ಇಂಡಿಯನ್ ಆಯಿಲ್ ಕಾರ್ಪೋರೇಷನ್ನಲ್ಲಿ 1603 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

India: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ನ ವಿವಿಧ (Recruitment in Indian Oil) ರಾಜ್ಯಗಳಲ್ಲಿರುವ ರಾಜ್ಯ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಕೃತ ಅರ್ಜಿ

(Official application) ಆಹ್ವಾನಿಸಲಾಗಿದೆ. ಟ್ರೇಡ್ ಅಪ್ರೆಂಟಿಸ್, ಟೆಕ್ನೀಷಿಯನ್ ಅಪ್ರೆಂಟಿಸ್, ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ಸೇರಿದಂತೆ ಒಟ್ಟು 1603 ಹುದ್ದೆಗಳ ನೇಮಕಕ್ಕೆ ಅಧಿಸೂಚನೆ

ಹೊರಡಿಸಲಾಗಿದೆ. ದೆಹಲಿ, (Delhi) ಹರಿಯಾಣ,(Haryana) ಚಂಢೀಘಡ, (Chandigarh) ಜಮ್ಮು ಮತ್ತು ಕಾಶ್ಮೀರ,(Jammu Kashmir) ಪಂಜಾಬ್,(Punjab) ಒಡಿಶಾ, (Odisha)

ಜಾರ್ಖಂಡ್, (Jharkhand) ಅಸ್ಸಾಂ, ಸಿಕ್ಕಿಂ, ಉತ್ತರಖಂಡ, ಪಶ್ಚಿಮ ಬಂಗಾಳ, ತ್ರಿಪುರ, ನಾಗಲ್ಯಾಂಡ್, ಉತ್ತರ ಪ್ರದೇಶ, ಬಿಹಾರ ರಾಜ್ಯಗಳ ಘಟಕಗಳಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತರು

ಆನ್ಲೈನ್ ಮೂಲಕ ಅರ್ಜಿ (Recruitment in Indian Oil) ಸಲ್ಲಿಸಬಹುದು.

ನೇಮಕಾತಿ ಪ್ರಾಧಿಕಾರ (Appointing Authority) : ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್
ಹುದ್ದೆ ಹೆಸರು: ಟ್ರೇಡ್, ಟೆಕ್ನೀಷಿಯನ್ ಹಾಗೂ ಗ್ರಾಜುಯೇಟ್ ಅಪ್ರೆಂಟಿಸ್ ತರಬೇತುದಾರರು.
ಒಟ್ಟು ಹುದ್ದೆಗಳ ಸಂಖ್ಯೆ : 1603

ಶೈಕ್ಷಣಿಕ ಅರ್ಹತೆ (Educational qualification)

ಟ್ರೇಡ್ ಅಪ್ರೆಂಟಿಸ್ : ITI ಟೆಕ್ನೀಷಿಯನ್ ಅಪ್ರೆಂಟಿಸ್ : ಡಿಪ್ಲೊಮ ಗ್ರಾಜುಯೇಟ್ ಅಪ್ರೆಂಟಿಸ್ : ತಾಂತ್ರಿಕ ವಿಷಯಗಳಲ್ಲಿ ಪದವಿ

ವಯೋಮಿತಿ : ಕನಿಷ್ಠ 18 ವರ್ಷ ಮತ್ತು ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. OBC ಅಭ್ಯರ್ಥಿಗಳಿಗೆ 3 ವರ್ಷ, SC / ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಪ್ರಮುಖ ದಿನಾಂಕಗಳು (Important Dates) :
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 16-12-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 05-01-2024

ನೇಮಕಾತಿ ವಿಧಾನ : ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಟ್ರೇಡ್, ಟೆಕ್ನೀಷಿಯನ್ ಹಾಗೂ ಗ್ರಾಜುಯೇಟ್ ಅಪ್ರೆಂಟಿಸ್ ತರಬೇತುದಾರರನ್ನು ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://iocl.com/

ಇದನ್ನು ಓದಿ: ಕೇಳೋರಿಲ್ಲ ಗೃಹಲಕ್ಷ್ಮೀಯರ ಗೋಳು: ಹಣ ಬಿಡುಗಡೆಗೆ ನೂರೆಂಟು ಸಮಸ್ಯೆ

Exit mobile version