ಇಂಡೋನೇಷ್ಯಾದಿಂದ ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡುವಂತೆ ಸ್ಥಳೀಯ ಮುಸ್ಲಿಮರಿಂದ ಭಾರೀ ಪ್ರತಿಭಟನೆ

Jakarta: ಮ್ಯಾನ್ಮಾರ್ನಿಂದ (Myanmar) ವಲಸೆ ಬಂದು ನೆಲೆಸಿರುವ ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡುವಂತೆ ಇಂಡೋನೇಷ್ಯಾ ಸ್ಥಳೀಯ ಮುಸ್ಲಿಂ ಸಮುದಾಯದಿಂದ ಭಾರೀ ಪ್ರತಿಭಟನೆ ನಡೆಸಲಾಗಿದೆ. ರೋಹಿಂಗ್ಯಾ ನಿರಾಶ್ರಿತರನ್ನು ಗಡೀಪಾರು ಮಾಡಬೇಕೆಂದು ಒತ್ತಾಯಿಸಿ ಇಂಡೋನೇಷ್ಯಾದ ವಿದ್ಯಾರ್ಥಿಗಳ ದೊಡ್ಡ ಗುಂಪು ನಿರಾಶ್ರಿತರ ಕೇಂದ್ರಕ್ಕೆ ನುಗ್ಗಿ ದಾಂಧಲೆ ನಡೆಸಿದೆ.

ಯುನೈಟೆಡ್ ನೇಷನ್ಸ್ ರೆಫ್ಯೂಜಿ ಏಜೆನ್ಸಿ (United Nations Refugee Agency) ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು “ದುರ್ಬಲ ನಿರಾಶ್ರಿತರ ಕುಟುಂಬಗಳಿಗೆ ಆಶ್ರಯ ನೀಡುವ ನಿರಾಶ್ರಿತರ ಕೇಂದ್ರದ ಮೇಲೆ ಜನಸಮೂಹದ ದಾಳಿಯನ್ನು ನೋಡಿ ತುಂಬಾ ವಿಚಲಿತವಾಗಿದೆ. ಇಲ್ಲಿರುವ ಮಕ್ಕಳು ಮತ್ತು ಮಹಿಳೆಯರ ರಕ್ಷಣೆ ಮಾಡುವುದು ಸ್ಥಳೀಯ ಸರ್ಕಾರ ಕರ್ತವ್ಯವಾಗಿದೆ ಎಂದು ಹೇಳಿದೆ.

ಇನ್ನು ಉದ್ರಿಕ್ತ ಜನಸಮೂಹವು ಬಲವಂತವಾಗಿ ಎರಡು ಟ್ರಕ್ಗಳಲ್ಲಿ 137 ನಿರಾಶ್ರಿತರನ್ನು ಊರಿನಿಂದ ಹೊರಹಾಕಿದೆ. ಬಂದಾ ಅಚೆಹ್ ನಗರದಲ್ಲಿರುವ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಿದೆ. ಈ ಘಟನೆಯು ನಿರಾಶ್ರಿತರನ್ನು ಆಘಾತಕ್ಕೀಡು ಮಾಡಿದೆ. ರೋಹಿಂಗ್ಯಾ ನಿರಾಶ್ರಿತರು ಇಂಡೋನೇಷ್ಯಾದಲ್ಲಿ (Indonesia) ಹೆಚ್ಚುತ್ತಿರುವ ಹಗೆತನ ಮತ್ತು ನಿರಾಕರಣೆಯನ್ನು ಅನುಭವಿಸುತ್ತಿದ್ದಾರೆ.

ಆದರೆ ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ (Joko Widodo) ಅವರು, ತಾತ್ಕಾಲಿಕ ಆಶ್ರಯವನ್ನು ನೀಡಲು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ವಾಗ್ದಾನ ಮಾಡಿದ್ದಾರೆ. ಇನ್ನು ನವೆಂಬರ್ ಮತ್ತು ಏಪ್ರಿಲ್ (November And April) ನಡುವೆ ಸಮುದ್ರಗಳು ಶಾಂತವಾಗಿರುವಾಗ ನಿರಾಶ್ರಿತರ ವಲಸೆ ಹೆಚ್ಚುತ್ತದೆ. ರೋಹಿಂಗ್ಯಾಗಳು ನೆರೆಯ ಥೈಲ್ಯಾಂಡ್ ಮತ್ತು ಮುಸ್ಲಿಂ-ಬಹುಸಂಖ್ಯಾತ ಇಂಡೋನೇಷ್ಯಾ ಮತ್ತು ಮಲೇಷ್ಯಾಕ್ಕೆ (Malesia) ದೋಣಿಗಳಲ್ಲಿ ಬರುತ್ತಾರೆ.

ರೊಹಿಂಗ್ಯಾಗಳನ್ನು ಗಡಿಪಾರು ಮಾಡುವಂತೆ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಬಂಡಾ ಅಚೆಹ್ನಲ್ಲಿನ 23 ವರ್ಷದ ವಿದ್ಯಾರ್ಥಿನಿ ವಾರಿಜಾ ಅನಿಸ್ ಮುನಂದರ್ (Warija Anis Munander), ಇನ್ನೊಬ್ಬ ವಿದ್ಯಾರ್ಥಿನಿ 20 ವರ್ಷದ ಡೆಲ್ಲಾ ಮಸ್ರಿಡಾ ಅವರು “ಅವರು ಆಹ್ವಾನಿಸದೆ ಇಲ್ಲಿಗೆ ಬಂದಿದ್ದಾರೆ. ಇದು ಅವರ ದೇಶ ಎಂದು ಅವರು ಭಾವಿಸುತ್ತಾರೆ. ಆದರೆ ಇಂಡೋನೇಷ್ಯಾ 1951 ರ ವಿಶ್ವಸಂಸ್ಥೆಯ ನಿರಾಶ್ರಿತರ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಹೀಗಾಗಿ ನಿರಾಶ್ರಿತರಿಗೆ ನಾವು ಜಾಗ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

Exit mobile version