ಪ್ರಧಾನಿ ಮೋದಿಯಿಂದ ಇ-ರುಪಿ ವೋಚರ್ ಬಿಡುಗಡೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇ-ರುಪಿ ಯನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ.

ಇದು ವ್ಯಕ್ತಿ ಮತ್ತು ನಿಗದಿತ ಉದ್ದೇಶ ಸೂಚಿತ ಡಿಜಿಟಲ್ ಪಾವತಿ ವ್ಯವಸ್ಥೆ. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳು ನೇರವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪುವಂತೆ ಸರ್ಕಾರವು ಈಚಿನ ವರ್ಷಗಳಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಇ-ರುಪಿ ಸಹ ಫಲಾನುಭವಿಗಳಿಗೆ ಸವಲತ್ತುಗಳು ಯಾವುದೇ ಸೋರಿಕೆಯಿಲ್ಲದೆ ತಲುಪುವಂತೆ ಮಾಡುತ್ತದೆ ಎಂದು ಅವರು ಹೇಳಿದರು.

ಆರಂಭದಲ್ಲಿ ಇದನ್ನು ಆರೋಗ್ಯ ಸೇವೆಗಳಿಗೆ ಮಾತ್ರವೇ ಬಳಸಲಾಗುತ್ತದೆ. ನಂತರದ ದಿನಗಳಲ್ಲಿ ಸರ್ಕಾರದ ಇತರ ನೇರ ನಗದು ವರ್ಗಾವಣೆ (ಡಿಬಿಟಿ) ಕಾರ್ಯಕ್ರಮಗಳಿಗೂ ವಿಸ್ತರಿಸಲಾಗುವುದು. ಸಂಘಸಂಸ್ಥೆಗಳೂ ತಾವು ಸಹಾಯ ಮಾಡುವ ಜನರಿಗೆ ನಗದು ನೀಡುವ ಬದಲಿಗೆ ಇ-ರುಪಿ ವೋಚರ್ ನೀಡಬಹುದು. ಆಗ ಆ ವ್ಯಕ್ತಿಯು, ಹಣ ನೀಡಿದ ಉದ್ದೇಶಕ್ಕೆ ಮಾತ್ರವೇ ಆ ಹಣವನ್ನು ಬಳಸಿಕೊಳ್ಳುವಂತೆ ಮಾಡಬಹುದು ಎಂದು ಮೋದಿ ಹೇಳಿದರು.

Exit mobile version