ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ: ಇಂದು (ಡಿ.4) ರಾತ್ರಿ ಪ್ರಮಾಣವಚನ ಸ್ವೀಕಾರ

Hyderabad : ತೆಲಂಗಾಣ ಕಾಂಗ್ರೆಸ್ (Revanth Reddy CM of Telangana) ಮುಖ್ಯಸ್ಥರಾಗಿ ರೇವಂತ್ ರೆಡ್ಡಿ ಅವರ ಕಾರ್ಯಶೈಲಿಯು ಅವರಿಗೆ ಪಕ್ಷದ ಶ್ರೇಣಿಯೊಳಗೆ ಹಲವಾರು

ವಿರೋಧಿಗಳನ್ನು ಗಳಿಸಿತು, ಆದರೆ 54 ವರ್ಷ ಹರೆಯದ ರೆಡ್ಡಿ ದಕ್ಷಿಣ ರಾಜ್ಯದಲ್ಲಿ BRS ಅನ್ನು ಪದಚ್ಯುತಗೊಳಿಸಲು ಸಾಕಷ್ಟು ಸಮರ್ಥರಾಗಿದ್ದರು. ಜುಲೈ 2021 ರಲ್ಲಿ ತೆಲಂಗಾಣ ಕಾಂಗ್ರೆಸ್

ಮುಖ್ಯಸ್ಥರಾಗಿ ನೇಮಕಗೊಂಡ ನಂತರ ರೆಡ್ಡಿ ಆಡಳಿತಾರೂಢ BRS ಸರ್ಕಾರದ ವಿರುದ್ಧ ಹಲವಾರು ಸಮಸ್ಯೆಗಳ ಕುರಿತು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿದ್ದರು.

2000ನೇ ಇಸವಿಯಲ್ಲಿ ತಮ್ಮ ಆತ್ಮೀಯ ಗೆಳೆಯರೊಬ್ಬರ ಬಳಿ ರೇವಂತ್ ರೆಡ್ಡಿ ಅವರು ‘ಮುಂದೊಂದು ದಿನ ಮುಖ್ಯಮಂತ್ರಿಯಾಗುತ್ತೇನೆ’ ಎಂದು ಹೇಳಿದ್ದರು. ಆ ಸಮಯದಲ್ಲಿ ಅವರು ಯಾವುದೇ

ರಾಜಕೀಯ ಪಕ್ಷದಲ್ಲಿ ಇರಲಿಲ್ಲ. ಅವರು ಕೆಲವೇ ತಿಂಗಳುಗಳ ಹಿಂದೆ, ಹೈದರಾಬಾದ್‌ನ ಪ್ರತಿಷ್ಠಿತ ಜುಬಿಲಿ ಹಿಲ್ಸ್ ಸಹಕಾರಿ ಹೌಸಿಂಗ್ ಸೊಸೈಟಿ (Jubilee Hills Cooperative Housing Society)

ಚುನಾವಣೆ ಗೆದ್ದಿದ್ದರು.ಆಗ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದರು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಜತೆ ಮಾತನಾಡಿದ ರೇವಂತ್ ರೆಡ್ಡಿ

ಅವರ ಗೆಳೆಯರೊಬ್ಬರು “ರೇವಂತ್ ಯುವಕ, ಉತ್ಸಾಹಿ ಮತ್ತು ಮಹತ್ವಾಕಾಂಕ್ಷೆಯುಳ್ಳವರಾಗಿದ್ದರು. ಅವರು ಹೇಳಿದ್ದು ಸ್ವಲ್ಪ ಅತಿ ಎಂದು ತೋರುತ್ತದೆಯಾದರೂ, ನನಗೆ ಆಶ್ಚರ್ಯವಾಗಲಿಲ್ಲ ಎಂದಿದ್ದಾರೆ.

ಎರಡು ದಶಕಗಳ ನಂತರ ಅವರ ಮಾತು ‘ಅತಿ ಆಗಿತ್ತು ಎಂದು ಅನಿಸುತ್ತಿಲ್ಲ. ವಾಸ್ತವವಾಗಿ ಇದು ಅವರ ರಾಜಕೀಯ ಪಥವನ್ನು ವಿವರಿಸುತ್ತದೆ. ಇದು ರೇವಂತ್ ಅವರಿಗೆ ಸುಲಭದ ಸಂಗತಿ ಆಗಿರಲಿಲ್ಲ.

ರೇವಂತ್ ಕಲ್ವಕುರ್ತಿ ವಿಧಾನಸಭಾ ಕ್ಷೇತ್ರದ (Assembly Constituency) ಕೊಂಡರೆಡ್ಡಿಪಲ್ಲಿಯವರು. ನವೆಂಬರ್ 8, 1969 ರಂದು ನರಸುಮ ರೆಡ್ಡಿ ಮತ್ತು ರಾಮಚಂದ್ರಮ್ಮ ಎಂಬ ಕೃಷಿ ಕುಟುಂಬಕ್ಕೆ

ಜನಿಸಿದ ರೇವಂತ್, ಸಹೋದರಿ ಸೇರಿದಂತೆ ಏಳು ಒಡಹುಟ್ಟಿದವರ ಪೈಕಿ ನಾಲ್ಕನೆಯವರಾಗಿದ್ದರು. ಅವರ ಕುಟುಂಬದವರು (Revanth Reddy CM of Telangana) ಯಾರೂ ರಾಜಕೀಯದಲ್ಲಿ ಇರಲಿಲ್ಲ.

ಕಲ್ವಕುರ್ತಿಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದ ಅವರು 1992 ರಲ್ಲಿ ಹೈದರಾಬಾದ್‌ನ AV ಕಾಲೇಜಿನಲ್ಲಿ ಲಲಿತಕಲೆಯಲ್ಲಿ ಪದವಿ ಪಡೆದರು. ಅವರ ಕಾಲೇಜು ದಿನಗಳಲ್ಲಿ, ಅವರು ಬಿಜೆಪಿಯ

ವಿದ್ಯಾರ್ಥಿ ಘಟಕವಾದ ABVP ಯೊಂದಿಗೆ ಸಂಬಂಧ ಹೊಂದಿದ್ದರು. ಮೇ 7, 1992 ರಂದು ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಎಸ್ ಜೈಪಾಲ್ ರೆಡ್ಡಿ (S Jaipal Reddy) ಅವರ

ಸೋದರ ಸೊಸೆ, ರಾಜಕೀಯ ಮತ್ತು ವ್ಯಾಪಾರ ವಲಯಗಳಲ್ಲಿ ಪ್ರಸಿದ್ಧ ಮುಖ ಪದ್ಮಾ ರೆಡ್ಡಿ (Padma Reddy) ಅವರ ಪುತ್ರಿ ಗೀತಾ ರೆಡ್ಡಿ (Geeta Reddy) ಅವರನ್ನು ವಿವಾಹವಾದರು.

ಅವರು ಜಾಹೀರಾತು ಮತ್ತು ಮುದ್ರಣ ಏಜೆನ್ಸಿಯನ್ನು ಆರಂಭಿಸಿ ನಾಲ್ಕು ವರ್ಷಗಳಲ್ಲಿ, ಹೈದರಾಬಾದ್ ಐಟಿ ಕೇಂದ್ರವಾಗಿ ಬೆಳೆಯಲು ಪ್ರಾರಂಭಿಸುವ ಸಮಯದಲ್ಲಿ ರಿಯಲ್ ಎಸ್ಟೇಟ್‌ಗೆ ಪ್ರವೇಶಿಸಿದರು.

ಅಂದಿನಿಂದ ಅವರು ಹಿಂತಿರುಗಿ ನೋಡಲೇ ಇಲ್ಲ. ಅವರು ಜುಬಿಲಿ ಹಿಲ್ಸ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ನಿರ್ದೇಶಕರಾಗಿ ಮತ್ತು ಎರಡು ಬಾರಿ ಅದರ ಕಾರ್ಯಕಾರಿ ಸಮಿತಿಯ

ಪದಾಧಿಕಾರಿಯಾಗಿ ಆಯ್ಕೆಯಾದರು.

ಇದನ್ನು ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧ: ಮಾರ್ಗಸೂಚಿ ಹೊರಡಿಸಿದ ಟ್ರಾಫಿಕ್ ಪೊಲೀಸ್

Exit mobile version