ಕನ್ನಡ(Kannada) ಸಿನಿಮಾಗಳು ಯಶಸ್ವಿಯಾಗಿ ಬಿಡುಗಡೆಯಾಗಿ ಸಾಗುವ ಮಧ್ಯೆ ತಮ್ಮ ಸಿನಿಮಾವನ್ನು ಕೂಡ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದಾದ ಸಿನಿಮಾ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್(RRR) ಸಿನಿಮಾ(Cinema).
ಕನ್ನಡದಲ್ಲಿ ಡಬ್(Dub) ಮಾಡಿಸುವ ಮೂಲಕ ಕನ್ನಡ ಭಾಷೆಯಲ್ಲಿಯೇ ಕನ್ನಡಿಗರು(Kannadigas) ಈ ಸಿನಿಮಾ ವೀಕ್ಷಿಸಬಹುದು ಎಂಬ ಮಾತನ್ನು ಹೇಳಿಕೊಂಡೆ ಸಿನಿಮಾ ತಂಡ ಕರ್ನಾಟಕದ(Karnataka) ಚಿಕ್ಕಬಳ್ಳಾಪುರದ(Chikkaballapur) ಜನತೆಯ ಮುಂದೆ ಪ್ರೀ ರಿಲೀಸ್ ಇವೆಂಟ್(Pre-Release Event) ಇಟ್ಟು ಗಮನಸೆಳೆಯಿತು.
ಸದ್ಯ ತೆಲುಗು(Telugu) ಚಿತ್ರರಂಗದಲ್ಲಿ ಭರ್ಜರಿ ಸದ್ದು ಮಾಡುತ್ತಲೇ ಇಲ್ಲಿಯವರೆಗೂ ಬಂದ ಸಿನಿಮಾ ಅಂದ್ರೆ ಅದು RRR. ಹೌದು, ಇಡೀ ಭಾರತದಾದ್ಯಂತ ಈ ಸಿನಿಮಾ ತನ್ನದೇ ಶೈಲಿಯಲ್ಲಿ ಸಿನಿ ಪ್ರೇಕ್ಷಕರಿಗೆ ಒಂದಲ್ಲ ಒಂದು ತುಣುಕಲ್ಲಿ ಸೆಳೆಯುತ್ತಲೇ ಬಂದಿದೆ. ಕಳೆದ ಒಂದು ವಾರದಿಂದ RRR ಸಿನಿಮಾ ಕುರಿತು ಸಿನಿಪ್ರೇಕ್ಷಕರಲ್ಲಿ ಉಂಟಾದ ಕಾತುರತೆ, ಆತುರತೆ ಇಂದು ಚಿತ್ರಮಂದಿರಗಳಲ್ಲಿ ಕಾಣಿಸುತ್ತಿದೆ. ಜೂನಿಯರ್ ಎನ್.ಟಿ.ಆರ್(Junior NTR), ರಾಮ್ ಚರಣ್ ತೇಜ(Ram Charan Teja), ಆಲಿಯಾ ಭಟ್(Alia Bhat) ಅಭಿನಯದ, ರಾಜಮೌಳಿ(Rajmouli) ನಿರ್ದೇಶನದ ಆರ್.ಆರ್.ಆರ್ ಸಿನಿಮಾಗಾಗಿ ಚಿತ್ರಮಂದಿರಗಳ ಬಾಗಿಲನ್ನು ಮುರಿದು ಚಿತ್ರವನ್ನು ನೋಡುವಷ್ಟು ತವಕ ಪ್ರೇಕ್ಷಕರಲ್ಲಿ ಯಾಕೆ ಹೆಚ್ಚಿತೋ ಅವರಿಗೆ ಗೊತ್ತು!
ಬಾಹುಬಲಿ(Bahubali) ಅಂಥ ಯಶಸ್ವಿ ಸಿನಿಮಾ ಕೊಟ್ಟು ಇಂದು ಭಾರತದ ಅದ್ಭುತ ನಿರ್ದೇಶಕರ ಸಾಲಿನಲ್ಲಿ ರಾಜಮೌಳಿ(Rajmouli) ಕೂಡ ಒಬ್ಬರಾಗಿದ್ದಾರೆ. ಆದ್ರೆ ಈ ಸಿನಿಮಾದ ಮೂಲಕ ಆ ಪಟ್ಟ ಉಳಿಸಿಕೊಂಡಿದ್ದಾರ? ಚಿತ್ರವನ್ನು ಸಿನಿಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾದ್ರಾ? ಕನ್ನಡ ಭಾಷೆಯಲ್ಲಿ ಡಬ್ ಮಾಡಿಸಿ ಕನ್ನಡಿಗರಿಗೆ ತೃಪ್ತಿ ಪಡಿಸಿದ್ರಾ? RRR ಮೂಲಕ ಒಂದೊಳ್ಳೆ ಸಂದೇಶ ಏನಾದರೂ ನೀಡಿದ್ದಾರ? ಸಿನಿಮಾ ಹೇಗಿದೆ? ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕೋಣ ಇಂದಿನ ವಿಮರ್ಶೆಯಲ್ಲಿ(Critic), ಪ್ರಾರಂಭಿಸಿ ನಿಮ್ಮ ಓದುವ ತವಕವನ್ನು…….
ಈ ಸಿನಿಮಾ ಟ್ರೇಲರ್ ನಲ್ಲಿಯೇ ತಿಳಿಸಿರುವಂತೆ, ಇಬ್ಬರ ಗೆಳೆಯರ ಸ್ನೇಹ ಬಂಧ, ಅನುಬಂಧ, ಪ್ರೀತಿಯ ಭಾಂಧವ್ಯತೆ ಹೇಗಿದೆ ಎಂಬುದನ್ನು ಸಿನಿಪ್ರೇಕ್ಷಕರಿಗೆ ಕಿರುಪರಿಚಯ ನೀಡಿತ್ತು. ಇಬ್ಬರ ಗೆಳೆಯರ ಸ್ನೇಹ ಯಾವ ಅಂಶವನ್ನು ಹೇಳಲು ಹೊರಟಿದೆ ಎಂಬ ಪ್ರಶ್ನೆ ಸಿನಿಪ್ರೇಕ್ಷಕರಲ್ಲಿ ಮೂಡಿತ್ತು ಎಂಬುದು ಗಮನಾರ್ಹ ಅಂಶ. RRR ಸಿನಿಮಾ ಶೀರ್ಷಿಕೆಯಲ್ಲಿಯೇ ನಮಗೆ ತಿಳಿಯುತ್ತದೆ ಇದೊಂದು ರೌದ್ರ…ರಣ..ರುಧಿರ ಎಂದು, ಇದರ ಅರ್ಥ ಬಹುಶಃ ಅನೇಕ ಸಿನಿಪ್ರೇಕ್ಷಕರಿಗೆ ಮೊದ ಮೊದಲು ತಿಳಿಯಲಾಗಲಿಲ್ಲ! ಆದ್ರೆ, ಸಿನಿಮಾ ವೀಕ್ಷಿಸಿದ ಬಳಿಕ ಈ ಸಿನಿಮಾ ರೌದ್ರವಾಗಿ(Terrifying)..ರಣವಾಗಿ(Powerful)…ರುಧಿರಮಯವಾಗಿದೆ(Bloodshed) ಎಂಬುದನ್ನು ಸ್ಪಷ್ಟಪಡಿಸುತ್ತದೆ. ಯಂಗ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಮರಾಜು(ರಾಮ್ ಚರಣ್ ತೇಜ) ಮತ್ತು ಬುಡಕಟ್ಟು ಜನಾಂಗದ ಮುಗ್ಧ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಭೀಮ(ಜೂ. ಎನ್.ಟಿ.ಆರ್) ಪಾತ್ರಗಳು ಈ ಸಿನಿಮಾಗೆ ಮೆರಗು ಎಂದೇ ಹೇಳಬಹುದು.
ಬೆಂಕಿ(Fire) ಮತ್ತು ನೀರು(Water) ಇವೆರಡರ ಶಕ್ತಿ ಎಷ್ಟು ಅಪರಿಮಿತ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಬೆಂಕಿ ಶಕ್ತಿ ಅಧಿಕವೋ ಅಥವಾ ನೀರಿನ ಶಕ್ತಿ ಅಧಿಕವೋ ಎಂಬುದನ್ನು ಅಳಯಲಾಗುವುದಿಲ್ಲ ಅಲ್ವಾ? ಕಾರಣ, ಅಗ್ನಿ ಮತ್ತು ಜಲ ಇವೆರಡು ಕೂಡ ತನ್ನದೇ ಆದ ಶಕ್ತಿಯನ್ನು ಹೊಂದಿದೆ. ಎರಡು ಕೂಡ ಯಾವುದೇ ಕಾರಣಕ್ಕೂ ಬೆರೆಯುವುದಿಲ್ಲ! ತನ್ನ ಶಕ್ತಿ ಯಾವ ಮಟ್ಟಕ್ಕಿದೆ ಎಂಬುದು ಸಮಯ ಬಂದಾಗ ಉತ್ತರ ನೀಡುವುದು ಇದರ ಹುಟ್ಟುಗುಣ. ಅದರಂತೆಯೇ ಜೂ. ಎನ್.ಟಿ.ಆರ್ ನೀರು ಸಂಕೇತವನ್ನು ಸೂಚಿಸಿದರೇ…ರಾಮ್‍ಚರಣ್ ಬೆಂಕಿ ಸಂಕೇತವನ್ನು ಸೂಚಿಸುತ್ತಾರೆ. ಇದರ ಅರ್ಥ ಇಷ್ಟೇ, ಇವರಿಬ್ಬರ ಸ್ನೇಹ ಬೆಂಕಿ ಮತ್ತು ನೀರಿನಂತೆ!
ತಮ್ಮ ಶಕ್ತಿ ಯಾವ ಸಮಯಕ್ಕೆ ಹೇಗೇ, ಯಾವ ತೀವ್ರತೆಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಊಹಿಸಲು ಅಸಾಧ್ಯ ಎಂಬುದನ್ನು ತಿಳಿಸುತ್ತದೆ. ಈ ಸಂಗತಿಯನ್ನು ಅರ್ಥೈಸಿಕೊಂಡರೆ ಪ್ರಾಯಶಃ ಈ ಸಿನಿಮಾ ಇಬರಿಬ್ಬರ ಸ್ನೇಹದ ಮೂಲಕ ಯಾವ ರೀತಿ ಕಥೆಯನ್ನು ಹೇಳಲು ಹೊರಟಿದೆ ಎಂಬುದು ಕೊಂಚ ಬೇಗನೇ ತಿಳಿಯುತ್ತದೆ. ಯಶಸ್ವಿ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನ ಅಂದಮೇಲೆ ಸಿನಿಪ್ರೇಕ್ಷಕರು ಒಂದಲ್ಲ, ದುಪ್ಪಟ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಿರೀಕ್ಷೆಗೆ ತಕ್ಕಂತೆ ಸಿನಿಮಾವನ್ನು ಸರಿದೂಗಿಸಿಕೊಂಡು ಹೋಗಿದ್ದಾರೆ ರಾಜಮೌಳಿ. 1920ರಲ್ಲಿ ಬ್ರಿಟಿಷ್(British) ಅವರ ಆಡಳಿತ, ಆಳ್ವಿಕೆಯಲ್ಲಿ ಜನರ ಪರಿಸ್ಥಿತಿ ಹೇಗಿತ್ತು? ಅವರ ಕಾಲಡಿಯಲ್ಲಿ ಮುಗ್ದ ಜನರನ್ನು ಹೇಗೆ ನಡೆಸಿಕೊಳ್ಳಲಾಗಿತ್ತು ಎಂಬುದನ್ನು ಅದ್ಭುತವಾಗಿ ಚಿತ್ರೀಕರಿಸಿದೆ ಚಿತ್ರತಂಡ.
ಮಲ್ಲಿ ಎಂಬ ಪುಟ್ಟ ಬುಡಕಟ್ಟು ಜನಾಂಗದ ಬಾಲಕಿಯನ್ನು ಬ್ರಿಟಿಷ್ ಆಡಳಿತದ ಲೇಡಿ ಸ್ಕಾಟ್( Allison Doody) ಆಂಗ್ಲ ಭಾಷೆ ಬಾರದ ಮುಗ್ದ ಜನರ ಮುಖದ ಮೇಲೆ ಹಣ ಎಸೆದು ಬಾಲಕಿಯನ್ನು ಕರೆದುಕೊಂಡು ಹೋಗುತ್ತಾರೆ. ಮಲ್ಲಿ ಎಂಬ ಪುಟ್ಟ ಬಾಲಕಿಯನ್ನು ರಕ್ಷಿಸಿ ವಾಪಾಸ್ ಕರೆತರಲು ಹರಸಾಹಸ ಪಡುವ ಭೀಮ್, ಕಥೆಯನ್ನು ಸಿನಿಪ್ರೇಕ್ಷಕರಿಗೆ ಎಳೆ ಎಳೆಯಾಗಿ ಹೇಳಲು ಹೊರಡುತ್ತಾರೆ. ಇನ್ನು ರಾಮರಾಜು ಬ್ರಿಟಿಷ್ ಸೇನೆಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುತ್ತಾರೆ. ಯಾರೋ ಒಬ್ಬನನ್ನು ಹುಡುಕಿಕೊಂಡು ಭೀಮ್ ವಾಸವಿರುವ ದೆಹಲಿ ಸಮೀಪ ಬರುವ ರಾಮರಾಜುಗೆ, ಭೀಮ್ ಸ್ನೇಹ ಸಿಗುತ್ತದೆ. ಅಲ್ಲಿಂದ ಇವರ ಸ್ನೇಹ ಹೇಗೆ ಸಾಗುತ್ತದೆ, ಇಬ್ಬರ ಉದ್ದೇಶ ಅವರವರಿಗೆ ಅರ್ಥವಾದಾಗ ಮುಂದೇನು ಎಂಬುದನ್ನು ಸಿನಿಮಾ ನೋಡಿದಾಗ ನಿಮಗೆ ಅಶ್ಚರ್ಯವಾಗುತ್ತದೆ!
ಕಾರಣ, ಕಥೆಗೆ ಟ್ವಿಸ್ಟ್ ಸಿಗುವುದೇ ಉದ್ದೇಶಗಳು ಪರಸ್ಪರ ತಿಳಿದಾಗ. ಫಸ್ಟ್ ಹಾಫ್ ಸಿನಿಮಾ ಪ್ರೇಕ್ಷಕರಿಗೆ ಆಕ್ಷನ್, ಗಂಭೀರ, ಸ್ನೇಹ ಸಂಬಂಧ, ನಗುವಿನ ತುಣುಕು ಸೇರಿದಂತೆ ಮನರಂಜನೆಯ ಮಹಾಪೂರವನ್ನೇ ನೀಡುತ್ತದೆ. ಸೆಕೆಂಡ್ ಹಾಫ್ ಊಹೆಗೂ ಮೀರಿದ ಘಟನೆಗಳನ್ನು ಹಂತ ಹಂತವಾಗಿ ಬಿತ್ತರಿಸುತ್ತ ಹೋಗುತ್ತದೆ. ಈ ಸಿನಿಮಾದಲ್ಲಿ ಒಟ್ಟು 3 ಹಾಡುಗಳಿದ್ದು, ಒಂದೊಂದು ಹಾಡು ಕೂಡ ವಿಭಿನ್ನವಾಗಿ ಪ್ರಸ್ತುತ ಘಟನೆಯನ್ನು ಹಾಡಿನಲ್ಲೇ ವಿವರಿಸುವ ಪರಿ ಉತ್ತಮವಾಗಿದೆ. ಸಿನಿಮಾಗೆ ಬಳಸಿರುವ ವಸ್ತುಗಳು, ಸಿನಿಮಾಟೋಗ್ರಾಫಿ ತೆರೆಮೇಲೆ ಅದ್ಭುತವಾಗಿ ಮೂಡಿಬಂದಿದೆ.
ಬಾಹುಬಲಿ ಸಿನಿಮಾದಲ್ಲಿ ಮಾಡಿದ್ದ ಕಮಾಲ್, ಗಳಿಸಿದ್ದ ಯಶಸ್ಸನ್ನು ಈ ಸಿನಿಮಾದಲ್ಲಿ ನಿರೀಕ್ಷಿಸಿ ಬಂದರೆ ಖಂಡಿತ ಬೇಸರವಾಗುತ್ತದೆ. ಕನ್ನಡದಲ್ಲಿ ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್.ಟಿ.ಆರ್ ಈ ಸಿನಿಮಾವನ್ನು ಕನ್ನಡಿಗರು ಕನ್ನಡದಲ್ಲಿ ನೋಡಬೇಕು ಎಂದು ನಾವು ಬಯಸುತ್ತೇವೆ, ಇದೇ ಕಾರಣದಿಂದ ನಾವಿಬ್ಬರೂ ಕೂಡ ಭಾಷೆ ಬರದಿದ್ದರೂ ಕನ್ನಡದಲ್ಲೇ ಡಬ್ಬಿಂಗ್ ಮಾಡಿದ್ದೇವೆ ಎಂದು ಕನ್ನಡಿಗರನ್ನು ಸೆಳೆದರು. ಆದ್ರೆ, ಕನ್ನಡ ಭಾಷೆಯಲ್ಲಿ ಡಬ್ ಮಾಡಿದ ಸಿನಿಮಾವನ್ನು ಕನ್ನಡ ಅವತರಣಿಕೆಯಲ್ಲಿ ನೋಡುವ ಭಾಗ್ಯ ಕನ್ನಡಿಗರಿಗೆ ಅಷ್ಟಾಗಿ ಸಿಗಲಿಲ್ಲ! ತೆಲುಗು ಭಾಷೆಗೆ ಚಿತ್ರಮಂದಿರ ಕೊಟ್ಟದ್ದು ಅಪಾರ ಸಂಖ್ಯೆ, ಕನ್ನಡ ಭಾಷೆಗೆ ಕೊಟ್ಟದ್ದು ಪುಡಿಗಾಸು ಲೆಕ್ಕಾಚಾರ!
ಇದು ನಿಜಕ್ಕೂ ಕನ್ನಡಿಗರಿಗೆ ಬೇಸರ ತಂದಿದೆ. ಈ ಖುಷಿಗೆ ಯಾಕೆ ಕನ್ನಡದಲ್ಲಿ ಡಬ್ ಮಾಡಬೇಕಿತ್ತು ಎಂಬ ಪ್ರಶ್ನೆಯನ್ನು ಕನ್ನಡಾಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. ಈ ಅಂಶಗಳನ್ನು ಹೊರೆತುಪಡಿಸಿದರೇ ಸಿನಿಮಾ ನಿಜಕ್ಕೂ ಅದ್ಬುತವಾಗಿದೆ…..ಸಂದೇಶವಿಲ್ಲದ ಸಿನಿಮಾವಾದರೂ, ದೃಶ್ಯಾವಳಿಗಳು ರೋಮಾಂಚನ ನೀಡಲಿದೆ….ಕಥೆ ನೇರವಾಗಿ ಸಿನಿಪ್ರೇಕ್ಷಕರಿಗೆ `ನಾಟು’ತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ!
- ಮೋಹನ್ ಶೆಟ್ಟಿ