ಕೊನೆಗೂ ನಾಯಿ ಮಾಂಸ ಸೇವನೆ ಹಾಗೂ ಮಾರಾಟ ನಿಷೇಧಿಸಿದ ದಕ್ಷಿಣ ಕೊರಿಯಾ..!

South Korea : ದಕ್ಷಿಣ ಕೊರಿಯಾದ ಸಂಸತ್ತು ನಾಯಿ (ROK banned dog meat) ಮಾಂಸದ ಸೇವನೆ ಮತ್ತು ಮಾರಾಟವನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿದೆ.

ಇದು ಶತಮಾನಗಳ ಹಿಂದಿನ ಕೊರಿಯನ್ನರ ಅಭ್ಯಾಸವನ್ನು ಕೊನೆಗೊಳಿಸಿದೆ. ಈ ಕ್ರಮವು ಪ್ರಾಣಿಗಳ (Animals) ಕಲ್ಯಾಣದ ಕಡೆಗೆ ಸಾಮಾಜಿಕ ವರ್ತನೆಗಳಲ್ಲಿನ ಬದಲಾವಣೆಯನ್ನು

ಪ್ರತಿಬಿಂಬಿಸುತ್ತದೆ ಎಂದು ದಕ್ಷಿಣ( (ROK banned dog meat) ಕೊರಿಯಾ ಹೇಳಿದೆ.

ಕಳೆದ ಅನೇಕ ದಶಕಗಳಿಂದ ನಾಯಿ ಮಾಂಸದ ಮಾರಾಟ (Sale of dog meat) ಹಾಗೂ ಸೇವನೆಯ ವಿರುದ್ದ ತೀವ್ರ ಟೀಕೆ ಕೇಳಿ ಬಂದಿತ್ತು. ಜಗತ್ತಿನ ಅನೇಕ ದೇಶಗಳು ಹಾಗೂ ಪ್ರಾಣಿ ಪ್ರಿಯರು

ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸ ಮಾರಾಟವನ್ನು ನಿಷೇಧಿಸುವಂತೆ ತೀವ್ರ ಒತ್ತಡವನ್ನು ಹೇರುತ್ತಿದ್ದರು. ಮಾಂಸಕ್ಕಾಗಿ ನಾಯಿಗಳನ್ನು ವಧೆ ಮಾಡಲು ವಿದ್ಯುದಾಘಾತ ಅಥವಾ ನೇಣು ಹಾಕುವ

ಕ್ರಮ ಕೊರಿಯಾದಲ್ಲಿತ್ತು. ಹೀಗಾಗಿ ಇದೊಂದು ಅಮಾನವೀಯ ಹೇಯ ಕೃತ್ಯ, ಎಂದು ಪ್ರಾಣಿ ಸಂಘಟನೆಗಳು ದಕ್ಷಿಣ ಕೊರಿಯಾ ಸರ್ಕಾರವನ್ನು ಟೀಕಿಸಿದ್ದವು.

ದಕ್ಷಿಣ ಕೊರಿಯಾದ ಸಂಸತ್ತಿನಲ್ಲಿ ಅಂಗೀಕಾರವಾಗಿರುವ ಮಸೂದೆಯೂ, “ಈ ಕಾನೂನು ಪ್ರಾಣಿಗಳ ಹಕ್ಕುಗಳ ಮೌಲ್ಯಗಳನ್ನು ಅರಿತುಕೊಳ್ಳುವ ಗುರಿಯನ್ನು ಹೊಂದಿದೆ. ಇದು ಜೀವನದ

ಗೌರವವನ್ನು ಹಾಗೂ ಮಾನವರು ಮತ್ತು ಪ್ರಾಣಿಗಳ ನಡುವೆ ಸಾಮರಸ್ಯದ ಸಹಬಾಳ್ವೆಯನ್ನು ಅನುಸರಿಸುತ್ತದೆ.” ಎಂದು ಹೇಳಿದೆ.

ಇನ್ನು ಆಡಳಿತ ಪಕ್ಷವು ಪ್ರಸ್ತಾಪಿಸಿದ ಮಸೂದೆಯು ಸಂಸತ್ತಿನಲ್ಲಿ ಭಾರಿ ಬೆಂಬಲವನ್ನು ಪಡೆಯಿತು. ಉಭಯಪಕ್ಷೀಯ ಕೃಷಿ ಸಮಿತಿಯ ಅನುಮೋದನೆಯ ನಂತರ 208 ಮತಗಳನ್ನು ಬೆಂಬಲದೊಂದಿಗೆ

ಮಸೂದೆ ಅಂಗೀಕಾರವಾಯಿತು. ಅಧ್ಯಕ್ಷ ಯೂನ್ ಸುಕ್ ಯೆಯೋಲ್ (President Yoon Suk Yeol) ಅವರು ಪ್ರಾಣಿಗಳ ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ನಾಯಿ ಮಾಂಸ ಸೇವನೆಯ ತೀವ್ರ

ಟೀಕಾಕಾರರೂ ಆಗಿರುವ ಪ್ರಥಮ ಮಹಿಳೆ ಕಿಮ್ ಕಿಯೋನ್ ಹೀ (The first lady is Kim Kyon Hee) ಅವರೊಂದಿಗೆ ಆರು ನಾಯಿಗಳು ಮತ್ತು ಎಂಟು ಬೆಕ್ಕುಗಳನ್ನು ದತ್ತು ಪಡೆದಿದ್ದಾರೆ.

ಇದು ನಿಷೇಧಕ್ಕೆ ಬೆಂಬಲವನ್ನು ಹೆಚ್ಚಿಸಲು ಕಾರಣವಾಗಿದೆ.

ಈ ಶಾಸನವು ಮೂರು ವರ್ಷಗಳ ಕಾಲಾವಕಾಶದ ನಂತರ ಜಾರಿಗೆ ಬರಲಿದೆ. ಕಾನೂನು ಉಲ್ಲಂಘನೆಯು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 30 ಮಿಲಿಯನ್ ವೋನ್ ($22,800) ದಂಡಕ್ಕೆ

(Up to 3 years in prison or a 30 million won ($22,800) fine) ಕಾರಣವಾಗಬಹುದು. “ಮನುಷ್ಯ ಬಳಕೆಗಾಗಿ ನಾಯಿಗಳ ಸಂತಾನೋತ್ಪತ್ತಿ ಮತ್ತು ಕೊಲ್ಲುವಿಕೆಯನ್ನು ಮಸೂದೆಯು

ಅಂತ್ಯಗೊಳಿಸುತ್ತದೆ. ಈ ಕ್ರೂರ ಉದ್ಯಮದಿಂದ ಲಕ್ಷಾಂತರ ನಾಯಿಗಳನ್ನು ಉಳಿಸಲು ನಾವು ಪ್ರಮುಖ ಹಂತವನ್ನು ತಲುಪಿದ್ದೇವೆ ಎಂದು ಅನಿಮಲ್ ಪ್ರೊಟೆಕ್ಷನ್ ಗ್ರೂಪ್ ಹ್ಯೂಮನ್ ಸೊಸೈಟಿ

ಇಂಟರ್ನ್ಯಾಶನಲ್ (ಎಚ್ಎಸ್ಐ) (Animal Protection Group Humane Society International (HSI)) ಹೇಳಿದೆ.

ಇನ್ನು ಕೊರಿಯಾದ ಕೃಷಿ ಸಚಿವಾಲಯದ ಪ್ರಕಾರ, 1,100 ನಾಯಿ ಸಾಕಣೆ ಕೇಂದ್ರಗಳು 570,000 ನಾಯಿಗಳನ್ನು ಮನುಷ್ಯ ಬಳಕೆಗಾಗಿ ಸಾಕುತ್ತಿವೆ. ಕೊರಿಯನ್ ಅಸೋಸಿಯೇಷನ್ ಆಫ್

ಎಡಿಬಲ್ ಡಾಗ್ಸ್, ಬ್ರೀಡರ್ಸ್ (Korean Association of Edible Dogs, Breeders) ಮತ್ತು ಮಾರಾಟಗಾರರನ್ನು ಪ್ರತಿನಿಧಿಸುವ ಒಕ್ಕೂಟವು, ಈ ನಿಷೇಧವು 3,000 ರೆಸ್ಟೋರೆಂಟ್ಗಳ ಜೊತೆಗೆ

1.5 ಮಿಲಿಯನ್ ನಾಯಿಗಳನ್ನು ಸಾಕುತ್ತಿರುವ 3,500 ಫಾರ್ಮ್ಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರತಿಪಾದಿಸಿದೆ.

Exit mobile version