ಹಿಂದು ಮೌನವಾಗಿರುತ್ತಾನೆ ನಿಜ, ಆದ್ರೆ ಮೌನವಾಗಿಯೇ ಇನ್ನೊಬ್ಬ ಹಿಂದುವಿನ ನೋವು, ಸಂಕಟಗಳಿಗೆ ಸ್ಪಂದಿಸುತ್ತಾನೆ ಕೂಡ : ರೋಹಿತ್‌ ಚಕ್ರತೀರ್ಥ

Bengaluru : ಹಿಂದು ಮೌನವಾಗಿರುತ್ತಾನೆ ನಿಜ, (Rohit Chakratheertha Likes Kantara) ಆದರೆ ಮೌನವಾಗಿಯೇ ಇನ್ನೊಬ್ಬ ಹಿಂದುವಿನ ನೋವು, ಸಂಕಟ, ಖುಷಿ, ಸಂಭ್ರಮಗಳಿಗೆ ಸ್ಪಂದಿಸುತ್ತಾನೆ ಕೂಡ.

ಹಾಗಾಗಿಯೇ ಕಾಶ್ಮೀರದ ಸೀಮಿತ ಪ್ರಾಂತ್ಯದ ಸಮಸ್ಯೆಯನ್ನು ತೋರಿಸಿದ “ಕಾಶ್ಮೀರ್ ಫೈಲ್ಸ್” (The Kashmir Files) ದೇಶಾದ್ಯಂತ ಜಯಭೇರಿ ಬಾರಿಸಿತು.

ನೋಡಿದ ಪ್ರತಿಯೊಬ್ಬ ಹಿಂದುವಿಗೆ ಇದು ನನ್ನ ಕಥೆ, ನನ್ನದೇ ಕಥೆ… ಅನ್ನಿಸಿತು. ಕರಾವಳಿಯ ಸಣ್ಣ ಊರೊಂದರಲ್ಲಿ ನಡೆಯುವ ಕಥೆಯನ್ನಿಟ್ಟುಕೊಂಡರೂ ಕಾಂತಾರ (Kantara),

ದೇಶದುದ್ದಕ್ಕೆ ಧೂಳೆಬ್ಬಿಸುತ್ತಿರುವುದೂ ಇದೇ ಕಾರಣಕ್ಕೆ ಎಂದು ಚಿಂತಕ ರೋಹಿತ್‌ ಚಕ್ರತೀರ್ಥ (Rohit Chakratheertha Likes Kantara) ಅಭಿಪ್ರಾಯಪಟ್ಟಿದ್ದಾರೆ.

ಕಾಂತಾರ ಸಿನಿಮಾ ಕುರಿತು ವಿಮರ್ಶಾತ್ಮಕ ಅಭಿಪ್ರಾಯವನ್ನು ತಮ್ಮ ಫೇಸ್‌ಬುಕ್‌ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಭಾರತದ ನೂರಾ ನಲವತ್ತು ಕೋಟಿ ಜನಸಂಖ್ಯೆಯಲ್ಲಿ 80 ಕೋಟಿಯಷ್ಟೇ ಹಿಂದುಗಳಿದ್ದಾರೆಂದಾದರೂ ಭಾವಿಸೋಣ.

ಈ ಹಿಂದುಗಳಲ್ಲಿ ತಮ್ಮ ಮನೆಯ ಆಚಾರ ವಿಚಾರಗಳನ್ನೇ ಪ್ರಶ್ನಿಸುವ ಎಬಡ ಎಡಬಿಡಂಗಿಗಳ ಸಂಖ್ಯೆ ಒಂದು ಲಕ್ಷವೂ ದಾಟಲಿಕ್ಕಿಲ್ಲ.

ಇದನ್ನೂ ಓದಿ : https://vijayatimes.com/dollar-value-increases/

ಮಿಕ್ಕವರೆಲ್ಲ ಅದೆಷ್ಟೇ ಆಧುನಿಕರಾದರೂ, ನಗರವಾಸಿಗಳಾದರೂ, ಕುಟುಂಬಗಳಿಂದ ದೂರವಿದ್ದರೂ ಅವರೊಳಗೊಂದು ಸನಾತನ ರಕ್ತ ಹರಿಯುತ್ತಿದೆ.

ಜನ್ಮಜನ್ಮಾಂತರಗಳಲ್ಲಿ ಸೇರಿಕೊಂಡ ಸಂಸ್ಕಾರದ ಅಷ್ಟಿಷ್ಟಾದರೂ ಅಂಶ ಅವರೆಲ್ಲರೊಳಗೂ ಇದೆ. ಕಾಶ್ಮೀರದ ಹಿಂದು ಬೇರೆಯಲ್ಲ, ಕನ್ಯಾಕುಮಾರಿಯ ಹಿಂದು ಬೇರೆಯಲ್ಲ.

ಭಾರತದ ನಾಲ್ದೆಸೆಗಳಲ್ಲಿರುವ ಎಲ್ಲ ಹಿಂದು ಸಮುದಾಯಗಳಲ್ಲೂ ಸಮಾನಾಂಶಗಳಿವೆ. ಮೇಲ್ನೋಟಕ್ಕೆ ಅವು ಭಿನ್ನವಾಗಿ, ಕೆಲವೊಮ್ಮೆ ತದ್ವಿರುದ್ಧವಾಗಿ ಕಾಣಬಹುದು.

ಆದರೆ ಆ ಎಲ್ಲ ಆಚರಣೆ, ಸಂಸ್ಕಾರ, ಪೂಜೆ-ಪುನಸ್ಕಾರಗಳ ಮೂಲ ಒಂದೇ ಎಂದಿದ್ದಾರೆ. ಭಾರತವನ್ನು ಪಠ್ಯಪುಸ್ತಕಗಳಲ್ಲಿ “ವಿವಿಧತೆಯಲ್ಲಿ ಏಕತೆ” ಎನ್ನುವುದು ರೂಢಿ.

ಅದು ಶುದ್ಧಾಂಗ ತಪ್ಪು. ಭಾರತದಲ್ಲಿರುವುದು “ಏಕತೆಯಲ್ಲಿ ವಿವಿಧತೆ”. ಆ ಏಕವೇ ಸನಾತನ ಧರ್ಮ. ಒಂದೇ ಕಾಂಡ ಇಲ್ಲಿ ಹಲವು ರೆಂಬೆಕೊಂಬೆಗಳನ್ನು ದೇಶಾದ್ಯಂತ ಪಸರಿಸಿದೆ.

ದೈವದೇವರುಗಳಲ್ಲಿ ನಂಬಿಕೆ ಇಡುವುದು ಎಂಬ ಮೂಲಾಂಶವೇ ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಪ್ರಕಟವಾಗಬಹುದು. ಆದರೆ “ನಂಬಿಕೆ” ಎಂಬ ಮೂಲದ್ರವ್ಯ ಒಂದೇ.

ಮತ್ತು ಈ ನಂಬಿಕೆ, ರಿಲಿಜನ್ನುಗಳು ಹೇರುವ “ಬಿಲೀಫ್”ಗಿಂತ ಸಂಪೂರ್ಣ ಭಿನ್ನವಾದದ್ದು. ಹಾಗಾಗಿಯೇ ಹಿಂದುಗಳು ದೇಶದ ವಿವಿಧ ಭಾಗಗಳಲ್ಲಿದ್ದರೂ ಕನೆಕ್ಟ್ ಆಗುತ್ತಾರೆ.

ಕಾಮಾಕ್ಯಕ್ಕೆ ಹೋದರೂ ಶೃಂಗೇರಿಗೆ ಹೋದರೂ ಹಿಂದುವಿಗೆ ಕಾಣುವುದು ಶಕ್ತಿಯೇ – ಹೊರಗಿನ ರೂಪ ಭಿನ್ನವಾದ ಮಾತ್ರಕ್ಕೆ ಎರಡೂ ಬೇರೆ ಬೇರೆ ದೇವತೆಗಳೆಂಬ ನಿರ್ಣಯವನ್ನು ಹಿಂದು ಎಳೆಯಲಾರ ಎಂದಿದ್ದಾರೆ.

https://fb.watch/gfhno5NCvv/ ವಿಜಯಪುರ : ಭಾರಿ ಮಳೆಗೆ ತತ್ತರಿಸಿದ ರೈತರ ಜೀವನ!

ಇದೇ ರೀತಿ ಉತ್ತರದ, ಈಶಾನ್ಯದ, ವಾಯವ್ಯದ ಹಿಂದುಗಳಿಗೆ ಆ ಭೂತ ನಮ್ಮದಲ್ಲ ಎಂದೇನೂ ಅನ್ನಿಸಿಲ್ಲ. ತಮ್ಮ ಊರುಗಳಲ್ಲಿ ನಡೆಯುವ ಯಾವುದೋ ಆಚರಣೆಗೆ, ಸಂಪ್ರದಾಯಗಳಿಗೆ ಭೂತಕೋಲವನ್ನು ಸಮೀಕರಿಸಿಕೊಂಡು ಆ ಎಲ್ಲ ಹಿಂದುಗಳೂ ಕಾಂತಾರದ ಕಥೆಯನ್ನು ಲೋಕಲೈಸ್ ಮಾಡಿಕೊಂಡಿದ್ದಾರೆ.

ಹೇಗೆ ಕಾಶ್ಮೀರದ ಪಂಡಿತನ ಕಥೆ ನಮ್ಮೆಲ್ಲರ ಕಥೆಯೂ ಆಗುತ್ತದೋ ಹಾಗೆಯೇ ನಲ್ಕೆಯವನ ಕಥೆ ಕೂಡ ನಮ್ಮೆಲ್ಲರದೂ ಆಗುತ್ತದೆ.

ವೈದಿಕ, ಅವೈದಿಕ, ಆರ್ಯ, ದ್ರಾವಿಡ, ಬ್ರಾಹ್ಮಣ, ಶೂದ್ರ, ಮಾರ್ಗ, ದೇಸಿ ಎಂಬ ತಲೆಬುಡವಿಲ್ಲದ ಚರ್ಚೆಗಳನ್ನು ಎಡಬಿಡಂಗಿಗಳು ಬೆಳೆಸುತ್ತ ಹೋದಷ್ಟೂ ಹಿಂದೂಧರ್ಮದ ಅತ್ಯಂತ ಮೂಲಭೂತ ತತ್ತ್ವಗಳನ್ನು ಶೋಧಿಸುವ ‘ಕಾಂತಾರ’ದಂಥ ಸಿನೆಮಗಳು ಯಶಸ್ಸಿನ ಓಟದಲ್ಲಿ ಹೊಸ ಹೊಸ ದಾಖಲೆ ಬರೆಯುತ್ತವೆ.

ಏಕೆಂದರೆ ‘ಕಾಂತಾರ’ವನ್ನು ಮರಳಿ ಮರಳಿ ನೋಡಲು ನುಗ್ಗುತ್ತಿರುವ ಪ್ರೇಕ್ಷಕನ ಉತ್ಸಾಹವೆಂಬುದು – ಹಿಂದುತ್ವವನ್ನು ಒಡೆಯಲು ಹವಣಿಸುತ್ತಿರುವ ಭಂಜಕಶಕ್ತಿಗಳಿಗೆ ಕೊಡುತ್ತಿರುವ ಪರೋಕ್ಷ ಬೆತ್ತದೇಟು ಕೂಡ ಎಂದಿದ್ದಾರೆ.
Exit mobile version