ನಿಮ್ಮ ಪ್ರೀತಿ ವಿಫಲವಾಗಲು ಕಾರಣವಾಗುವ ಅಂಶಗಳು ಇವುಗಳೇ..

ನಮ್ಮ ಪ್ರೀತಿ ಸೋಲಲಿ ಎಂದು ಯಾರೂ ಬಯಸುವುದಿಲ್ಲ. ಏನೇ ಅದರೂ ಎಲ್ಲವನ್ನೂ ಗೆದ್ದು, ಪ್ರೇಮಿಗಳಾಗಿದ್ದವರು ದಂಪತಿಗಳಾಗಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ತಮ್ಮ ಸಂಬಂಧ ಎಲ್ಲೂ ಹಳಿತಪ್ಪದಿರಲಿ ಎಂದು ಹೊಂದಿಕೊಂಡೇ ಇರುತ್ತಾರೆ. ಆದರೆ ಕೆಲವೊಬ್ಬರ ವಿಚಾರದಲ್ಲಿ ಇದು ಅಸಾಧ್ಯವಾಗಿ ತಮ್ಮ ಪ್ರೀತಿ ಎಂಬ ಸಂಬಂಧದಲ್ಲಿ ವಿಫಲರಾಗುತ್ತಾರೆ. ಆದರೆ ಅದಕ್ಕೆ ಕಾರಣವೇನು? ತಾವು ಮಾಡಿದ ತಪ್ಪಾದರೂ ಏನು ಎಂಬುದನ್ನು ಯೋಚಿಸುತ್ತಿರುತ್ತಾರೆ. ಅಂತಹವರಿಗಾಗಿ ಈ ಲೇಖನ. ನೀವು ಪ್ರೀತಿಯಲ್ಲಿ ಸೋಲಲು ಈ ಕಾರಣಗಳು ಇದ್ದಿರಬಹುದು..

ಪ್ರೀತಿಯಲ್ಲಿ ವಿಫಲರಾಗಲು ಕಾರಣವಾಗುವ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ:

ನಿಮ್ಮ ಸಂಗಾತಿಯನ್ನು ಅವರು ಇರುವ ರೀತಿಯಲ್ಲಿ ಸ್ವೀಕರಿಸದೇ ಇರುವುದು:
ಸಾಮಾನ್ಯವಾಗಿ ಜನರು ತಮ್ಮ ಸಂಗಾತಿಯ ಕುರಿತು ಕೆಲವೊಂದು ಆದರ್ಶ ಯೋಜನೆಗಳನ್ನು ಹೊಂದಿರುತ್ತಾರೆ. ಯಾವಾಗ ಅವರು ಪ್ರೀತಿಯಲ್ಲಿ ಬೀಳುತ್ತಾರೋ, ಆಗ ತಮ್ಮ ಸಂಗಾತಿಯನ್ನು ತಾವು ಅಂದುಕೊಂಡಂತೆ ಬದಲಾಯಿಸಲು ಪ್ರಾರಂಭಿಸುತ್ತಾರೆ. ಅದು ಆಗಾಗ ಇಬ್ಬರ ನಡುವೆ ಅಸಮಾಧಾನ ಮತ್ತು ನಿರಾಶೆ ಉಂಟಾಗಲು ಕಾರಣವಾಗುವುದು. ಆದ್ದರಿಂದ ನಿಮ್ಮ ಸಂಗಾತಿಯ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ಸ್ವೀಕರಿಸಲು ಪ್ರಯತ್ನಿಸಿ.

ವಿಭಿನ್ನ ನಿರೀಕ್ಷೆಗಳು:
ಜೀವನದಲ್ಲಿ ದಂಪತಿಗಳ ನಿರೀಕ್ಷೆಗಳು ವಿಭಿನ್ನವಾಗಿದ್ದರೆ, ಅವರು ದೀರ್ಘಕಾಲದವರೆಗೆ ಜೊತೆಯಾಗಿ ಬಾಳುವುದು ಸುಲಭದ ಮಾತಲ್ಲ. ಏಕೆಂದರೆ ಇಬ್ಬರ ನಿರೀಕ್ಷೆ, ಆಸೆಗಳು ಬೇರೆ ಬೇರೆ ಆಗಿರುವುದರಿಂದ ಸಹಜವಾಗಿಯೇ ಇಬ್ಬರಲ್ಲೂ ಭಿನ್ನಾಭಿಪ್ರಾಯ ಮೂಡಲು ಕಾರಣವಾಗುತ್ತದೆ. ಇದರಿಂದ ನಿಧಾನವಾಗಿ ತಮ್ಮ ಜೀವನ ಯೋಜನೆಗಳನ್ನು “ನಮಗೆ ಬೇಕಾದುದು” ಬದಲಿಗೆ “ನನಗೆ ಬೇಕಾದುದು” ಎಂದು ಹೇಳಲು ಪ್ರಾರಂಭಿಸುತ್ತಾರೆ. ಆದ್ದರಿಂದ ಪ್ರೀತಿಯಲ್ಲಿ ಸಿಲುಕುವ ಮುನ್ನ ಈ ಬಗ್ಗೆ ಅರಿತುಕೊಳ್ಳುವುದು ಉತ್ತಮ.

ನಂಬಿಕೆ ಮತ್ತು ನಿಷ್ಠೆ:
ನಂಬಿಕೆ ಮತ್ತು ಪ್ರಾಮಾಣಿಕತೆ ಜೀವನದಲ್ಲಿ ತುಂಬಾ ಮುಖ್ಯ, ಅದರಲ್ಲೂ ಪ್ರೀತಿಗೆ ಇದೇ ಭದ್ರ ಬುನಾದಿ. ಆ ನಂಬಿಕೆಗೆ ಪೆಟ್ಟು ಬಿದ್ದಾಗ, ನಿಮ್ಮ ಸಂಗಾತಿ ನಿಮ್ಮೊಂದಿಗೆ ಇರಲು ಬಯಸುವುದಿಲ್ಲ. ನೀವು ಭೇಟಿಯಾದ ಕ್ಷಣದಿಂದ ನೀವು ಉಳಿಸಿಕೊಳ್ಳಬೇಕಾದ ವಿಷಯವೆಂದರೆ ನಂಬಿಕೆ. ಅದು ಹಾಳಾದಾಗ, ಅದನ್ನು ಮತ್ತ ಗಳಿಸುವುದು ತುಂಬಾ ಕಷ್ಟ.

ಸಂವಹನ ಸಮಸ್ಯೆಗಳು:
ದಂಪತಿಗಳ ನಡುವಿನ ಭಿನ್ನಭಿಪ್ರಾಯಕ್ಕೆ ಹಾಗೂ ವಿಚ್ಛೇದನಕ್ಕೆ ಇದು ಒಂದು ಪ್ರಮುಖ ಕಾರಣವಾಗಿದೆ. ಇಬ್ಬರ ನಡುವೆ ಏನಾದರೂ ಗೊಂದಲಗಳಾದಾಗ ಇಬ್ಬರೂ ಕೂತು ಮಾತನಾಡಿ ಅದನ್ನು ಪರಿಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಆದರೆ ಹೆಚ್ಚಿನವರು ಇದನ್ನೇ ಮಾಡಲು ಹೋಗುವುದಿಲ್ಲ. ಇದ ಮುಂದೆ ಸಂಬಂಧ ಸೋಲಲು ಕಾರಣವಾಗುವುದು. ವ್ಯಕ್ತಿಯ ಬಗ್ಗೆ ನಕಾರಾತ್ಮಕ ತೀರ್ಪು, ಟೀಕೆ ಅಥವಾ ವ್ಯಂಗ್ಯದ ಮೂಲಕ ತಮ್ಮ ಕೋಪವನ್ನು ಹೆಚ್ಚಾಗಿ ವ್ಯಕ್ತಪಡಿಸಲಾಗುತ್ತದೆ. ಇದು ಪ್ರಣಯ ಸಂಬಂಧದ ಆರೋಗ್ಯವನ್ನು ಹಾಳು ಮಾಡುತ್ತದೆ.

ಆ ಕ್ಷಣಕ್ಕೆ ಜೀವಿಸುತ್ತಿಲ್ಲ:
ಅಭಿವೃದ್ಧಿ ಹೊಂದಲು ಸಂಬಂಧಗಳಿಗೆ ಸಮಯ ಬೇಕಾಗುತ್ತದೆ. ಆದ್ದರಿಂದ ಆ ದಾರಿಯಲ್ಲಿ ಬರುವ ಅಡೆಗಡೆಗಳನ್ನು ಅತಿಯೆಂದು ಭಾವಿಸಬೇಡಿ. ಇವುಗಳನ್ನ ಇಬ್ಬರೂ ಸೇರಿ ಎದುರಿಸಿದರೆ ನಿಮ್ಮ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಆದರೆ ಅವುಗಳನ್ನು ಹೊರೆಯೆಂದು ಭಾವಿಸಿದರೆ ಸಂಬಂಧಕ್ಕೆ ಕಷ್ಟವಾಗತ್ತದೆ. ಆ ಕ್ಷಣದ ಜೊತೆ ಜೀವಿಸಿ, ಅದನ್ನು ಪೂರ್ಣವಾಗಿ ಆನಂದಿಸಿ. ಮುಂದೆ ಏನಾಗಬಹುದೆಂಬ ಯೋಚನೆ ಮಾಡಬೇಕು.

ಹಣದ ಸಮಸ್ಯೆಗಳು:
ಬದ್ಧ ಸಂಬಂಧದಲ್ಲಿ ದಂಪತಿಗಳು ಎಲ್ಲಿಯವರೆಗೆ ಒಟ್ಟಿಗೆ ಇರುತ್ತಾರೋ, ಅಲ್ಲಿಯವರೆಗೆ ಹಣಕಾಸಿನ ಸಮಸ್ಯೆ ಅಷ್ಟಾಗಿ ಬರುವುದಿಲ್ಲ. ಆದರೆ ಕಾಲಕಳೆದಂತೆ ಈ ಸಮಸ್ಯೆ ಉದ್ಭವವಾಗಿ ಎಲ್ಲವನ್ನೂ ಹಾಳುಮಾಡುವುದು. ಹಣ ಎಲ್ಲದಕ್ಕೂ ಮೂಲವಾಗಿರುವುದರಿಂದ ಹಣ-ಸಂಬಂಧಿತ ಸಮಸ್ಯೆಗಳು ನಂಬಿಕೆ, ಸುರಕ್ಷತೆ, ನಿಯಂತ್ರಣ ಸೇರಿದಂತೆ ನಮ್ಮ ಭಯಗಳ ಮೇಲೆ ಪರಿಣಾಮ ಬೀರುತ್ತವೆ.

Exit mobile version