ದಾಖಲೆ ಬರೆದ ರೆಡ್ಮಿ 12 ಸರಣಿ: ಭಾರತದಲ್ಲಿ ಮಾರಾಟವಾಗಿದ್ದು ಎಷ್ಟು ಸ್ಮಾರ್ಟ್​ಫೋನ್ಸ್, ಇಲ್ಲಿದೆ ಮಾಹಿತಿ.

India : ಭಾರತದಲ್ಲಿ ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ಕೆಲ ತಿಂಗಳ ಹಿಂದೆ ರೆಡ್ಮಿ 12 (Record breaking Redmi 12) ಸರಣಿಯ ಸ್ಮಾರ್ಟ್​ಫೋನನ್ನು ಅನಾವರಣ ಮಾಡಿತ್ತು.

ಇದರಲ್ಲಿ ರೆಡ್ಮಿ12 4G ಮತ್ತು ರೆಡ್ಮಿ 12 5G ಎಂಬ ಎರಡು ಫೋನ್ ಇದೆ. ಇದೀಗ ಈ ಫೋನಿನ ಬಗ್ಗೆ ಶವೋಮಿ (Xiaomi) ಮಹತ್ವದ ವಿಚಾರ ಬಹಿರಂಗಪಡಿಸಿದ್ದು, ರೆಡ್ಮಿ 12 ಸರಣಿಯು ಭಾರತದಲ್ಲಿ

ಕೇವಲ 100 ದಿನಗಳಲ್ಲಿ ಬರೋಬ್ಬರಿ 3 ಮಿಲಿಯನ್ ಯುನಿಟ್‌ಗಳನ್ನು (Record breaking Redmi 12) ಮಾರಾಟ ಮಾಡಿದೆ ಎಂದು ಕಂಪನಿ ತಿಳಿಸಿದೆ.

ರೆಡ್ಮಿ 12 ಸರಣಿ 100 ದಿನಗಳಲ್ಲಿ 3 ಮಿಲಿಯನ್ ಯುನಿಟ್ (3 million units) ಮಾರಾಟವಾದ ಬಗ್ಗೆ ಸ್ವತಃ ಶವೋಮಿ ಕಂಪನಿ ತನ್ನ ಅಧಿಕೃತ X (ಟ್ವಿಟ್ಟರ್‌) ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ತನ್ನ ಗ್ರಾಹಕರಿಗೆ

ಧನ್ಯವಾದ ಸಲ್ಲಿಸಿದೆ. ಈ ಫೋನಿನ ಮಾರಾಟವಾದ ಮೊದಲ ದಿನ ಮೂರು ಲಕ್ಷ ಮಾರಾಟ ಕಂಡಿದ್ದು, ಬಳಿಕ 28 ದಿನಗಳಲ್ಲಿ ಹತ್ತು ಲಕ್ಷ ಯುನಿಟ್ (unit) ಮಾರಾಟ ಆಗಿತ್ತು. ಇದೀಗ 100 ದಿನಗಳಲ್ಲಿ 3

ಮಿಲಿಯನ್ಯು ನಿಟ್‌ಗೆ ತಲುಪಿದೆ. ಬಿಡುಗಡೆಯ ಸಮಯದಲ್ಲಿ, ರೆಡ್ಮಿ 12 5G ಸ್ನಾಪ್‌ಡ್ರಾಗನ್ 4 Gen 2 5G (Redmi 12 5G Snapdragon 4 Gen 2 5G) ಪ್ರೊಸೆಸರ್‌ನೊಂದಿಗೆ ಬಂದ ಭಾರತದ ಮೊದಲ

ಸ್ಮಾರ್ಟ್‌ಫೋನ್ ಆಗಿತ್ತು. ಈ ಫೋನಿಗಳ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಬೆಲೆ ಮತ್ತು ಲಭ್ಯತೆ:
ನೀವು Mi.com, ಫ್ಲಿಪ್​ಕಾರ್ಟ್, Mi Home, Mi Studio ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಈ ಫೋನನ್ನು ಪಡೆದುಕೊಳ್ಳಬಹುದಾಗಿದ್ದು, ರೆಡ್ಮಿ 124G 4GB+128GB ರೂಪಾಂತರಕ್ಕೆ ರೂ 8,999 ಮತ್ತು

6GB+ 128GB ರೂಪಾಂತರಕ್ಕೆ ರೂ 10,499 ಆಗಿದೆ. 5G ಅನುಭವವನ್ನು ಬಯಸುವವರಿಗೆ, ರೆಡ್ಮಿ 12 5G ಫೋನ್ ಖರೀದಿಸಬಹುದು.

ಫೀಚರ್ಸ್:
ಇದು ಪ್ರೀಮಿಯಂ ಲುಕ್ ಮತ್ತು ಅನುಭವವನ್ನು ನೀಡುತ್ತದೆ. ಮೇಲ್ಭಾಗದಲ್ಲಿ, ಕ್ಯಾಮೆರಾ ಲೆನ್ಸ್‌ಗಳನ್ನು (Camera lens) ಸುತ್ತುವರೆದಿರುವ ಸಿಲ್ವರ್ ಮೆಟಾಲಿಕ್ ರಿಮ್‌ ಇದೆ. ರೆಡ್ಮಿ 12 4G ಗ್ಲಾಸ್ ಬ್ಯಾಕ್

ಪ್ಯಾನೆಲ್‌ನೊಂದಿಗೆ ಬರುತ್ತದೆ. ಈ ಫೋನ್ MIUI 14 (ಆಂಡ್ರಾಯ್ಡ್ 13 ಆಧಾರಿತ) ನಿಂದ ಚಾಲಿತವಾಗಿದೆ ಮತ್ತು MIUI ಡಯಲರ್‌ನೊಂದಿಗೆ ಬರುತ್ತದೆ. ಮೀಡಿಯಾಟೆಕ್ ಹಿಲಿಯೊ G88

(MediaTek Helio G88) ಪ್ರೊಸೆಸರ್‌ನಿಂದ ಚಾಲಿತವಾಗಿದೆ.

90Hz ರಿಫ್ರೆಶ್ ದರದೊಂದಿಗೆ 6.79-ಇಂಚಿನ FHD+ ಡಿಸ್ ಪ್ಲೇ ಇದೆ. ಪಂಚ್-ಹೋಲ್ ನಾಚ್ ವಿನ್ಯಾಸವನ್ನು ಹೊಂದಿದೆ. 5,000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 18W ವೇಗದ ಚಾರ್ಜಿಂಗ್ ಅನ್ನು

ಬೆಂಬಲಿಸುತ್ತದೆ. ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, (Megapixel primary camera) 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು

ಹೊಂದಿದೆ. ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದೆ.

ಇದನ್ನು ಓದಿ: ಕಾಂಗ್ರೆಸ್ ಸರ್ಕಾರ ರಾಜಸ್ಥಾನದಲ್ಲಿ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದೆ: ನರೇಂದ್ರ ಮೋದಿ

Exit mobile version