UP : ಅಯೋಧ್ಯೆಯ ಶಾಲೆಯ ಮಕ್ಕಳಿಗೆ ಅನ್ನ-ಉಪ್ಪು ಮಿಶ್ರಿತ ಊಟ ; ಪ್ರಾಂಶುಪಾಲ ಅಮಾನತು!

UP

Uttar Pradesh : ಉತ್ತರ ಪ್ರದೇಶದ ಅಯೋಧ್ಯೆಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೇಯಿಸದ ಅನ್ನ(Rice Salt mixed food for students) ಮತ್ತು ಉಪ್ಪು ಮಿಶ್ರಿತ ಊಟದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ಆಗಿದೆ.

ಈ ವೀಡಿಯೋ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ(Rice Salt mixed food for students), ಕೆಲವೇ ಗಂಟೆಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಿ ಎಂದು ಆದೇಶ ಹೊರಡಿಸಿ ಗ್ರಾಮದ ಮುಖ್ಯಸ್ಥರಿಗೆ ನೋಟಿಸ್ ಕಳುಹಿಸಿದ್ದಾರೆ.

ಶಾಲೆಯಿಂದ ವೈರಲ್ ಆಗಿರುವ ವಿಡಿಯೋದಲ್ಲಿ, ಮಧ್ಯಾಹ್ನದ ಬಿಸಿ ಊಟದ ಕಾರ್ಯಕ್ರಮದ ಅಂಗವಾಗಿ ಮಕ್ಕಳು ಬೇಯಿಸಿದ ಅನ್ನ ಮತ್ತು ಉಪ್ಪನ್ನು ತಿನ್ನುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು.

ವೀಡಿಯೊದಲ್ಲಿ ಶಾಲೆಯ ವಿದ್ಯಾರ್ಥಿಗಳು ಕೊಟ್ಟಿರುವ ಉಪ್ಪು-ಅನ್ನ ಮಿಶ್ರಿತ ಆಹಾರವನ್ನು ಸೇವಿಸುತ್ತಿರುವುದನ್ನು ತೋರಿಸುತ್ತದೆ.

ವೀಡಿಯೊ ಸೆರೆಹಿಡಿದಿರುವ ವ್ಯಕ್ತಿ, ಆ ದಿನದ ಉಪಹಾರದ ಪಟ್ಟಿಯನ್ನು ಸಹ ತೋರಿಸಿದ್ದಾರೆ. ಈ ವೀಡಿಯೋದಲ್ಲಿರುವ ವಿಷಯವನ್ನು ಅರಿತು ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಅವರು,

ಇದನ್ನೂ ಓದಿ : https://vijayatimes.com/health-tips-for-weight-gain/

ಅಯೋಧ್ಯೆಯ ಚೌರೆಬಜಾರ್ ಪ್ರದೇಶದ ದಿಹ್ವಾ ಪಾಂಡೆ ಅವರ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಏಕ್ತಾ ಯಾದವ್ ಅವರನ್ನು ಅಮಾನತುಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ ಮತ್ತು ಗ್ರಾಮದ ಮುಖ್ಯಸ್ಥರಿಗೆ ನೋಟಿಸ್ ಕೂಡ ರವಾನಿಸಿದ್ದಾರೆ.

ಶಾಲೆಯು ಹಳ್ಳಿಯೊಂದಕ್ಕೆ ಸಮೀಪದಲ್ಲಿರುವುದರಿಂದ, ಹಲವಾರು ವಿದ್ಯಾರ್ಥಿಗಳು ತಮ್ಮ ಊಟವನ್ನು ಸಂಗ್ರಹಿಸಿ ಊಟದ ವಿರಾಮದ ಸಮಯದಲ್ಲಿ ಮನೆಗೆ ಹೋಗುತ್ತಾರೆ.

ಇದರಿಂದ ಕೆಲ ಪೋಷಕರಿಗೆ ಅನ್ನ-ಉಪ್ಪಿನ ಪರಿಸ್ಥಿತಿ ತಿಳಿದು ಬಂದಿದೆ. ಹಲವಾರು ಪೋಷಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸಿ ಕಾಲಕಾಲಕ್ಕೆ ದಿಢೀರ್ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ.

ವೀಡಿಯೋ ವೀಕ್ಷಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ : https://twitter.com/ashoswai/status/1575159368558923780?s=20&t=no9S43pJAjld6GW4DRndWA

ಅಯೋಧ್ಯೆ ಡಿಎಂ ನಿತೀಶ್ ಕುಮಾರ್ ಮಾತನಾಡಿ, “ವೀಡಿಯೊವನ್ನು ನೋಡಿದ ನಂತರ ನಾವು ತಕ್ಷಣ ತನಿಖೆಗೆ ಆದೇಶಿಸಿದ್ದೇವೆ. ಕೂಡಲೇ ಅಮಾನತು ಮಾಡುವಂತೆಯೂ ಆದೇಶಿಸಿದ್ದೇನೆ.

ಮುಖ್ಯೋಪಾಧ್ಯಾಯಿನಿಯನ್ನು ಅಮಾನತು ಮಾಡಿ ಮುಖ್ಯಸ್ಥರ ವಿರುದ್ಧ ನೋಟಿಸ್ ಕಳುಹಿಸಲಾಗುವುದು ಮತ್ತು ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

Exit mobile version