Bengaluru: ಬೆಂಗಳೂರಿನ (Vehicular Ban – Blore Traffic Police) ಹಲವು ಪ್ರದೇಶಗಳಲ್ಲಿ ಸಂಚಾರ ಬದಲಾವಣೆಗಳನ್ನು ಮಾಡಲಾಗಿದ್ದು, ಬೆಂಗಳೂರಿನ ವರ್ಸೋವ ಲೇಔಟ್ ಬಳಿಯ
ಫ್ಲೈಓವರ್ (Flyover) ನಲ್ಲಿ ಮತ್ತು ಅದರ ಸುತ್ತಲೂ ಬೆಂಗಳೂರು ಟ್ರಾಫಿಕ್ ಪೊಲೀಸರು ಮಾರ್ಗಸೂಚಿ ಸಂಚಾರ ಬದಲಾವಣೆಗಳನ್ನು ಘೋಷಿಸಿದ್ದಾರೆ. ಇನ್ನು ಹಲವೆಡೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಬೆಂಗಳೂರು ನಗರ ಈಗ ಟ್ರಾಫಿಕ್ ಸಿಟಿಯಾಗಿ ಬದಲಾಗಿದ್ದು, ತಮ್ಮ ಹೆಚ್ಚಿನ ಸಮಯವನ್ನು ಟ್ರಾಫಿಕ್ನಲ್ಲಿ ಸಿಲುಕಿ ಕಳೆಯುವಂತಾಗಿದೆ. ಇನ್ನು ಟ್ರಾಫಿಕ್ ಸಮಸ್ಯೆಗಳನ್ನು ನಿಯಂತ್ರಿಸುವ ಸಲುವಾಗಿ
ಬೆಂಗಳೂರು ಟ್ರಾಫಿಕ್ ಪೊಲೀಸರು (Bengaluru Traffic Police) ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ನಿರ್ಬಂಧನೆಗಳನ್ನು, ಮಾರ್ಗಸೂಚಿ ಬದಲಾವಣೆಗಳನ್ನು ಹೊರಡಿಸಿದ್ದಾರೆ.
ನಗರದ ವರ್ಸೋವ ಲೇಔಟ್ (Varsova Layout) ಬಳಿಯ ಫ್ಲೈಓವರ್ನಲ್ಲಿ ಮತ್ತು ಅದರ ಸುತ್ತಲೂ ಬೆಂಗಳೂರು ಟ್ರಾಫಿಕ್ ಪೊಲೀಸರು ಮಾರ್ಗಸೂಚಿ ಸಂಚಾರ ಬದಲಾವಣೆಗಳನ್ನು ಘೋಷಿಸಿದ್ದು,
ನಿರ್ಮಾಣ ಹಂತದಲ್ಲಿರುವ ಕಗ್ಗದಾಸಪುರ (Kaggadasapura) ಮೇಲ್ಸೇತುವೆ ಮತ್ತು ಸುತ್ತಮುತ್ತ ಸಂಚಾರ (Vehicular Ban – Blore Traffic Police) ವ್ಯತ್ಯಯ ಹಿನ್ನೆಲೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಈ ಪ್ರದೇಶಗಳಲ್ಲಿ ವಾಹನ ಸಂಚಾರ ನಿಷೇಧ
ಇನ್ನು ಕೆಲ ಕಡೆ ವಾಹನ ಸಂಚಾರ ನಿಷೇಧಿಸಲಾಗಿದೆ. ಪೂರ್ವಂಕರ ಅಪಾರ್ಟ್ಮೆಂಟ್ (Apartment)ನಿಂದ ಕಗ್ಗದಾಸಪುರ ರೈಲ್ವೆ ಗೇಟ್ ನಿಲ್ದಾಣದವರೆಗೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ
ಇರುವುದಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೆತ್ತಿಕೊಂಡಿರುವ ನಿರ್ಮಾಣ ಕಾಮಗಾರಿ ಮುಗಿಯುವವರೆಗೂ ಈ ಪ್ರದೇಶದಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಕಗ್ಗದಾಸಪುರ ಮುಖ್ಯರಸ್ತೆಯ ನಾಗವಾರಪಾಳ್ಯದಿಂದ ಕಗ್ಗದಾಸಪುರ ರೈಲ್ವೇ ಗೇಟ್ ಜಂಕ್ಷನ್ (Railway Gate Junction) ವರೆಗೆ ಸಂಚರಿಸುವ ವಾಹನಗಳನ್ನು 5ನೇ ಅಡ್ಡ ರಸ್ತೆ ಬೈರಸಂದ್ರ ಜಂಕ್ಷನ್ಗೆ
ತಿರುಗಿಸಿಕೊಳ್ಳಲು ಮಾರ್ಗ ಬದಲಾವಣೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. ವಾಹನ ಸವಾರರು ಬಲ ತಿರುವು ಪಡೆದು ಜಿ.ಎಂ.ಪಾಳ್ಯ ಜಂಕ್ಷನ್ ತಲುಪಲು ಹಾಗೂ ಕಗ್ಗದಾಸಪುರ
ರೈಲ್ವೆ ಗೇಟ್ನಿಂದ ನಾಗವಾರಪಾಳ್ಯ (Nagavarapalya) ಕಡೆಗೆ ಹೋಗುವ ವಾಹನಗಳು ರೈಲ್ವೇ ಗೇಟ್ ಜಂಕ್ಷನ್ನಲ್ಲಿ ಎಡಕ್ಕೆ ತಿರುಗಿ ವಿಜ್ಞಾನನಗರ ಜಂಕ್ಷನ್ನಲ್ಲಿ ಬಲಕ್ಕೆ ತಿರುಗುವಂತೆ ಸೂಚಿಸಲಾಗಿದೆ.
ವಾಹನಗಳು ಬಿಇಎಂಎಲ್ ಜಂಕ್ಷನ್ (BEML Junction) ನಲ್ಲಿ ಬಲಕ್ಕೆ ತಿರುಗಿ ಗೀತಾಂಜಲಿ ಲೇಔಟ್ ಜಂಕ್ಷನ್ನಲ್ಲಿ ಮತ್ತೊಂದು ಬಲಕ್ಕೆ ತಿರುಗಬೇಕು ಇದರಿಂದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ
ಸಂಸ್ಥೆಯಿಂದ ನಾಗವಾರಪಾಳ್ಯ ತಲುಪಬಹುದು. ಪ್ರಯಾಣಿಕರು ಜಿಎಂ ಪಾಳ್ಯ ಜಂಕ್ಷನ್ (GM Palya Junction) ನಲ್ಲಿ ಬಲ ತಿರುವು ಪಡೆದು ನಂತರ ಬೈರಸಂದ್ರ ಮುಖ್ಯರಸ್ತೆಯ ಮೂಲಕ
ನಾಗವಾರಪಾಳ್ಯವನ್ನು ತಲುಪಬಹುದು.
ಇದನ್ನು ಓದಿ: ತೆಲಂಗಾಣ ಚುನಾವಣೆಯಲ್ಲಿ ಸದ್ದು ಮಾಡಿದ್ದ ಎಮ್ಮೆ ಕಾಯುತ್ತಿದ್ದೇನೆಂದ ಯುವತಿ ಗೆದ್ದುಪಡೆದ ಮತಗಳೆಷ್ಟು?
- ಭವ್ಯಶ್ರೀ ಆರ್ ಜೆ