ಉಕ್ರೇನ್ ನಿಂದ ಭಾರತಕ್ಕೆ ತಲುಪಿತು 184 ಆಕ್ಸಿಜನ್ ಕಾನ್ಸಂಟ್ರೇಟರ್

ನವದೆಹಲಿ, ಮೇ. 31: ಕೊರೋನಾ ವಿರುದ್ಧದ ಹೋರಾಟದಲ್ಲಿ ಉಕ್ರೇನ್‌ ಕಳುಹಿಸಿಕೊಟ್ಟಿರುವ ಆಕ್ಸಿಜನ್ ಕಾನ್ಸಂಟ್ರೇಟರ್ ಗಳು ಇಂದು ಭಾರತ ತಲುಪಿವೆ. 184 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನ ಹೊತ್ತ ಮೊದಲ ವಿಮಾನ ಉಕ್ರೇನ್‌ನಿಂದ ಇಂದು ಬೆಳಿಗ್ಗೆ ಬಂದಿಳಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

‘ಆಮ್ಲಜನಕ ಸಾಂದ್ರಕಗಳು ತಲುಪಿವೆ. ಉಕ್ರೇನ್‌ಗೆ ಧನ್ಯವಾದಗಳು’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ನೆರವಾಗಿದ್ದ ಅಮೆರಿಕ, ಸ್ವಿಟ್ಜರ್ಲೆಂಡ್, ಪೋಲೆಂಡ್, ನೆದರಲ್ಯಾಂಡ್ಸ್ ಮತ್ತು ಇಸ್ರೇಲ್‌ ಆಮ್ಲಜನಕ ಸಾಂದ್ರಕಗಳು, ರೆಮ್ ಡಿಸಿವಿರ್ ಔಷಧ, ವೆಂಟಿಲೇಟರ್‌ಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದವು.

Exit mobile version