ಕೊರೊನಾ ಸೋಂಕಿನಿಂದ ಗುಣಮುಖರಾದ ರಿಷಭ್ ಪಂತ್: ಸದಸ್ಯದಲ್ಲಿ ತಂಡವನ್ನ ಕೂಡಿಕೊಳ್ಳಲಿರುವ ವಿಕೆಟ್ ಕೀಪರ್

ಹೊಸದಿಲ್ಲಿ, ಜು. 22: ಕೊರೊನಾಗೆ ತುತ್ತಾಗಿದ್ದ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವ ಬೆನ್ನಲ್ಲೇ ಸೋ‌ಂಕಿನಿಂದ ಗುಣಮುಖರಾಗಿದ್ದಾರೆ.

ಟೀಂ ಇಂಡಿಯಾ ಆಟಗಾರರ ಜೊತೆಗೆ ಬಯೋ-ಬಬಲ್ ನಲ್ಲಿದ್ದ ವೇಳೆ ಜುಲೈ 8ರಂದು ರಿಷಭ್ ಪಂತ್ ಅವರಿಗೆ ಕೊರೊನಾ‌ ಸೋಂಕು ಕಾಣಿಸಿಕೊಂಡಿತ್ತು.‌ ಹೀಗಾಗಿ ತಂಡದ ಇತರೆ ಆಟಗಾರರಿಂದ ದೂರ ಉಳಿದಿದ್ದ ಪಂತ್, ಯುಕೆ ಮಾರ್ಗಸೂಚಿ ಅನ್ವಯ 10 ದಿನಗಳ ಐಸೊಲೇಷನ್ ಅವಧಿ ಮುಗಿಸಿದ್ದು, ಸದ್ಯದಲ್ಲೇ ತಂಡವನ್ನ ಸೇರಿಕೊಳ್ಳಲಿದ್ದಾರೆ.

ರಿಷಭ್ ಪಂತ್ ಕೊರೊನಾದಿಂದ ಗುಣಮುಖ ಹೊಂದಿರುವ ಬಗ್ಗೆ ಬಿಸಿಸಿಐ ಅಧಿಕೃತ ಟ್ವಿಟರ್ ಖಾತೆಯಲ್ಲಿ ಘೋಷಿಸಲಾಗಿದ್ದು, “ರಿಷಭ್ ಪಂತ್, ಗ್ರೇಟ್ ಟು ಹ್ಯಾವ್ ಯು ಬ್ಯಾಕ್” ಎಂದು ಬರೆಯುವ ಮೂಲಕ ಯುವ ಆಟಗಾರನನ್ನು ಸ್ವಾಗತಿಸಲಾಗಿದೆ.

ನ್ಯೂಜಿಲೆಂಡ್ ವಿರುದ್ಧದ ವಿಶ್ವ‌ ಟೆಸ್ಟ್‌ ಚಾಂಪಿಯನ್ಷಿಪ್ ಫೈನಲ್ ಪಂದ್ಯ ಬಳಿಕ ದೊರೆತಿದ್ದ ವಿರಾಮದ ವೇಳೆ ರಿಷಭ್ ಪಂತ್ ಯುರೋ 2020 ಗೇಮ್ ನಲ್ಲಿ ಕಾಣಿಸಿಕೊಂಡಿದ್ದರು.‌ ಈ ವೇಳೆ ಪಂತ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಸಾಬೀತಾಗಿತ್ತು.

Exit mobile version