ಅರ್ಧದಷ್ಟು ನಾಮಪತ್ರಗಳು ಅಸಿಂಧು, ಕಣದಲ್ಲಿ ಉಳಿದಿರೋದು 2,613 ಅಭ್ಯರ್ಥಿಗಳು ಮಾತ್ರ !

Bangalore : ಕರ್ನಾಟಕ ವಿಧಾನಸಭಾ ಚುನಾವಣಾ (Karnataka assembly election) ಕಣ ಕಾವೇರುತ್ತಿದೆ. ಚುನಾವಣೆ ಸ್ಪರ್ಧಿಸಲು ಸಾವಿರಾರು ಮಂದಿ ನಾಮಪತ್ರ ಸಲ್ಲಿಸಿದ್ರು. ಆದ್ರೆ ಈಗ ಚುನಾವಣಾ ಕಣದಲ್ಲಿ (rejection of nomination papers) ಉಳಿದಿರೋದು ಅರ್ಧದಷ್ಟು ಮಂದಿ ಮಾತ್ರ. ಇದಕ್ಕೆ ಕಾರಣ ಸುಮಾರು ಎರಡು ಸಾವಿರ ಸಮೀಪದಷ್ಟು ನಾಮಪತ್ರಗಳು ಅಸಿಂಧುಗೊಂಡಿವೆ. ಇನ್ನು ಕೆಲವರು ನಾಮಪತ್ರವನ್ನು ಹಿಂದಕ್ಕೆ ಪಡೆದಿರೋದು.


ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023ರ ನಾಮಪತ್ರ ಸಲ್ಲಿಕೆಯು ಏಪ್ರಿಲ್‌ 13 ರಿಂದ 20ವರೆಗೂ ನಡೆಯಿತು.

ಈ ಚುನಾವಣೆಗೆ ಇಡೀ ರಾಜ್ಯದಾದ್ಯಂತ ಒಟ್ಟು 5,101 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.

ಆದರೆ ಇದರಲ್ಲಿ ಕೇವಲ 2,613 ಮಂದಿ ಅಭ್ಯರ್ಥಿಗಳು ಮಾತ್ರ ಅಂತಿಮವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಉಳಿದ 1,971 ಮಂದಿಯ ನಾಮಪತ್ರವನ್ನು ಅಸಿಂಧು ಎಂದು ಘೋಷಿಸಲಾಗಿದೆ. ಮತ್ತು ಸರಿ ಸುಮಾರು 512 ಮಂದಿ ನಾಮಪತ್ರ ವಾಪಸ್‌ ಪಡೆದಿದ್ದಾರೆ.


1,971 ಮಂದಿಯ ನಾಮಪತ್ರ ಅಸಿಂಧುಗೊಳ್ಳಲು ಕಾರಣ:
ಏಪ್ರಿಲ್‌ 21 ರಂದು ಚುನಾವಣೆ ಆಯೋಗವು ನಾಮಪತ್ರ ಪರಿಶೀಲನೆಯನ್ನು ನಡೆಸಿತ್ತು ಈ ಸಂದರ್ಭದಲ್ಲಿ 1,971 ಮಂದಿಯ ನಾಮಪತ್ರಗಳು ಅಸಿಂಧು ಎಂದು ಘೋಷಿಸಿದೆ,

ಇದಕ್ಕೆ ಪ್ರಮುಖ ಕಾರಣವೆಂದರೆ ಸೂಕ್ತ ಮಾಹಿತಿಗಳ ಕೊರತೆ, ಹಾಗೂ ದಾಖಲಾತಿ (rejection of nomination papers) ಕೊರತೆಯು ಕಾರಣವಾಗಿತ್ತು.

ನಾಮಪತ್ರ ಅಸಿಂಧುಗೊಂಡ ಅಭ್ಯರ್ಥಿಗಳ ಪೈಕಿ ಬಹುತೇಕ ಎಲ್ಲರೂ ಪಕ್ಷೇತರ ಸ್ವತಂತ್ರ ಅಭ್ಯರ್ಥಿಗಳಾಗಿದ್ದರು.

ಇದನ್ನೂ ಓದಿ : https://vijayatimes.com/i-am-not-anti-hindu/


ವಿಧಾನಸಭಾ ಚುನಾವಣೆ ಘೋಷಣೆಯಾದ ಕೂಡಲೇ ಬೇರೆ ಬೇರೆ ಕ್ಷೇತ್ರಗಳಿಂದ ಸಾವಿರಾರು ಮಂದಿ ಜನರು ಉತ್ಸಾಹದಿಂದ ನಾಮಪತ್ರ ಸಲ್ಲಿಸಿದ್ದರು.

ಇದರಲ್ಲಿ ನಾಮಪತ್ರ ಸಲ್ಲಿಸಿದ ಕೆಲವರು ಮುಂಜಾಗಗ್ರತಾ ದೃಷ್ಟಿಯಿಂದ ಅಭ್ಯರ್ಥಿ ಜತೆ ಇನ್ನೊಬ್ಬ ಕುಟುಂಬ ಸದಸ್ಯರು ಕೂಡ ಅರ್ಜಿ ಸಲ್ಲಿಸುತ್ತಿದ್ದರು.

ನಾಮಪತ್ರ ಹಿಂಪಡೆಯಲು ಏಪ್ರಿಲ್‌ 24ರವರೆಗೂ ಅವಕಾಶ ನೀಡಲಾಗಿತ್ತು.

ಸದ್ಯಕ್ಕೆ ಚುನಾವಣಾ ಆಯೋಗದದಿಂದ ಬಂದಿರುವ ಮಾಹಿತಿಗಳ ಪ್ರಕಾರ ಒಟ್ಟು 512 ಮಂದಿ ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆಸಿದ್ದಾರೆ.


16 ಕ್ಷೇತ್ರಗಳಲ್ಲಿ ಎರಡು ಬ್ಯಾಲೆಟ್‌ ಯುನಿಟ್‌ ಬಳಕೆಯಾಗಲಿದೆ :
ಚುನಾವಣೆ ಆಯೋಗದಲ್ಲಿರುವ ಒಂದು ಮತದಾನ ಯಂತ್ರ ಅಂದರೆ ಬ್ಯಾಲೆಟ್‌ ಯೂನಿಟ್‌ ನಲ್ಲಿ ಕೇವಲ 15 ಅಭ್ಯರ್ಥಿಗಳಿಗೆ ಮತ ಚಲಾವಣೆ ಮಾಡುವ ಅವಕಾಶವನ್ನುಮಾತ್ರ ಹೊಂದಿರುತ್ತದೆ.

ಅದಕ್ಕಿಂತ ಹೆಚ್ಚು ಇದ್ದರೆ ಮತ್ತೊಂದು ಬ್ಯಾಲೆಟ್‌ ಯೂನಿಟ್‌ ಬೇಕಾಗುತ್ತದೆ.

ಆದರೆ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿಒಟ್ಟು 16 ವಿಧಾನಸಭಾ ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ಮಂದಿ ಸ್ಪರ್ಧೆ ಮಾಡಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.


15ಕ್ಕೂ ಹೆಚ್ಚು ಮಂದಿ ಸ್ಪರ್ಧಿಸುತ್ತಿರುವ ಕ್ಷೇತ್ರಗಳ ವಿವರ:
ರಾಜಾಜಿನಗರ
ಹೊಸಕೋಟೆ
ಯಲಹಂಕ
ಬೈತರಾಯನಪುರ
ಬಳ್ಳಾರಿ ನಗರ
ಹನೂರು
ಗೌರಿಬಿದನೂರು
ಚಿಕ್ಕಮಗಳೂರು
ಚಿತ್ರದುರ್ಗ
ಹುಬ್ಬಳ್ಳಿ-ಧಾರವಾಡ ಕೇಂದ್ರ
ಕೋಲಾರ
ಗಂಗಾವತಿ
ಶ್ರೀ ರಂಗ ಪಟ್ಟಣ
ಕೃಷ್ಣರಾಜ
ನರಸಿಂಹರಾಜ
ರಾಯಚೂರು

ಯಾವ ಪಕ್ಷದಿಂದ ಎಷ್ಟು ಮಂದಿ ಸ್ಪರ್ದಿಸಲಿದ್ದಾರೆ?
ಬಿಜೆಪಿ (BJP)- 224
ಕಾಂಗ್ರೆಸ್ (Congress) – 223
ಎಎಪಿ (AAP)– 209
ಜೆಡಿಎಸ್ (JDS)– 207
ಬಿ ಎಸ್ ಪಿ (BSP)– 133
ಜೆಡಿಯು (JDU) -8
ಸಿಪಿಐ(ಎಂ) (CPI)– 4
ಎನ್‌ಪಿಪಿ (NPP) -2
ಪಕ್ಷೇತರರು – 918
ಮಾನ್ಯತೆ ರಹಿತವಾದ ನೋಂದಾಯಿತ ಪಕ್ಷಗಳು- 685
ಒಟ್ಟು – 2,613 (ಈ ಪೈಕಿ 2427 ಪುರುಷರು, ಮಹಿಳೆಯರು 184, ತೃತೀಯ ಲಿಂಗಿಗಳು 2)

ಯಾವ ವಿಧಾನಸಬಾ ಕ್ಷೇತ್ರದಿಂದ ಅತಿ ಹೆಚ್ಚು ಮಂದಿ ಸ್ಪರ್ಧಿಸಲಿದ್ದಾರೆ?
ರಾಜ್ಯದಲ್ಲಿ ಬಳ್ಲಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಅತಿ ಹೆಚ್ಚು ಅಂದರೆ 24 ಮಂದಿ ಸ್ಪರ್ಧೆಗಿಳಿದಿದ್ದಾರೆ , ಎರಡನೇಯಾಗಿ ಹೊಸಕೋಟೆ ಯಿಂದ 23 ಮಂದಿ, ನಂತರ ಯಲಹಂಕದಿಂದ 21 ಮಂದಿ ಸ್ಪರ್ಧೆ ಮಾಡುತ್ತಿದ್ದಾರೆ. ಅತಿ ಕಡಿಮೆ ಅಂದರೆ 5 ಮಂದಿ ಅಭ್ಯರ್ಥಿಗಳು ಮಾತ್ರ ಯಮಕನಮರಡಿ, ಕಾಪು, ತೀರ್ಥಹಳ್ಳಿ, ಮಂಗಳೂರು ಮತ್ತು ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

Exit mobile version