ಭಾರತಕ್ಕೆ ಕ್ರಿಕೆಟ್ನಲ್ಲಿ (Cricket) ಮೀಸಲಾತಿ ಇದ್ದಿದ್ದರೆ, ಭಾರತ ಈ 2023ರ ವಿಶ್ವಕಪ್ಪನ್ನು ಸುಲಭವಾಗಿ ಗೆಲ್ಲುತ್ತಿತ್ತು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ (Chethan) ಅಹಿಂಸಾ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನಾನು ಮತ್ತೆ ಹೇಳುತ್ತಿದ್ದೇನೆ/ಒತ್ತಿಹೇಳುತ್ತಿದ್ದೇನೆ, ಭಾರತಕ್ಕೆ ಕ್ರಿಕೆಟ್ನಲ್ಲಿ ಮೀಸಲಾತಿಯ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್ನಲ್ಲಿ ಮೀಸಲಾತಿ ಇದ್ದಿದ್ದರೆ, ಭಾರತ ಈ 2023ರ ವಿಶ್ವಕಪ್ಪನ್ನು ಸುಲಭವಾಗಿ ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಕೆಲವು ಪೋಸ್ಟ್ಗಳನ್ನು ಮಾಡಿರುವ ಅವರು, ಇಂದು ನಡೆಯುತ್ತಿರುವ ಕ್ರಿಕೆಟ್ (Cricket) ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪ್ಯಾಲೇಸ್ಟಿನಿಯನ್ (Palestine) ನ್ಯಾಯಕ್ಕಾಗಿ ಹೋರಾಡುವ ಕಾರ್ಯಕರ್ತರೊಬ್ಬರು ಪಿಚ್ ಅನ್ನು ಪ್ರವೇಶಿಸಿದರು. ಇಸ್ರೇಲ್ (Israel) ರಾಷ್ಟ್ರವು ಪ್ಯಾಲೆಸ್ಟೀನಿಯನ್ನರ ಮೇಲೆ ಮಾಡುತ್ತಿರುವ ಕ್ರೂರ ಜನಾಂಗೀಯ ಶುದ್ಧೀಕರಣವನ್ನು ಯಾವುದೇ ಭಾರತೀಯ ಕ್ರಿಕೆಟಿಗನು ವಿರೋಧಿಸಿಲ್ಲ.

ಹಾಸ್ಯಾಸ್ಪದವಾಗಿ, ಯಾವುದೇ ಕ್ರಿಕೆಟಿಗನು ಅದನ್ನು ವಿರೋಧಿಸಲು ‘ಹತ್ತಿರ ಬಂದಿದ್ದರೆ’, ಅದು ಈ ಘಟನೆಯ ಮೂಲಕ. ಈ ಶತಮಾನದಲ್ಲಿ ಒಬ್ಬನಾದರೂ ಭಾರತೀಯ ಕ್ರಿಕೆಟಿಗನು ಮಾದರಿಯಾಗಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ, ಇಂದು ಭಾರತೀಯ ಕ್ರಿಕೆಟಿಗರು ಚೆಂಡನ್ನು ಹೊಡೆಯಬಹುದು/ಎಸೆಯಬಹುದು/ಹಿಡಿಯಬಹುದು, ಆದರೆ ಅವರು ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡುವುದಿಲ್ಲ. ಅವರು ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡುವುದಿಲ್ಲ.
ಪಲ್ವಾಂಕರ್ ಬಾಲೂ (Palwankar Balu) ಅವರು, ಒಂದು ಶತಮಾನದ ಹಿಂದೆ ಧಾರವಾಡ ಮೂಲದ ಬೌಲಿಂಗ್ ಸೆನ್ಸೇಷನ್ ಮತ್ತು ಭಾರತದ ಮೊದಲ ದಲಿತ ಕ್ರಿಕೆಟಿಗರಾಗಿದ್ದರು. ಅವರು ಕ್ರಿಕೆಟ್ ಆಟದ ಜೊತೆಗೆ ಸಾಮಾಜಿಕ ಹೋರಾಟ ಕೂಡ ಮಾಡುತ್ತಿದ್ದರು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ (Babasaheb Ambedkar) ಅವರ ಪರಿಚಯಸ್ಥರಾಗಿದ್ದರು. ಇಂದಿನ ಭಾರತಕ್ಕೆ ನಮ್ಮ ಸಮಾಜವನ್ನು ಕಾಳಜಿ ವಹಿಸುವ ಇಂತಹ ಕ್ರಿಕೆಟಿಗರು ನಮಗೆ ಬೇಕು — ಕೇವಲ ಹಣ ಮತ್ತು ಕೀರ್ತಿಗಾಗಿ ಹಾತೊರೆಯುವ/ಹಂಬಲಿಸುವ ಕ್ರಿಕೆಟಿಗರಲ್ಲ ಎಂದು ಟೀಕಿಸಿದ್ದಾರೆ.