ಮಂಡಿ ನೋವು – ಕೀಲು ನೋವಿಗೆ ಈ ಆಹಾರಗಳನ್ನ ಸೇವಿಸೋದು ಬೆಸ್ಟ್..!

Knee Pain Home Remedy : ಆಧುನಿಕ ಜೀವನ ಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಮಂಡಿ ನೋವು ಮತ್ತು (Remedies for Knee Pain) ಕೀಲು ನೋವಿನಂತಹ ಸಮಸ್ಯೆಗಳು

ಪ್ರತಿಯೊಬ್ಬರಿಗೂ ಕಾಡುತ್ತಿವೆ. ಅನೇಕ ಹದಿಹರೆಯದ ಯುವಕರು ಕೂಡಾ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಕೀಲು ನೋವು ಮತ್ತು ಮಂಡಿ ನೋವುಗಳು ಬರದಂತೆ ಮೂಳೆಗಳನ್ನು

ಬಲಪಡಿಸುವ ಅಗತ್ಯವಿದೆ. ಹೀಗಾಗಿ ಮೂಳೆಗಳನ್ನು ಬಲಪಡಿಸಿ, ಮಂಡಿ ನೋವು ಮತ್ತು ಕೀಲು (Remedies for Knee Pain) ನೋವಿಗೆ ಮುಕ್ತಿ ನೀಡುವ ಕೆಲವು ಆಹಾರಗಳ ವಿವರ ಇಲ್ಲಿದೆ ನೋಡಿ.

ಸೊಪ್ಪು ತರಕಾರಿಗಳು : ಹಸಿರು ಎಲೆಗಳ ತರಕಾರಿಗಳನ್ನು (Green vegetables) ಸೇವಿಸುವುದು ಮೂಳೆಗಳಗೆ ಒಳ್ಳೆಯದು. ಕ್ಯಾಲ್ಸಿಯಂ, ವಿಟಮಿನ್ ಕೆ (Vitamin K) ಮತ್ತು ಮೆಗ್ನೀಸಿಯಮ್

ತರಕಾರಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ, ಇದು ಮೂಳೆಗಳ ಖನಿಜ ಸಾಂದ್ರತೆಯನ್ನು ಹೆಚ್ಚಿಸಿ, ಶಕ್ತಿ ನೀಡುತ್ತದೆ. ಜೊತೆಗೆ ಮೊಳೆಗಳ ಕೀಲುಗಳಲ್ಲಿ ಉರಿಯೂತದ ಕಿಣ್ವಗಳ ರಚನೆಯನ್ನು ತಡೆಯುತ್ತದೆ.


ಮೀನು (Fish) : ಮೀನಿನಲ್ಲಿ ವಿಟಮಿನ್ ಡಿ (Vitamin D ) ಮತ್ತು ಒಮೆಗಾ -3 (Omega 3)ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ಕರುಳಿನಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಮುಖ್ಯವಾಗಿದ್ದು,

ಮೂಳೆಗಳ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡುವ ಮೂಲಕ ಮೂಳೆಗಳನ್ನು ಆರೋಗ್ಯಕರವಾಗಿಡಲು

ಸಹಾಯ ಮಾಡುತ್ತದೆ.
ಕ್ಯಾಲ್ಸಿಯಂ (Calcium) ಆಹಾರಗಳು : ಆಹಾರದಲ್ಲಿ ಕ್ಯಾಲ್ಸಿಯಂ ಇರುವ ಆಹಾರವನ್ನು ಸೇವಿಸಬೇಕು. ಕ್ಯಾಲ್ಸಿಯಂ ಮೂಳೆಗಳ ರಚನೆಗೆ ಸಹಾಯ ಮಾಡಿ, ಮೂಳೆಗಳಿಗೆ ಶಕ್ತಿಯನ್ನು

ನೀಡುತ್ತದೆ. ಆಹಾರದಲ್ಲಿ ಕ್ಯಾಲ್ಸಿಯಂ ಇರುವ ಆಹಾರಗಳಾದ ಹಾಲು, ಮೊಸರು ಮತ್ತು ಚೀಸ್ ಹೆಚ್ಚೆಚ್ಚು ತಿನ್ನಬೇಕು. ಇವು ಮೂಳೆಗಳನ್ನು ಶಕ್ತಿಶಾಲಿಯಾಗಿಸಲು ಉತ್ತಮವಾಗಿವೆ.


ಧಾನ್ಯಗಳು (Grains) : ಧಾನ್ಯಗಳ ಸೇವನೆಯು ಮೂಳೆಗಳಿಗೆ ಒಳ್ಳೆಯದು. ಆಹಾರದಲ್ಲಿ ಕಂದು ಅಕ್ಕಿ, ಕ್ವಿನೋವಾ ಮತ್ತು ಗೋಧಿಯನ್ನು ಸೇರಿಸಬೇಕು. ಇವುಗಳನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.


ಬಾದಾಮಿ (Almonds) : ಬಾದಾಮಿ ಬೀಜಗಳು ಹೆಚ್ಚಿನ ಪ್ರಮಾಣದ ಮೆಗ್ನೀಸಿಯಮ್ ಮತ್ತು ರಂಜಕವನ್ನು ಹೊಂದಿರುತ್ತವೆ. ಇದು ಮೂಳೆಗಳಿಗೆ ಕೊಬ್ಬನ್ನು ಒದಗಿಸಿ, ಬಲಪಡಿಸುತ್ತವೆ. ಬಾದಾಮಿ ಜೊತೆಗೆ ಚಿಯಾ

ಮತ್ತು ಅಗಸೆ ಬೀಜಗಳನ್ನು ನಮ್ಮ ನಿತ್ಯ ಆಹಾರದಲ್ಲಿ ಸೇರಿಸುವುದರಿಂದ ಮಂಡಿ ನೋವಿನಿಂದ ಪರಿಹಾರ ಸಿಗುತ್ತದೆ.

ಇದನ್ನು ಓದಿ: ಚೈತ್ರಾ ಕುಂದಾಪುರ ಅರೆಸ್ಟ್‌: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಡೀಲ್ 7 ಕೋಟಿ ವಂಚನೆ ಆರೋಪ, ಸಿಸಿಬಿ ವಶಕ್ಕೆ

Exit mobile version