ಪಕ್ಷನಿಷ್ಠ ಕರಸೇವಕನಿಗೆ ರಾಜಸ್ಥಾನದ ಸಿಎಂ ಪಟ್ಟ ನೀಡಿದ ಬಿಜೆಪಿ..!

Jaipur: ಮಹತ್ವದ ಬೆಳವಣಿಗೆಯಲ್ಲಿ ರಾಜಸ್ಥಾನದ (Rajasthan) ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ (RJ CM Race-Bajan Lal Sharma) ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ.

ಬಿಜೆಪಿ ಹೈಕಮಾಂಡ್ ತೆಗೆದುಕೊಂಡಿರುವ ಈ ನಿರ್ಧಾರ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಭಜನ್ ಲಾಲ್ ಶರ್ಮಾ

(Bajan Lal Sharma) ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ (RJ CM Race-Bajan Lal Sharma) ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಇನ್ನು ಮೂಲಗಳ ಪ್ರಕಾರ, ಭಜನ್ ಲಾಲ್ ಶರ್ಮಾ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಪಕ್ಷನಿಷ್ಠ ಹಾಗೂ ಸಿದ್ದಾಂತಕ್ಕೆ ಮೊದಲ ಆದ್ಯತೆ ಎಂಬ ಸಂದೇಶವನ್ನು ಬಿಜೆಪಿ

ಹೈಕಮಾಂಡ್ (BJP High Command) ತನ್ನ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ರವಾನಿಸಿದೆ. ಭಜನ್ ಲಾಲ್ ಶರ್ಮಾ ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, ಅವರ

ಬಿಜೆಪಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಎಬಿವಿಪಿ (ABVP) ಹಿನ್ನಲೆಯಿಂದ ಬಂದಿರುವ ಅವರು, ಈ ಹಿಂದೆ 1992ರಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಕರಸೇವೆಯಲ್ಲಿ ಭಾಗಿಯಾಗಿದ್ದಕ್ಕೆ ಅವರು

ಜೈಲು (Jail) ಶಿಕ್ಷೆಯನ್ನೂ ಅನುಭವಿಸಿದ್ದರು.

ಇನ್ನು ಗ್ರಾಮ ಸರಪಂಚರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿರುವ ಭಜನ್ ಲಾಲ್ ಶರ್ಮಾ ಅವರು, ಹಂತಹಂತವಾಗಿ ಬಿಜೆಪಿಯಲ್ಲಿ ವಿವಿಧ ಸ್ಥಾನಗಳಿಗೆ ಪಡೆದು, 2023ರಲ್ಲಿ ಸಂಗನೇರ್ನಿಂದ

ಶಾಸಕರಾಗಿ ಆಯ್ಕೆಯಾದ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.

ಭಜನ್ ಲಾಲ್ ಶರ್ಮಾ ಅವರು ಮೂಲತಃ ರಾಜಸ್ಥಾನದ ಭರತ್ಪುರದವರು. ಆರ್ಎಸ್ಎಸ್ (RSS) ಕಾರ್ಯಕರ್ತರಾಗಿರುವ ಇವರು ರಾಜಸ್ಥಾನದ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಪಕ್ಷಕ್ಕಾಗಿ ಕೆಲಸ

ಮಾಡಿದ್ದಾರೆ. ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಭಜನ್ ಲಾಲ್ ಶರ್ಮಾ ಅವರ ಆಯ್ಕೆಯನ್ನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಹಾಗೂ ಮಾಜಿ ಮುಖ್ಯಮಂತ್ರಿ ವಸುಂಧರಾರಾಜೆ ಸಿಂಧೆ (Vasundhara Raje Shinde) ಅವರು ಸ್ವಾಗತಿಸಿದ್ದಾರೆ.

ಅವರೇ ಖುದ್ದಾಗಿ ಭಜನ್ ಲಾಲ್ ಶರ್ಮಾ ಹೆಸರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಿಸಿದ್ದಾರೆ.

ಇದನ್ನು ಓದಿ : ದೇಶದಾದ್ಯಂತ ಬಹುನಿರೀಕ್ಷಿತ ಐಕ್ಯೂ 12 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟಿರಬಹುದು?

Exit mobile version