ರವೀಂದ್ರ ಮ್ಹಾತ್ರೆ ಹಂತಕ ಯಾರು? ನ್ಯೂಸ್ 9 ಪ್ಲಸ್‌ನ ತನಿಖಾ ಸಾಕ್ಷ್ಯಚಿತ್ರ ಬಿಚ್ಚಿಟ್ಟ ಸತ್ಯಗಳು

Delhi: ಬರ್ಮಿಂಗ್ ಹ್ಯಾಮ್ (Birmingham Ham) ಭಾರತದ ಕಾನ್ಸುಲೇಟ್‌ನಲ್ಲಿ ಸಹಾಯಕ ಕಮಿಷನರ್ (Ravindra Mhatre Murder Case) ಆಗಿದ್ದ ರವೀಂದ್ರ ಮ್ಹಾತ್ರೆ ಅವರನ್ನು ಫೆಬ್ರವರಿ

3, 1984ರಂದು ಅಪಹರಿಸಲಾಗಿತ್ತು. ಅಜ್ಞಾತ ಗುಂಪು, ಕಾಶ್ಮೀರ ಲಿಬರೇಶನ್ ಆರ್ಮಿ (Kashmira Liberation Army) ಅಪಹರಣದ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದು, ಆಮೇಲೆ

ನಡೆದಿದ್ದು ಏನು? ರವೀಂದ್ರ ಮ್ಹಾತ್ರೆ ಹಂತಕರು ಯಾರು?

ಭಾರತದ ಮೊದಲ ಓಟಿಟಿ ನ್ಯೂಸ್ 9 ಪ್ಲಸ್‌ನ (OTT News 9 Plus) ತನಿಖಾ ಸಾಕ್ಷ್ಯಚಿತ್ರವು ಮೊದಲ ಬಾರಿಗೆ ‘ಮರ್ಡರ್ ಆಫ್ ಆನ್ ಇಂಡಿಯನ್ ಡಿಪ್ಲೊಮ್ಯಾಟ್’ (Murder of an Indian Diplomat)

ಎಂಬ ಶೀರ್ಷಿಕೆಯಡಿ ಯುನೈಟೆಡ್ ಕಿಂಗ್‌ಡಂನ ಬರ್ಮಿಂಗ್‌ಹ್ಯಾಮ್‌ನಲ್ಲಿ ಹತ್ಯೆಗೀಡಾದ ರವೀಂದ್ರ ಮ್ಹಾತ್ರೆ ಹಂತಕನ ಮಾಹಿತಿ ಬಹಿರಂಗಪಡಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ಬ್ರಿಟನ್‌ (America, Canada, Australia and Britain)ನಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ಖಲಿಸ್ತಾನ ಪರ

ಪ್ರತ್ಯೇಕತಾವಾದಿಗಳಿಂದ ಬೆದರಿಕೆಗಳು ಬರುತ್ತಿದ್ದು, ವಿದೇಶದಲ್ಲಿರುವ ಭಾರತೀಯ ರಾಜತಾಂತ್ರಿಕರ ವಿರುದ್ಧ “ಬೆದರಿಕೆಯ ವಾತಾವರಣ” ವನ್ನು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್

(S Jaishankar) ಖಂಡಿಸಿದ್ದಾರೆ.

ನ್ಯೂಸ್ 9 ಪ್ಲಸ್, ಬೆದರಿಕೆಯ ಜಾಡನ್ನು ಅನುಸರಿಸಲು ನಿರ್ಧರಿಸಿದ್ದು, ಯುಕೆಯಲ್ಲಿ ಭಾರತೀಯ ರಾಜತಾಂತ್ರಿಕನ 40 ವರ್ಷದಿಂದ ಬಗೆಹರಿಯದ ಹತ್ಯೆ ಪ್ರಕರಣದ ತನಿಖೆ ನಡೆಸಿತು. ಫೆಬ್ರವರಿ

3, 1984 ರಂದು ಬರ್ಮಿಂಗ್ಹ್ಯಾಮ್‌ನಲ್ಲಿರುವ ಭಾರತದ ಕಾನ್ಸುಲೇಟ್‌ನಲ್ಲಿ ಸಹಾಯಕ ಕಮಿಷನರ್ ರವೀಂದ್ರ ಮ್ಹಾತ್ರೆ (Ravindra Mhatre) ಅವರನ್ನು ಅಪಹರಿಸಲಾಯಿತು.

ಅಜ್ಞಾತ ಗುಂಪು, ಕಾಶ್ಮೀರ ಲಿಬರೇಶನ್ ಆರ್ಮಿ (KLA) ಅಪಹರಣದ ಹೊಣೆಗಾರಿಕೆಯನ್ನು ವಹಿಸಿಕೊಂಡಿದೆ. ಇದು ದೆಹಲಿಯ ತಿಹಾರ್ ಜೈಲಿ (Tihar Jail) ನಲ್ಲಿರುವ ಭಯೋತ್ಪಾದಕ ಮಕ್ಬೂಲ್ ಬಟ್,

ಆತನ ಇಬ್ಬರು ಸಹಚರರು ಮತ್ತು ಇತರ ಏಳು ಭಯೋತ್ಪಾದಕರನ್ನು ಬಿಡುಗಡೆ ಮಾಡಬೇಕು ಮತ್ತು 1 ಮಿಲಿಯನ್ (Ravindra Mhatre Murder Case) ಪೌಂಡ್ ಹಣ ನೀಡಬೇಕು ಎಂದು ಒತ್ತಾಯಿಸಿದೆ.

ಯುಎಸ್ ಪೊಲೀಸರು ಕೆಲವು ಅಪಹರಣಕಾರರನ್ನು ಬಂಧಿಸಿ ಆರೋಪ ಹೊರಿಸಿದರೂ ಮುಖ್ಯ ಸಂಚುಕೋರ ಮತ್ತು ಕೊಲೆಗಾರನನ್ನು ಎಂದಿಗೂ ಬಂಧಿಸಲಾಗಿಲ್ಲ. ಫೆಬ್ರವರಿ 5 ರಂದು ಮ್ಹಾತ್ರೆ ಅವರ ದೇಹವು

ಅವರ ತಲೆಯ ಮೇಲೆ ಎರಡು ಗುಂಡಿನ ಗಾಯಗಳೊಂದಿಗೆ ಪತ್ತೆಯಾಗಿದೆ. 40 ವರ್ಷಗಳ ನಂತರ ನ್ಯೂಸ್ 9 ಪ್ಲಸ್ ತನಿಖೆಯು ಕೊಲೆಗಾರ ಮತ್ತು ಅವನ ಸ್ಥಳವನ್ನು ಪತ್ತೆಹಚ್ಚಿದೆ.

ಇದನ್ನು ಓದಿ: ಬೆಸ್ಕಾಂನಲ್ಲಿ ಡಿಪ್ಲೊಮ, ಬಿಇ ಪಾಸಾದವರಿಗೆ ಭರ್ಜರಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

Exit mobile version