• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಪಂಚಭೂತಗಳಲ್ಲಿ ಲೀನವಾದ ಸ್ಪಂದನಾ ಮಲ್ಲೇಶ್ವರಂನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌, ವಿಶೇಷ ಸುದ್ದಿ
ಪಂಚಭೂತಗಳಲ್ಲಿ ಲೀನವಾದ ಸ್ಪಂದನಾ ಮಲ್ಲೇಶ್ವರಂನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ
0
SHARES
209
VIEWS
Share on FacebookShare on Twitter

Bengaluru: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ (Spandana) ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ (Harishchandra Ghat) ಶಾಸ್ತ್ರೋಕ್ತವಾಗಿ ಮಾಡಲಾಯಿತು. ಈ ವೇಳೆ ಸಾವಿರಾರು ಜನರು ನೆರೆದಿದ್ದರು. ಬ್ಯಾಂಕಾಕ್ (Bangkok) ಪ್ರವಾಸಕ್ಕೆ ಸ್ನೇಹಿತರ ಜೊತೆಗೆ ಹೋಗಿದ್ದ ವೇಳೆ ಸ್ಪಂದನಾ ಅವರಿಗೆ ಹೃದಯಾಘಾತ ಆಗಿತ್ತು. ಶಾಪಿಂಗ್ ಮುಗಿಸಿ ವಿಶ್ರಾಂತಿ ಪಡೆಯುವ ಸಲುವಾಗಿ ಮಲಗಿದ್ದವರು ಮತ್ತೆ ಏಳಲೇ ಇಲ್ಲ. ಬೇರೆ ದೇಶದಲ್ಲಿ ಸಾವನ್ನಪ್ಪಿದ್ದ ಕಾರಣ ಕಾನೂನು ಪ್ರಕ್ರಿಯೆ ಮುಗಿಸಿ ತದ ನಂತರ ಭಾರತಕ್ಕೆ ಮೃತದೇಹ ತರಬೇಕಿತ್ತು. ಹಾಗಾಗಿ ಇಂದು ಸ್ಪಂದನಾರ ಅಂತ್ಯಕ್ರಿಯೆ ಮಾಡಲಾಗಿದೆ.

spandana funeral

ನಟ ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ಇನ್ನು ಎಲ್ಲರ ನೆನಪಿನಲ್ಲಷ್ಟೇ. ಮಲ್ಲೇಶ್ವರಂ (Malleshwaram) ಹತ್ತಿರವಿರುವ ಹರಿಶ್ಚಂದ್ರ ಘಾಟ್‌ನಲ್ಲಿ ಆರ್ಯ ಈಡಿಗ ಸಮುದಾಯದ ಪದ್ಧತಿ ಪ್ರಕಾರ ವಿದ್ಯುತ್ ಚಿತಾಗಾರದಲ್ಲಿ ಸ್ಪಂದನಾ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ನಟ ವಿಜಯ್ ರಾಘವೇಂದ್ರ ಹಾಗೂ ಅವರ ಪುತ್ರ ಶೌರ್ಯ (Shourya) ವಿಧಿ ವಿಧಾನಗಳನ್ನು ನೆರವೇರಿಸಿದರು.

ಮದುವೆಯಲ್ಲಿ ಉಡಿಸಿದ ಸೀರೆಯನ್ನು ಸ್ಪಂದನಾ ಮೃತ ದೇಹಕ್ಕೆ ಹಾಕಲಾಗಿತ್ತು. ಸ್ಪಂದನಾ (Spandana) ಮೃತದೇಹಕ್ಕೆ ಸಂಪ್ರದಾಯ ಬದ್ಧವಾಗಿ ವಿಧಿ ವಿಧಾನಗಳನ್ನು ಮಾಡಿದ ನಂತರ ವಿಶೇಷವಾಗಿ ತಯಾರಾದ ವಾಹನದಲ್ಲಿ ಪಾರ್ಥಿವ ಶರೀರವನ್ನು ಹರಿಶ್ಚಂದ್ರ ಘಾಟ್‌ಗೆ (Harishchandra Ghat) ತೆಗೆದುಕೊಂಡು ಹೋಗಲಾಯಿತು.

ಸ್ಪಂದನಾ ಅವರು ಬ್ಯಾಂಕಾಕ್‌ (Bangkok) ಪ್ರವಾಸಕ್ಕೆ ಸ್ನೇಹಿತರ ಜೊತೆಗೆ ಹೋಗಿದ್ದ ವೇಳೆ ಅವರಿಗೆ ಹೃದಯಾಘಾತವಾಗಿ ನಿಧನರಾಗಿದ್ದರು. ಸ್ಪಂದನಾ ಅವರ ಮೃತದೇಹ ಆಗಸ್ಟ್ (August) 8 ರ ತಡರಾತ್ರಿ ಥಾಯ್ಲೆಂಡ್‌ನಿಂದ (Thailand) ಬೆಂಗಳೂರಿಗೆ ಆಗಮಿಸಿತ್ತು. ಮುಂಜಾನೆ 6 ಗಂಟೆಯಿಂದ ಮಧ್ಯಾಹ್ನ 1.45 ವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಆಗ ಸ್ಪಂದನಾ ಪಾರ್ಥಿವ ಶರೀರದ ದರ್ಶನವನ್ನು ಕನ್ನಡ ಚಿತ್ರರಂಗದ ಗಣ್ಯರು, ಸಾಮಾನ್ಯ ಜನರು, ರಾಜಕಾರಣಿಗಳು, ಕುಟುಂಬಸ್ಥರು, ಸ್ನೇಹಿತರು ಪಡೆದಿದ್ದಾರೆ.

ಬಿಕೆ ಶಿವರಾಂ (B.K.Shivaram) ಅವರನ್ನು ಪ್ರಾಣ ಪಕ್ಷಿ ಎಲ್ಲಿದೆ ಅಂತ ಕೇಳಿದಾಗ ಅವರು ನನ್ನ ಮಗಳಲ್ಲಿದೆ ಅಂದಿದ್ದರಂತೆ . ಮಗಳನ್ನು ಕಳೆದುಕೊಂಡ ಬಿಕೆ ಶಿವರಾಂ ಅವರ ಪರಿಸ್ಥಿತಿ ಏನಾಗಿರಬಹುದು, ಸೋಶಿಯಲ್ ಮೀಡಿಯಾದಲ್ಲಿ (Social Media) ಈ ಹಿಂದೆ ಸ್ಪಂದನಾ ಅವರು ತಂದೆಯ ಜೊತೆಗೆ ಸಾಕಷ್ಟು ಫೋಟೋಗಳನ್ನು (Photo) ಹಂಚಿಕೊಂಡು Daddys Girl, Daddys daughter ಅಂತೆಲ್ಲ ಬರೆದುಕೊಂಡಿದ್ದರು. ಎಲ್ಲದಕ್ಕೂ ಅಚ್ಚು ಅಚ್ಚು ಅಂತ ಸ್ಪಂದನಾ ಅವರನ್ನು ಕರೆಯುತ್ತಿದ್ದ ವಿಜಯ್ ರಾಘವೇಂದ್ರ ಪರಿಸ್ಥಿತಿ ಏನು 14 ವರ್ಷದ ಮಗ ಶೌರ್ಯನಿಗೆ (Shourya) ಅಮ್ಮ ಬೇಕು ಅಂದರೆ ಏನು ಮಾಡೋದು ಈಗ ಇವೆಲ್ಲಾ ಪ್ರಶ್ನೆಗಳಿಗೆ ಉತ್ತರವೇ ಇಲ್ಲದಂತಾಗಿದೆ .

ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Punit Rajkumar), ಪ್ರಣಮ್ ದೇವರಾಜ್ ಸೇರಿ ಅನೇಕರು ಸ್ಪಂದನಾ ಅವರ ಮೃತ ದೇಹ ನೋಡುತ್ತಿದ್ದಂತೆ ಬಿಕ್ಕಳಿಸಿ ಅಳುತ್ತಿದ್ದರು. ರಕ್ಷಿತಾ, ನಟ ಜಯರಾಮ್ ಕಾರ್ತಿಕ್, ಮೇಘನಾ ರಾಜ್, ನಟ ಯಶ್ (Yash), ರಮೇಶ್ ಅರವಿಂದ್, ನಿರೂಪಕಿ ಅನುಶ್ರೀ, ಸುಂದರ್ ರಾಜ್, ಪ್ರಿಯಾಂಕಾ ಉಪೇಂದ್ರ (Priyanka Upendra), ನೆನಪಿರಲಿ ಪ್ರೇಮ್, ಅನಿರುದ್ಧ, ಧ್ರುವ ಸರ್ಜಾ (Dhruva Sarja), ರಾಧಿಕಾ ಕುಮಾರಸ್ವಾಮಿ, ಸಾಧುಕೋಕಿಲ (Sadhukokila), ಉಮಾಶ್ರೀ, ವಿನೋದ್ ರಾಜ್, ಅಮೂಲ್ಯಾ, ದೊಡ್ಡಣ್ಣ, ಧನ್ಯಾ ರಾಮ್‌ಕುಮಾರ್, ಡಾ ರಾಜ್‌ಕುಮಾರ್ (Dr. Rajkumar) ಕುಟುಂಬಸ್ಥರು ಸ್ಪಂದನಾ ಅವರ ಪಾರ್ಥಿವ ಶರೀರದ ದರ್ಶನ ಪಡೆದರು.

ಭವ್ಯಶ್ರೀ ಆರ್.ಜೆ

Tags: Funeralharishchandraghatmalleshwaramshouryaspandanavijayaraghavendra

Related News

ಶಿವಮೊಗ್ಗ ಪ್ರಕರಣ: ಇದೆಲ್ಲಾ ಏನ್ ಹೊಸದಾಗಿ ನಡೆಯುತ್ತಾ? ಗೃಹ ಸಚಿವ ಪರಮೇಶ್ವರ್ ಅಸಡ್ಡೆಉತ್ತರ
ಪ್ರಮುಖ ಸುದ್ದಿ

ಶಿವಮೊಗ್ಗ ಪ್ರಕರಣ: ಇದೆಲ್ಲಾ ಏನ್ ಹೊಸದಾಗಿ ನಡೆಯುತ್ತಾ? ಗೃಹ ಸಚಿವ ಪರಮೇಶ್ವರ್ ಅಸಡ್ಡೆಉತ್ತರ

October 2, 2023
ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಫಲಿತಾಂಶ ತಡೆಹಿಡಿಯುವಂತೆ ಅ.6ರವರೆಗೆ ಕೆಇಎಗೆ ವಿದ್ಯಾರ್ಥಿಗಳ ಮನವಿ
ಪ್ರಮುಖ ಸುದ್ದಿ

ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಫಲಿತಾಂಶ ತಡೆಹಿಡಿಯುವಂತೆ ಅ.6ರವರೆಗೆ ಕೆಇಎಗೆ ವಿದ್ಯಾರ್ಥಿಗಳ ಮನವಿ

October 2, 2023
ಬೆಂಗಳೂರು ನಗರವನ್ನು 5 ಜಿಲ್ಲೆಗಳಾಗಿ ವಿಂಗಡಿಸಿ ಅಧ್ಯಕ್ಷರ ನೇಮಕ ಮಾಡಿದ ಎಐಸಿಸಿ
ದೇಶ-ವಿದೇಶ

ಬೆಂಗಳೂರು ನಗರವನ್ನು 5 ಜಿಲ್ಲೆಗಳಾಗಿ ವಿಂಗಡಿಸಿ ಅಧ್ಯಕ್ಷರ ನೇಮಕ ಮಾಡಿದ ಎಐಸಿಸಿ

October 2, 2023
Apple iPhone15: ಇತ್ತೀಚಿನ ಹೊಸ ಐಫೋನ್‌ಗಳು ಹೆಚ್ಚು ಬಿಸಿಯಾಗುತ್ತಿರುವುದಕ್ಕೆ ಇಲ್ಲಿದೆ ಕಾರಣಗಳು
ದೇಶ-ವಿದೇಶ

Apple iPhone15: ಇತ್ತೀಚಿನ ಹೊಸ ಐಫೋನ್‌ಗಳು ಹೆಚ್ಚು ಬಿಸಿಯಾಗುತ್ತಿರುವುದಕ್ಕೆ ಇಲ್ಲಿದೆ ಕಾರಣಗಳು

October 2, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.