್ (Portal Open) ಆಗದೇ ಇವರೆಲ್ಲ ಹೇಗೆ ಹೊಸ

ಪಡಿತರ ಚೀಟಿಯನ್ನು ಮಾಡಿಸಿಕೊಡಲು ಸಾಧ್ಯ ಈ ಸತ್ಯವನ್ನು ತಿಳಿದುಕೊಂಡರೆ ವಂಚನೆಕಾರರಿಂದ ಬಚಾವ್ ಆಗಬಹುದು.

ಅಲ್ಲದೆ ಹೈಟೆಕ್ (Higtech) ವಂಚಕರು ಕೊಲವೊಮ್ಮೆ ಬ್ಯಾಂಕ್ ಅಧಿಕಾರಿಯಾಗಿಯೋ ಅಥವಾ ಆಹಾರ ಇಲಾಖೆಯ ಅಧಿಕಾರಿಯಾಗಿಯೋ ಫೋನ್ ಕರೆ ಮಾಡಿ ಪಡಿತರ ಚೀಟಿದಾರರಿಗೆ ಪಂಗನಾಮ

ಹಾಕುತ್ತಿದ್ದಾರೆ. ಹಾಗಾಗಿ ನೀವು ಯಾವುದೇ ತರಹದ ವಂಚನೆಗೆ ಬಲಿಯಾಗದಂತೆ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಒಳ್ಳೆಯದು.

ಮತ್ತು ಪಡಿತರ ಚೀತಿಯ ಹೆಸರಿನಲ್ಲಿ ನಿಮಗೇನಾದರೂ ಕರೆಗಳು ಬಂದರೆ ಆ ಕರೆಯಲ್ಲಿ ನಿಮಗೆ ಬ್ಯಾಂಕ್ ಖಾತೆ ಸಂಖ್ಯೆ, ಎಟಿಎಂ ಕಾರ್ಡ್ (ATM Card) ಸಂಖ್ಯೆ , ಸಿವಿವಿ ( CVV) ಅಥವಾ

ಒಟಿಪಿಯಂತ (OTP) ಹಲವಾರು ಮಾಹಿತಿಗಳನ್ನು ಕೇಳಿದರೆ ಇಂದಿಗೂ ಕೊಡಬೇಡಿ. ಅಲ್ಲದೆ ಸಂಬಂಧಪಟ್ಟ ಯಾವುದೇ ಅಧಿಕಾರಿ ಈ ರೀತಿಯ ಮಾಹಿತಿಗಳನ್ನು ಕೇಳುವುದಿಲ್ಲ.

ಹಲವು ವಂಚಕರು ನಕಲಿ ಕೆವೈಸಿ (KYC) ಹೆಸರಲ್ಲಿ ರೇಷನ್ ಕಾರ್ಡ್ ದಾರರಿಗೆ ಪಂಗನಾಮ ಹಾಕುತ್ತಿದ್ದು, ಕೆವೈಸಿ ಬಗ್ಗೆ ಕೇಳುವ ಮೂಲಕ ಜನರಿಗೆ ಲಿಂಕ್ ಕಳಿಸಲಾಗುತ್ತದೆ. ಈ ರೀತಿ ಮಾಡುವುದರಿಂದ

ಸುಲಭವಾಗಿ ನಿಮ್ಮ ಮೊಬೈಲ್ (Mobile) ಅನ್ನು ಹ್ಯಾಕ್ (Hack) ಮಾಡಬಹುದಲ್ಲದೆ ಡಾಟಾವನ್ನು (Data) ಕಲೆಕ್ಟ್ ಮಾಡಬಹುದು. ಆದರೆ ಈ ನಕಲಿ ಲಿಂಕ್ ಮೇಲೆ ಯಾವ ಕಾರಣಕ್ಕೂ ಕ್ಲಿಕ್

(Click) ಮಾಡಬೇಡಿ ಪಡಿತರ ಚೀಟಿಗೆ ಸಂಬಂಧಿಸಿದಂತೆ ಏನೇ ಅಪ್ಡೇಟ್ ಇದ್ದರೂ ಸರ್ಕಾರ ಘೋಷಣೆ ಮಾಡುತ್ತದೆ.

ಮತ್ತು ಮಾಧ್ಯಮಗಳ ಮೂಲಕ ಇದರ ಕುರಿತು ಎಲ್ಲ ಡೀಟೇಲ್ (Detail) ಗಳನ್ನೂ ನೀಡುತ್ತದೆ. ಈ ವಿಷಯವಾಗಿ ವೈಯಕ್ತಿಕವಾಗಿ ಫೋನ್ ಕಾಲ್ (Phone Call) ಮಾಡಿ ಯಾರು ಕೂಡ ನಿಮಗೆ

ಉಪಕಾರ ಮಾಡಲು ಬರುವುದಿಲ್ಲ ಹಾಗಾಗಿ ಇದನ್ನು ನೆನಪಿನಲ್ಲಿಟ್ಟುಕೊಂಡರೆ ಒಳ್ಳೆಯದು.

ಭವ್ಯಶ್ರೀ ಆರ್.ಜೆ

Exit mobile version