ಊಟದ ನಂತರ ಕಾಡುವ ಹೊಟ್ಟೆ ಉಬ್ಬರದ ಸಮಸ್ಯೆಗೆ ಸರಳ ಮನೆಮದ್ದುಗಳು..!

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಊಟದ ನಂತರ ಉಬ್ಬರದ ಸಮಸ್ಯೆ ಕಾಡುತ್ತಿದೆ. ಹೀಗಾಗಿ (remedies for Stomach bloating) ಊಟದ ಮಾಡಲು ಕೂಡಾ ಹಿಂಜರಿಯುವಂತಾಗಿದೆ.

ಊಟ ಮಾಡಿ ತಕ್ಷಣವೇ ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಂಡು ಬರುತ್ತದೆ ಒಂದು ವೇಳೆ ಸಮಸ್ಯೆ ನಿಮಗೂ ಆಗುತ್ತಿದ್ದರೆ ಇಲ್ಲಿದೆ ನೋಡಿ ಸರಳ ಪರಿಹಾರಗಳು.

• ಹಸಿ ಪುದೀನಾ ಎಲೆಗಳನ್ನು ಚೆನ್ನಾಗಿ ತೊಳೆದು, ಒಂದು ಲೋಟ ಕುದಿಯುತ್ತಿರುವ ನೀರಿಗೆ ಹಾಕಿ ನಂತರ, ಒಂದು ಟೇಬಲ್ ಚಮಚ ಆಗುವಷ್ಟು ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿಯಿರಿ.

• ಊಟ ಮಾಡಿದ ಬಳಿಕ ಸ್ವಲ್ಪ ಸೊಂಪು ಕಾಳುಗಳನ್ನು ಬಾಯಿಗೆ ಹಾಕಿ ಜಗಿದು ಅದರ ರಸವನ್ನು ಹೀರುತ್ತಾ ಬಂದರೆ, ನಾವು ಸೇವಿಸಿದ ಆಹಾರಗಳು ಸರಿಯಾಗಿ ಜೀರ್ಣಪ್ರಕ್ರಿಯೆ ಸರಿಯಾಗಿ ನಡೆಯುತ್ತದೆ.

ಆಗ ಹೊಟ್ಟೆ ಉಬ್ಬರ (remedies for Stomach bloating) ಆಗುವುದಿಲ್ಲ.

ಚಂದ್ರಯಾನ- 3 : ಚಂದಿರನ ಅಂಗಳಕ್ಕೆ ವಿಕ್ರಮ್‌ ಲ್ಯಾಂಡರ್‌ ಇಳಿಯುವ ಸಮಯ ಬಹಿರಂಗ, ಲ್ಯಾಂಡಿಂಗ್‌ ಪ್ರಕ್ರಿಯೆ ವೀಕ್ಷಿಸುವುದು ಹೇಗೆ?

• ಹೊಟ್ಟೆ ಉಬ್ಬರದಂತಹ ಸಮಸ್ಯೆ ಇರುವವರು, ಸಂಜೆಯ ಸಮಯದಲ್ಲಿ ಕುಂಬಳಕಾಯಿ ಬೀಜಗಳನ್ನು ಹಸಿಯಾಗಿ ತಿನ್ನಬಹುದು ಅಥವಾ ಕುಂಬಳಕಾಯಿಯನ್ನು ಊಟದಲ್ಲಿ ಹೆಚ್ಚು ಬಳಸಬೇಕು.

• ವರ್ಷ ಪೂರ್ತಿ ಲಭ್ಯವಾಗುವಂತಹ ಹಣ್ಣು ಎಂದರೆ ಅದು ಬಾಳೆಹಣ್ಣು. ಹಾಗಾಗಿ ಇದರ ಸಂಪೂರ್ಣ ಲಾಭ ಪಡೆಯಲು, ಊಟದ ಬಳಿಕ ದಿನಕ್ಕೊಂದು ಬಾಳೆಹಣ್ಣು ತಿಂದರೂ ಸಾಕು, ಜೀರ್ಣಕ್ರಿಯೆಯು

ಸರಾಗವಾಗಿ ಆಗುವುದು ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಬಹಳ ಬೇಗನೇ ಪರಿಹಾರ ನೀಡುತ್ತದೆ. ಬಾಳೆಹಣ್ಣಿನಲ್ಲಿ ಕಂಡು ಬರುವ ಕಾರ್ಬೋಹೈಡ್ರೇಟ್ ಅಂಶಗಳು, ಪೊಟ್ಯಾಶಿಯಂ

ಅಂಶ ಹಾಗೂ ನಾರಿನಾಂಶಗಳು, ಹೊಟ್ಟೆ ಉಬ್ಬರ ಅಜೀರ್ಣ ಸಮಸ್ಯೆಯನ್ನು ಸುಲಭವಾಗಿ ದೂರ ಮಾಡುತ್ತದೆ. ಹೀಗಾಗಿ ಪ್ರತಿದಿನ ರಾತ್ರಿ ಊಟವಾದ ನಂತರ ಒಂದು ಬಾಳೆಹಣ್ಣನ್ನು ಸೇವಿಸಬೇಕು.

• ಊಟದ ಬಳಿಕ ಕಾಡುವ ಹೊಟ್ಟೆ ಉಬ್ಬರ ಸಮಸ್ಯೆಗೆ, ಅರ್ಧ ಟೀ ಚಮಚದಷ್ಟು ಇಂಗನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಮಿಕ್ಸ್ ಮಾಡಿ ಕುಡಿಯಬೇಕು. ಇಂಗು ಹೊಟ್ಟೆಯಲ್ಲಿ ಹೆಚ್ಚುವರಿ ಅನಿಲವನ್ನು

ಉತ್ಪಾದಿಸುವ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ.

• ಹೊಟ್ಟೆ ಉಬ್ಬರ ಅಥವಾ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಜೀರಿಗೆಯನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅದರ ನೀರನ್ನು ಕುಡಿಯಬೇಕು ಅಥವಾ ಜೀರಿಗೆಯನ್ನು ಚೆನ್ನಾಗಿ ಕುದಿಸಿ,

ಅದರ ನೀರನ್ನು ಕುಡಿಯಬೇಕು. ಈ ರೀತಿಯ ಮನೆಮದ್ದುಗಳನ್ನು ಸೇವಿಸುವುದರಿಂದ ಅಜೀರ್ಣ ಅಥವಾ ಹೊಟ್ಟೆಉಬ್ಬರ ಸಮಸ್ಯೆಗಳಿಂದ ಪಾರಾಗಬಹುದು.

Exit mobile version