• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ರೆಪೋ ದರ ಹೆಚ್ಚಿಸಿದ ಆರ್‌ಬಿಐ ; ಬ್ಯಾಂಕ್ ಸಾಲ ಇನ್ನೂ ದುಬಾರಿ!

Mohan Shetty by Mohan Shetty
in ದೇಶ-ವಿದೇಶ, ಪ್ರಮುಖ ಸುದ್ದಿ
ರೂ. ಮೌಲ್ಯ ಕುಸಿಯುತ್ತಿಲ್ಲ, ಬದಲಾಗಿ ಅದು ತನ್ನ ಸ್ವಾಭಾವಿಕ ಹಾದಿಯನ್ನು ಕಂಡುಕೊಳ್ಳುತ್ತಿದೆ : ನಿರ್ಮಲಾ ಸೀತಾರಾಮನ್
0
SHARES
0
VIEWS
Share on FacebookShare on Twitter

ಆರ್‌ಬಿಐನ(RBI) 2 ದಿನಗಳ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ(Repo Rate) ಶೇಕಡಾ 0.50 ಅಥವಾ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳವನ್ನು ಘೋಷಿಸಿದೆ. ಈ ಘೋಷಣೆಯ ನಂತರ ಬ್ಯಾಂಕ್ EMI ಹೊರೆ ಹೆಚ್ಚಾಗುತ್ತದೆ. 6 ಜನರ ನೇತೃತ್ವದ ಹಣಕಾಸು ನೀತಿ ಸಮಿತಿಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಹಿನ್ನೆಲೆ ಸದ್ಯದ ರೆಪೋ ದರವು ಶೇಕಡಾ 5.40 ಕ್ಕೆ ಏರಿಕೆಯಾಗಿದೆ. 2019 ರಲ್ಲಿ ಅಂದರೆ ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ ಇದ್ದ ರೆಪೋ ದರದ ಮಟ್ಟಕ್ಕೆ ಹೆಚ್ಚಳವಾಗಿದೆ.

ಹೆಚ್ಚಿನ ಹಣದುಬ್ಬರವು, ಹಣದುಬ್ಬರದ ನಿರೀಕ್ಷೆಗಳನ್ನು ಅಸ್ಥಿರಗೊಳಿಸಬಹುದು ಮತ್ತು ಮಧ್ಯಮ ಅವಧಿಯ ಬೆಳವಣಿಗೆಯನ್ನು ಹಾನಿಗೊಳಿಸುತ್ತದೆ ಎಂದು ಎಂಪಿಸಿ ಒತ್ತಿ ಹೇಳಿದೆ’’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್(RBI Governer) ಶಕ್ತಿಕಾಂತ ದಾಸ್(Shakthikanth Das) ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಭಾರತೀಯ ಆರ್ಥಿಕತೆಯು ಹಣದುಬ್ಬರದ ಸವಾಲುಗಳನ್ನು ಎದುರಿಸುತ್ತಿದ್ದು,

https://fb.watch/eO11mQMzOm/

ಅದನ್ನು ನಿಯಂತ್ರಣಕ್ಕೆ ತರುವ ಅಗತ್ಯವಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸಲು ಕೆಲವು ನಿಲುವನ್ನು ಹಿಂತೆಗೆದುಕೊಳ್ಳುವತ್ತ ಗಮನ ಹರಿಸಲು ಹಣಕಾಸು ನೀತಿ ಸಮಿತಿಯು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ನಮ್ಮ ಆರ್ಥಿಕತೆಯೂ ವೇಗವಾಗಿ ಪ್ರಗತಿ ಸಾಧಿಸಲಿದೆ ಎಂದು ಐಎಂಎಫ್‌ನಿಂದ ಹಿಡಿದು ಅನೇಕ ಸಂಸ್ಥೆಗಳು ಈಗಾಗಲೇ ಭವಿಷ್ಯ ನುಡಿದಿವೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ರೆಪೊ ದರದ ಜೊತೆಗೆ, ಆರ್‌ಬಿಐ ಎಸ್‌ಡಿಎಫ್ ಅನ್ನು ಕೂಡಾ ಶೇಕಡಾ 4.65 ರಿಂದ ಶೇಕಡಾ 5.15 ಕ್ಕೆ ಹೆಚ್ಚಿಸಿದೆ.

ಇದಲ್ಲದೇ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರವನ್ನು ಶೇ. 5.15 ರಿಂದ ಶೇ. 5.65ಕ್ಕೆ ಹೆಚ್ಚಿಸಿದೆ. ಆರ್‌ಬಿಐ ಈಗ ಸತತ ಮೂರನೇ ಬಾರಿಗೆ ರೆಪೋ ದರ ಹೆಚ್ಚಳ ಮಾಡಿದೆ. ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸುವ ಸಲುವಾಗಿ ಆರ್ ಬಿಐ ಈ ನಿರ್ಧಾರ ಕೈಗೊಂಡಿದೆ. ಆರ್‌ಬಿಐ, ರೆಪೊ ದರವನ್ನು ಕಳೆದ ಮೇ ತಿಂಗಳಲ್ಲಿ ಶೇ.0.40 ಹಾಗೂ ಜೂನ್‌ನಲ್ಲಿ ಶೇ. 0.50 ಹೆಚ್ಚಳ ಮಾಡಿತ್ತು. ರೆಪೋ ದರ ಹೆಚ್ಚಳದಿಂದ ಗೃಹ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಮತ್ತಷ್ಟು ಹೆಚ್ಚಳವಾಗಲಿದೆ.

ಇದನ್ನೂ ಓದಿ : https://vijayatimes.com/women-thrashed-by-security-guard/

ಹಾಗಾದರೆ, ರೆಪೋ ದರ ಎಂದರೆ ಏನು? :
ರೆಪೋ ದರ ಎನ್ನುವುದು ಬ್ಯಾಂಕ್‌ಗೆ ಆರ್‌ಬಿಐ ಸಾಲವನ್ನು ನೀಡುವ ದರವಾಗಿದೆ ಮತ್ತು ಇದರ ಆಧಾರದ ಮೇಲೆ ಬ್ಯಾಂಕ್‌ಗಳು ಗ್ರಾಹಕರಿಗೆ ಸಾಲವನ್ನು ನೀಡುತ್ತವೆ. ಆದರೆ ರಿವರ್ಸ್ ರೆಪೊ ದರ ಅಂದರೆ ಬ್ಯಾಂಕ್‌ಗಳ ಠೇವಣಿಗಳ ಮೇಲೆ ಆರ್‌ಬಿಐ ನೀಡುವ ಬಡ್ಡಿಯಾಗಿರುತ್ತದೆ. ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿದಾಗ, ಬ್ಯಾಂಕ್‌ಗಳ ಮೇಲಿನ ಹೊರೆ ಹೆಚ್ಚಾಗುತ್ತದೆ. ಬ್ಯಾಂಕ್ ನಿಂದ ಪಡೆದಿರುವ ಸಾಲದ ಮೇಲಿನ ಬಡ್ಡಿ ಕೂಡಾ ಅಧಿಕವಾಗುತ್ತದೆ.

  • ಪವಿತ್ರ
Tags: IndiarbiRepo Rates

Related News

ಮುಖದ ಸೌಂದರ್ಯ ಇನ್ನಷ್ಟು ಕಾಂತಿಯುತವಾಗಬೇಕೇ ಹರಳೆಣ್ಣೆ ಬಳಸಿ, ಇಲ್ಲಿದೆ ಸಂಪೂರ್ಣ ಮಾಹಿತಿ.
ಆರೋಗ್ಯ

ಮುಖದ ಸೌಂದರ್ಯ ಇನ್ನಷ್ಟು ಕಾಂತಿಯುತವಾಗಬೇಕೇ ಹರಳೆಣ್ಣೆ ಬಳಸಿ, ಇಲ್ಲಿದೆ ಸಂಪೂರ್ಣ ಮಾಹಿತಿ.

October 2, 2023
ಜಿಪಿಎಸ್ ಬಳಸಿ ನದಿಗೆ ಬಿದ್ದ ಕಾರು ಕೇರಳದಲ್ಲಿ ನಡೆದ ದುರ್ಘಟನೆ: ಇಬ್ಬರು ವೈದ್ಯರ ಸಾವು
ದೇಶ-ವಿದೇಶ

ಜಿಪಿಎಸ್ ಬಳಸಿ ನದಿಗೆ ಬಿದ್ದ ಕಾರು ಕೇರಳದಲ್ಲಿ ನಡೆದ ದುರ್ಘಟನೆ: ಇಬ್ಬರು ವೈದ್ಯರ ಸಾವು

October 2, 2023
ಬಿಯರ್ ಬೇಡ ನೀರು ಬೇಕು: ಹೊಸ ಸಾರಾಯಿ ಅಂಗಡಿ ತೆರೆಯುವುದಕ್ಕೆ ರಾಜ್ಯಾದ್ಯಂತ ಮಹಿಳೆಯರ ಪ್ರತಿಭಟನೆ
ಪ್ರಮುಖ ಸುದ್ದಿ

ಬಿಯರ್ ಬೇಡ ನೀರು ಬೇಕು: ಹೊಸ ಸಾರಾಯಿ ಅಂಗಡಿ ತೆರೆಯುವುದಕ್ಕೆ ರಾಜ್ಯಾದ್ಯಂತ ಮಹಿಳೆಯರ ಪ್ರತಿಭಟನೆ

October 2, 2023
ಸ್ಮಾರ್ಟ್‌ಫೋನನ್ನು EMI ನಲ್ಲಿ ಖರೀದಿಸುವ ಮುನ್ನ ಎಚ್ಚರಿಕೆ: ಇದೊಂದು ಟ್ರ್ಯಾಪ್
ಡಿಜಿಟಲ್ ಜ್ಞಾನ

ಸ್ಮಾರ್ಟ್‌ಫೋನನ್ನು EMI ನಲ್ಲಿ ಖರೀದಿಸುವ ಮುನ್ನ ಎಚ್ಚರಿಕೆ: ಇದೊಂದು ಟ್ರ್ಯಾಪ್

October 2, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.