IPL 2024 ರಿಂದ RCB ಹೊರಗೆ: ಸೋಲಿಗೆ ಕಾರಣ ತಿಳಿಸಿದ ನಾಯಕ ಡುಪ್ಲೆಸಿಸ್..!

Ahmedabad: ಬುಧವಾರ ಅಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದ ಐಪಿಎಲ್ 17ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಆರ್.ಸಿ.ಬಿಯನ್ನು ನಾಲ್ಕು ವಿಕೆಟ್ ಗಳಿಂದ ಸೋಲಿಸಿತು. ಈ ಸೋಲಿನ ನಂತರ ಆರ್ಸಿಬಿ ತಂಡವು ಹೊರಗೆ ಬಿದ್ದು, ‘ಈ ಸಲವು ಕಪ್ ನಮ್ಮದಲ್ಲ‌‌’ ಎಂದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.. ಇತ್ತ ರಾಜಸ್ತಾನ್ ತಂಡವು ಗೆಲ್ಲುವ ಮೂಲಕ ಮೇ 24 ರಂದು ನಡೆಯುವ ಕ್ಯಾಲಿಫೈರ್ 2 ಪಂದ್ಯದಲ್ಲಿ SRH ತಂಡದೊಂದಿಗೆ ಫೈನಲ್ ಪ್ರವೇಶಿಸಲು ಸೆಣಸಾಟ ನಡೆಸಲಿದೆ…

RCB

ಟಾಸ್ ಗೆದ್ದು ಬಾಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡವು ಆರ್ಸಿಬಿ ತಂಡವನ್ನು ಕಡಿಮೆ ರನ್ (172)ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು.ಬೆಂಗಳೂರು ಪರ ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ 33, ರಜತ್ ಪಟ್ಟಿದಾರ್ 34, ಲೋಮರೋರ್ 32 ರನ್ ಗಳನ್ನು ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ ಗಳು ಅಷ್ಟೊಂದು ಉತ್ತಮ ಪ್ರದರ್ಶನ ನೀಡಲಿಲ್ಲ. ರಾಜಸ್ಥಾನ್ ಪರ ಬಾಲಿಂಗ್ ನಲ್ಲಿ ಆವೇಶ್ ಖಾನ್ 3 ವಿಕೆಟ್, ಆರ್ ಅಶ್ವಿನ್ 2 ವಿಕೆಟ್, ಬೋಲ್ಟ್, ಸಂದೀಪ್ ಶರ್ಮ, ಚಹಲ್ (Boult, Sandeep Sharma, Chahal) ತಲಾ 1 ವಿಕೆಟ್ ಪಡೆದು ಆರ್ ಸಿ ಬಿ ಬ್ಯಾಟ್ಸ್ಮನ್ (RCB Batsman)ಗಳಿಗೆ ಸಿಂಹ ಸ್ವಪ್ನರಾದರು…

ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡದ ಬ್ಯಾಟ್ಸ್ಮನ್ ಗಳಲ್ಲಿ ಜೈಶ್ವಾಲ್ 45, ರಿಯಾನ್ ಪರಾಗ್ 36, ಹೆಟ್ಮಾಯರ್ 26, ಪೋವೆಲ್ 16 ರನ್ ಗಳನ್ನು ಗಳಿಸಿ ಉತ್ತಮ ಪ್ರದರ್ಶನದೊಂದಿಗೆ ರಾಜಸ್ಥಾನದ ಗೆಲುವಿಗೆ ಕಾರಣರಾದರು. ಈ ಮೂಲಕ ರಾಜಸ್ಥಾನ ತಂಡ ಎರಡನೇ ಕ್ವಾಲಿಫೈಯರ್ ಗೆ ಪ್ರವೇಶ ನೀಡಿದೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಬೆಂಗಳೂರು ತಂಡದ ನಾಯಕ ಪಾಪ್ ಡುಪ್ಲೆಸ್ಸಿಸ್- “ಇಬ್ಬನಿ ಬಂದ ಕಾರಣ ನಾವು ಉತ್ತಮ ಟಾರ್ಗೆಟ್ ನೀಡುವಲ್ಲಿ ವಿಫಲರಾದೆವು. ಉತ್ತಮ ಸ್ಪರ್ಧೆ ನೀಡಲು ನಮಗೆ ಇನ್ನೂ ರನ್ ಗಳ ಅಗತ್ಯವಿತ್ತು. ಒಳ್ಳೆ ಸ್ಕೋರ್ (Score)ಗೆ 20 ರನ್ ಗಳ ಕೊರತೆ ಇತ್ತು ಎಂದು ಭಾವಿಸುತ್ತೇನೆ. ನಮ್ಮ ಆಟಗಾರರು ಚೆನ್ನಾಗಿಯೇ ಹೋರಾಡಿದ್ದಾರೆ, ಅವರಿಗೆ ಕ್ರೆಡಿಟ್ ನೀಡಲೇಬೇಕು. ಇಬ್ಬನಿ ವಾತಾವರಣದಿಂದ ತೊಂದರೆ ಆದರೂ ಸಹ ನಮ್ಮ ಪ್ರದರ್ಶನದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಎಂದರು. ಒಂದು ಹಂತದಲ್ಲಿ ನಾವು ಕೊನೆಯ ಸ್ಥಾನದಲ್ಲಿದ್ದೆವು ಆದರೆ ಸತತ 6 ಪಂದ್ಯಗಳನ್ನು ಗೆದ್ದು, comeback ಮಾಡಿ ಎಲಿಮಿನೇಟರ್ ಪಂದ್ಯಕ್ಕೆ ಪ್ರವೇಶ ಪಡೆದಿದ್ದೆವು” ಎಂದು ತಮ್ಮ ತಂಡದ ಬಗ್ಗೆ ಹೆಮ್ಮೆ ಪಟ್ಟರು…

ಇದೇ ವೇಳೆ ಮಾತನಾಡಿದ ಗೆಲುವಿನ ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson) – “ಇಂದು ನಾವು ಪಿಲ್ಡಿಂಗ್, ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ನೀಡಿದ ಪ್ರದರ್ಶನ ನನಗೆ ನಿಜವಾಗಿಯೂ ಸಂತೋಷ ತಂದಿದೆ. ಬಾಲರ್ ಗಳಿಗೆ ಕ್ರೆಡಿಟ್ ಸಲ್ಲಬೇಕು. ಕೋಚ್ ಸಂಗಾಕಾರ ಮತ್ತು ಬೌಲಿಂಗ್ ಕೋಚ್ ಶಾನ್ ಬಾಂಡ್ ಅವರಿಗೂ ಕ್ರೆಡಿಟ್ ಸಲ್ಲುತ್ತದೆ. ಅಶ್ವಿನ್,ಬೋಲ್ಟ್, ಪರಾಗ್ ಮತ್ತು ಜೈಸ್ವಾಲ್ ಉತ್ತಮ ಆಟವಾಡಿದರು. ಪೊವೆಲ್ ಪಂದ್ಯವನ್ನು ಚೆನ್ನಾಗಿ ಮುಗಿಸಿದರು. ಮುಂದಿನ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು..

Exit mobile version