ಚಿತ್ರಮಂದಿರಗಳಿಗೆ ‘ಹೀರೋ‌’ ಎಂಟ್ರಿಗೆ ಡೇಟ್ ಫಿಕ್ಸ್: ಮಾರ್ಚ್ 5ರಂದು ಬಿಡುಗಡೆಯಾಗಲಿದೆ ರಿಷಭ್ ಶೆಟ್ಟಿಯ ಹೀರೋ ಚಿತ್ರ

ಬೆಂಗಳೂರು, ಫೆ. 11: ಕೊರೊನಾ ‌ಸೋಂಕಿನ ಆರ್ಭಟ ಕಡಿಮೆಯಾಗುತ್ತಿದ್ದಂತೆ ಸಾಲು ಸಾಲು ಚಿತ್ರಗಳು ಬೆಳ್ಳಿತೆರೆಗೆ ಲಗ್ಗೆ ಇಡುತ್ತಿವೆ. ಈಗಾಗಲೇ ಹಲವು ಸ್ಟಾರ್ ನಟರ ಚಿತ್ರಗಳು ಬಿಡುಗಡೆಗೆ ದಿನಾಂಕ ನಿಗದಿಯಾಗಿವೆ.‌ ಈ ಸಾಲಿಗೆ ಹೊಸ ಸೇರ್ಪಡೆಯಾಗಿ ರಿಷಭ್ ಶೆಟ್ಟಿ ಅಭಿನಯದ ‘ಹೀರೋ’ ಚಿತ್ರ ಸೇರಿಕೊಂಡಿದೆ.

ಕೊರೊನಾ ನಡುವೆಯೇ ಸದ್ದಿಲ್ಲದೆ ನಿರ್ಮಾಣವಾಗಿರುವ ಹೀರೋ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಇದೀಗ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಗೊಳಿಸಿರುವ ಚಿತ್ರತಂಡ ಮಾರ್ಚ್ 5ರಂದು ಬಿಡುಗಡೆ ಮಾಡಲು ತೀರ್ಮಾನಿಸಿದೆ. ಈ ಹಿಂದೆ ಹೀರೋ ಸಿನಿಮಾದ ಪುಟ್ಟ ವಿಡಿಯೋ ಹಾಗೂ ಒಂದು ಫಸ್ಟ್​ಲುಕ್​ ಪೋಸ್ಟರ್​ ಹಂಚಿಕೊಂಡಿದ್ದರು. ಇತ್ತೀಚೆಗಷ್ಟೆ ಹೀರೋ ಚಿತ್ರದ ಟ್ರೇಲರ್​ ರಿಲೀಸ್​ ಆಗಿತ್ತು. ಸಿನಿಮಾದ ಟ್ರೇಲರ್​ಗೆ ಅಭಿಮಾನಿಗಳಿಂದ
ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.

ಸಿನಿಮಾದ ಟ್ರೇಲರ್ ನೋಡಿದ ಅಭಿಮಾನಿಗಳು ಚಿತ್ರದ ರಿಲೀಸ್ ದಿನಾಂಕ ಯಾವಾಗ ಎಂದು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಈ ಕುತೂಹಲಕ್ಕೆ ತೆರೆ ಎಳೆದಿರುವ ಚಿತ್ರತಂಡ ರಿಷಭ್​ ಶೆಟ್ಟಿ ಹಾಗೂ
ಗಾನವಿ ಲಕ್ಷ್ಮಣ್​ ಅಭಿನಯದ ಹೀರೋ ಸಿನಿಮಾ ಮಾರ್ಚ್​ 5ಕ್ಕೆ ತೆರೆ ಕಾಣಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸಿದೆ.

Exit mobile version