ಚಪಾತಿ , ರೊಟ್ಟಿಯ ಮತ್ತು ಅನ್ನದ ಜೊತೆ ಸವಿಯಲು ಬಳ್ಳಿಯ ರುಚಿಕರವಾದ ಚಟ್ನಿ

ಬೇಕಾಗಿರುವ ಪದಾರ್ಥಗಳು….
- 2 tbsp ಎಣ್ಣೆ
-1 tdsp ಜೀರಿಗೆ - 100 ಗ್ರಾಂಡ್ ಸಾಂಬಾರ್ ಈರುಳ್ಳಿ ಅಥವಾ ಒಂದು ಸಣ್ಣ ಈರುಳ್ಳಿ
- 2 ಟೊಮ್ಯಾಟೋ
- 2 ಹಸಿ ಮೆಣಸಿನಕಾಯಿ
-5 ಬೆಳ್ಳುಳ್ಳಿ ಹೋಳುಗಳು - ಕರಿಬೇವಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- 1 ಹೀರೆಕಾಯಿ
- 1 ಚಿಟಿಕೆ ಅರಿಶಿಣ
- 2 tbsp ಹುಣಸೆ ಹಣ್ಣಿನ ರಸ
- ಅರ್ಧ ಗ್ಲಾಸ್ ನೀರು
- ರುಚಿಗೆ ತಕ್ಕಷ್ಟು ಉಪ್ಪು ಮಾಡುವ ವಿಧಾನ ಬಾಣಲಿಗೆ ಎರಡು ಟೀ ಸ್ಪೂನ್ ಎಣ್ಣೆ ಹಾಕಿ ಅದು ಕಾದ ನಂತರ ಜೀರಿಗೆ, ಬೆಳ್ಳುಳ್ಳಿ ,ಈರುಳ್ಳಿ ,ಅರಿಶಿನ ಪುಡಿ ಹಾಕಿ ಬಾಡಿಸಿಕೊಳ್ಳಿ ನಂತರ ಹೆಚ್ಚಿದ ಟೊಮ್ಯಾಟೋವನ್ನು ಕೂಡ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಬಾಡಿಸಿ ಹಸಿವಾಸನೆ ಹೋದ ನಂತರ ಕೆಂಪು ಮೆಣಸು, ಹೀರೇಕಾಯಿ ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ ಗ್ರೇವಿ ಹದಕ್ಕೆ ಬರಲು ಸ್ವಲ್ಪ ನೀರು ಹಾಕಿ ನಂತರ ಪ್ಲೇಟ್ ಮುಚ್ಚಿ ಬೇಯಲು ಬಿಡಿ ಬೆಂದ ನಂತರ ಹುಣಸೆಹಣ್ಣು ರಸ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ನಂತರ ಆ ಮಿಶ್ರಣ ತಣ್ಣಗಾಗಲು ಬಿಟ್ಟು ಅದನ್ನು ಮಿಕ್ಸಿಯಲ್ಲಿ ಗ್ರೇಟ್ ಮಾಡಿಕೊಳ್ಳಿ ರುಚಿ ರುಚಿಯಾದ ಹೀರೆಕಾಯಿ ಚಟ್ನಿ ಸವಿಯಲು ಸಿದ್ಧ

ಹೀರೆಕಾಯಿ ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು
ಹೀರೆಕಾಯಿನಲ್ಲಿ ನಾರಿನ ಅಂಶ, ವೈಟಮಿನ್ M, ವೈಟಮಿನ್ C ,ಕಬ್ಬಿಣ ಮೆಗ್ನೀಷಿಯಂ ಮತ್ತು ವಿಟಮಿನ್ B6 ನಂತಹ ಅಗತ್ಯ ಘಟಕಗಳಲ್ಲಿ ಸಮೃದ್ಧವಾಗಿದೆ. ಹೀರೆಕಾಯಿ ನೈಸರ್ಗಿಕವಾದ ಕ್ಯಾಲೋರಿಸ್ ಕಂಟೆಂಟ್ ಮತ್ತು ಹೆಲ್ದಿ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಕೊಲೆಸ್ಟ್ರಾಲ್ ಇರುವುದರಿಂದ ಇದು ದೇಹಕ್ಕೆ ಒಳ್ಳೆಯ ಕೊಬ್ಬಿನ ಅಂಶ ಇದನ್ನು ಸೇವಿಸಿದರೆ ಆಗುವ ಪ್ರಯೋಜನಗಳು
ದೃಷ್ಟಿ ವರ್ತಿಸುತ್ತದೆ
ರಕ್ತಹೀನತೆಗೆ ಒಳ್ಳೆಯ ಪರಿಹಾರ
ತೂಕ ಇಳಿಯುವಿಕೆ
ಮಲಬದ್ಧತೆ
ಲಿವರ್ ಸಮಸ್ಯೆ
ಮಧುಮೇಹ ಹುಣ್ಣನ್ನು ಗುಣಪಡಿಸುತ್ತದೆ
ಇಷ್ಟೆಲ್ಲಾ ಆರೋಗ್ಯಕರ ಉಪಯೋಗ ಇರುವಂತ ದಿನನಿತ್ಯ ಸೇವಿಸಲು ಪ್ರಾರಂಭ ಮಾಡಿ