RBI ನ ‘current ಅಕೌಂಟ್ʼ ನಿಯಮದಲ್ಲಿ ಬದಲಾವಣೆ

ನವದೆಹಲಿ,ಡಿ.16: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ಚಾಲ್ತಿ ಖಾತೆ ನಿಯಮಗಳಲ್ಲಿ ಪರಿಹಾರ ಘೋಷಿಸಿದ್ದು, ಇಂದಿನಿಂದಲೇ ಹೊಸ ನಿಯಮಗಳು ಜಾರಿಗೆ ಬಂದಿವೆ. ಹೊಸ ನಿಯಮಗಳ ಪ್ರಕಾರ, ಆಗಸ್ಟ್ 6ರಂದು ವಾಣಿಜ್ಯ ಬ್ಯಾಂಕ್ ಗಳು ಮತ್ತು ಪೇಮೆಂಟ್ ಬ್ಯಾಂಕ್ ಗಳಿಗೆ ರಿಸರ್ವ್ ಬ್ಯಾಂಕ್ ಸುತ್ತೋಲೆ ಹೊರಡಿಸಿದ್ದು, ಚಾಲ್ತಿ ಖಾತೆ ಬಗ್ಗೆ ಕೆಲವು ಅಗತ್ಯ ಸೂಚನೆಗಳನ್ನ ನೀಡಲಾಗಿದೆ. ಆದರೆ ಈಗ ಅನೇಕ ಖಾತೆಗಳು ಈ ನಿಯಮಗಳಿಂದ ಮುಕ್ತಿಯನ್ನ ಹೊಂದಿವೆ.

ಆಗಸ್ಟ್ 6ರಂದು ರಿಸರ್ವ್ ಬ್ಯಾಂಕ್ ಸುತ್ತೋಲೆ ಹೊರಡಿಸಿದ್ದು, ಇದರಲ್ಲಿ ಆರ್ ಬಿಐ ಹಲವು ಗ್ರಾಹಕರಿಗೆ ಚಾಲ್ತಿ ಖಾತೆ ತೆರೆಯದಂತೆ ನಿರ್ಬಂಧ ಹೇರಿದೆ ಎಂದು ತಿಳಿಸಿದೆ. ಬ್ಯಾಂಕಿಂಗ್ ವ್ಯವಸ್ಥೆಯಿಂದ ನಗದು ಅಥವಾ ಓವರ್ ಡ್ರಾಫ್ಟ್ ರೂಪದಲ್ಲಿ ಸಾಲ ಸೌಲಭ್ಯ ಪಡೆದ ಗ್ರಾಹಕರಿಗೆ ಅನ್ವಹಿಸುತ್ತದೆ. ಅಲ್ಲದೆ, ಹೊಸ ಸುತ್ತೋಲೆಯ ಪ್ರಕಾರ, ಗ್ರಾಹಕರು ತಾವು ಸಾಲ ಪಡೆಯುವ ಅದೇ ಬ್ಯಾಂಕಿನಲ್ಲಿ ತಮ್ಮ ಚಾಲ್ತಿ ಖಾತೆ ಅಥವಾ ಓವರ್ ಡ್ರಾಫ್ಟ್ ಖಾತೆಯನ್ನು ತೆರೆಯಬೇಕಾಗುತ್ತದೆ.

ಬ್ಯಾಂಕ್ʼನಿಂದ 50 ಕೋಟಿ ರೂಪಾಯಿಗೂ ಹೆಚ್ಚು ಸಾಲ ಪಡೆದ ಗ್ರಾಹಕರಿಗೆ ಈ ನಿಯಮ ಅನ್ವಯವಾಗಲಿದೆ. ಒಂದು ಬ್ಯಾಂಕ್ʼನಿಂದ ಸಾಲ ಪಡೆದ ಗ್ರಾಹಕರು ಮತ್ತೊಂದು ಬ್ಯಾಂಕ್ʼಗೆ ಹೋಗಿ ಚಾಲ್ತಿ ಖಾತೆ ತೆರೆಯುವುದನ್ನ ಹಲವು ಬಾರಿ ನೋಡಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಈ ಮೂಲಕ ಕಂಪನಿಯ ನಗದು ಹರಿವನ್ನ ಪತ್ತೆ ಹಚ್ಚಲು ಸಾಕಷ್ಟು ತೊಂದರೆಗಳು ಎದುರಾಗುತ್ತಿವೆ. ಆದ್ದರಿಂದ, ಬೇರೆ ಕಡೆಯಿಂದ ನಗದು ಸಾಲ ಅಥವಾ ಓವರ್ ಡ್ರಾಫ್ಟ್ ಸೌಲಭ್ಯ ಪಡೆದ ಗ್ರಾಹಕರ ಚಾಲ್ತಿ ಖಾತೆಯನ್ನ ಯಾವುದೇ ಬ್ಯಾಂಕ್ ತೆರೆಯಬಾರದು ಎಂದು ಆರ್ ಬಿಐ ಸುತ್ತೋಲೆ ಹೊರಡಿಸಿದೆ.

ಬ್ಯಾಂಕುಗಳು ಕೂಡ ಈ ಅಂಶಗಳನ್ನ ಗಮನದಲ್ಲಿಟ್ಟುಕೊಳ್ಳಬೇಕು: ಚಾಲ್ತಿ ಖಾತೆ ತೆರೆಯುವ ವಿಚಾರದಲ್ಲಿ ಸಡಿಲಿಕೆ ನೀಡುವ ಜತೆಗೆ ಗ್ರಾಹಕರಿಗೆ ಆರ್ ಬಿ ಐ ಎಚ್ಚರಿಕೆ ನೀಡಿದೆ. ಈ ರಿಯಾಯಿತಿಗಳನ್ನ ಷರತ್ತುಗಳೊಂದಿಗೆ ಮಾತ್ರ ನೀಡಲಾಗುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಆದ್ದರಿಂದ ಬ್ಯಾಂಕ್ ಕೂಡ ಇದರ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಇದನ್ನು ಹೊರತುಪಡಿಸಿ, ಬ್ಯಾಂಕ್ ಕೂಡ ಇದರ ಮೇಲ್ವಿಚಾರಣೆ ಮಾಡಲಿದೆ. ನಗದು ಸಾಲ ಮತ್ತು ಓವರ್ ಡ್ರಾಫ್ಟ್ ಮೇಲೆ ನಿಯಮಿತವಾಗಿ ನಿಗಾ ಇಡುವಂತೆ ಬ್ಯಾಂಕ್ ಗಳಿಗೆ ಆರ್‌ಬಿಐ ನಿರ್ದೇಶನ ನೀಡಿದೆ.

Exit mobile version