ಆರ್‌ಟಿಓ ಲೂಟಿ. ಲಜ್ಜೆಗೆಟ್ಟವರ ಹಗಲು ದರೋಡೆ ನೋಡಲು ಹೇಸಿಗೆಯಾಗುತ್ತಿದೆ. ಹೊಸಪೇಟೆ, ಕೊಪ್ಪಳ, ಚಿತ್ರದುರ್ಗ ಆರ್‌ಟಿಓಗಳ ಲಂಚಾವತಾರ ವಿಜಯಟೈಮ್ಸ್‌ನಲ್ಲಿ ಲೈವಾಗಿ ಬಯಲು

COVER STORY -  Koppala, Hospet, Davanagere in Karnataka RTO bribe scam is out! ಆರ್‌ಟಿಓ ಲೂಟಿ.

ಆರ್‌ಟಿಓ ಲೂಟಿ. ಲಜ್ಜೆಗೆಟ್ಟವರ ಹಗಲು ದರೋಡೆ ನೋಡಲು ಹೇಸಿಗೆಯಾಗುತ್ತಿದೆ. ಹೊಸಪೇಟೆ, ಕೊಪ್ಪಳ, ಚಿತ್ರದುರ್ಗ ಆರ್‌ಟಿಓಗಳ ಲಂಚಾವತಾರ ವಿಜಯಟೈಮ್ಸ್‌ನಲ್ಲಿ ಲೈವಾಗಿ ಬಯಲು
ಆರ್‌ಟಿಓ ಲೂಟಿ. ಲಜ್ಜೆಗೆಟ್ಟವರ ಹಗಲು ದರೋಡೆ ನೋಡಲು ಹೇಸಿಗೆಯಾಗುತ್ತಿದೆ. ಹೊಸಪೇಟೆ, ಕೊಪ್ಪಳ, ಚಿತ್ರದುರ್ಗ ಆರ್‌ಟಿಓಗಳ ಲಂಚಾವತಾರ ವಿಜಯಟೈಮ್ಸ್‌ನಲ್ಲಿ ಲೈವಾಗಿ ಬಯಲಾಯಿತು. ಕಡು ಭ್ರಷ್ಟ ಆರ್‌ಟಿಓ ಅಧಿಕಾರಿಗಳ ಮೇಲೆ ವಿಜಯಟೈಮ್ಸ್‌ ದಾಳಿ. ದಾಳಿಗೆ ಬೆಚ್ಚಿ ಎದ್ನೋ ಬಿದ್ನೋ ಓಡಿ ಹೋಗಿ ಅಡಗಿ ಕೂತ ಆರ್‌ಟಿಓ ಅಧಿಕಾರಿಗಳು.
ವಿಜಯಟೈಮ್ಸ್‌ ಆರ್‌ಟಿಓ ಅಧಿಕಾರಗಳ ಲಂಚಾವತಾರವನ್ನು ಚಿತ್ರೀಕರಿಸುತ್ತಿದ್ದ ವೇಳೆ ಕಲ್ಲು ಮುಳ್ಳು, ಹೊಂಡ ಗುಂಡಿ, ಗದ್ದೆ, ಕಂದಕ ನೋಡದೆ ಕಳ್ಳರ ರೀತಿ ಓಡಿ ಹೋದ್ರು. ಇವರೆಲ್ಲಾ ಸರ್ಕಾರಿ ದರೋಡೆಕೋರರು. ಬಡ ಕಾರ್ಮಿಕರ, ದುಡಿಯುವ ವರ್ಗಗಳ ರಕ್ತ ಹೀರುತ್ತಿರೋ ಸರ್ಕಾರಿ ಲೂಟಿಕೋರರು. ಹೆದ್ದಾರಿಯಲ್ಲಿ ನಿಂತು ಲಂಚ ತಿನ್ನುತ್ತಿರೋ ಲಜ್ಜೆಗೆಟ್ಟ ಆರ್‌ಟಿಓ ಅಧಿಕಾರಿಗಳು.
ರಸ್ತೆಯಲ್ಲಿ ನಿಂತು ರೌಡಿಸಂ ಮಾಡ್ತಾರೆ ಆರ್‌ಟಿಓ :ಚಿತ್ರದುರ್ಗ-ಹೊಸಪೇಟೆ ರಸ್ತೆ, ಕೊಪ್ಪಳ ರಸ್ತೆಯಲ್ಲಿ ನಿಂತು ರೌಡಿಸಂ ಮಾಡ್ತಾರೆ ಆರ್‌ಟಿಓ ಅಧಿಕಾರಿಗಳು. ಒಬ್ಬ ಆರ್‌ಟಿಓ ಅಧಿಕಾರಿ, ಆತನಿಗ ಸಹಾಯ ಮಾಡಲು ಹತ್ತಾರು ರೌಡಿಗಳು. ಇವರೆಲ್ಲಾ ರಸ್ತೆಯಲ್ಲಿ ಓಡಾಡೋ ಪ್ರತಿ ಲಾರಿಗಳನ್ನು ನಿಲ್ಲಿಸಿ ಲಂಚ ಪೀಕುತ್ತಾರೆ. ನಿತ್ಯ 500.1000 ರೂ. ಕೊಟ್ಟು ಸುಸ್ತಾಗಿದ್ದಾರೆ ಚಾಲಕರು. ಹಣ ಕೊಡಲಿಲ್ಲ ಅಂದ್ರೆ ದೊಣ್ಣೆಯಲ್ಲಿ ಹೊಡೀತಾರೆ. ಅಷ್ಟು ಮಾತ್ರ ಅಲ್ಲ. ಹಣ ಕೊಡದ ಲಾರಿಗಳನ್ನು ಶೆಡ್‌ ಒಳಗೆ ಕೂಡಿ ಹಾಕಿ ಶೋಷಿಸುತ್ತಾರೆ. ಲಂಚ ಕೊಡೋ ತನಕ ಅವರನ್ನು ರಸ್ತೆಗಿಳಿಯಲು ಬಿಡಲ್ಲ. ಇಂಥಾ ಅಧಿಕಾರಿ ಈ ಆರ್‌ಟಿಓಗಳಿಗೆ ಯಾವ ಕಾನೂನಿನಲ್ಲಿ ನೀಡಲಾಗಿದೆ ಅನ್ನೋದು ಯಕ್ಷ ಪ್ರಶ್ನೆ.
ರಾತ್ರಿ ಹಗಲೆನ್ನದೆ ಲೂಟಿ ಮಾಡ್ತಾರೆ ಹಣಬಾಕರು: ಆರ್‌ಟಿಓ ಅಧಿಕಾರಿ ಮೂರು ಶಿಫ್ಟಲ್ಲಿ ಕೆಲಸ ಮಾಡ್ತಾರೆ. ಒಂದು ನಿಮಿಷವೂ ಬಿಡದಂತೆ ಲಾರಿಗಳನ್ನು ಅಡ್ಡಿ ಹಾಕಿ ಲಂಚ ಪಡೀತಾರೆ. ಒಂದು ದಾಖಲೆ ಪರಿಶೀಲಿಸಲ್ಲ. ಬಿಲ್‌ ನೋಡಲ್ಲ, ಲಂಚ ಕೊಟ್ರೆ ಎಲ್ಲಾ ಪಾಸ್‌. ಪ್ರತಿ ಶಿಫ್ಟ್‌ ಮಾಡಿ ಮುಗಿಸಿ ಹೋಗುವ ಆರ್‌ಟಿಓ ಅಧಿಕಾರಿಯ ಚೀಪಲ್ಲಿ ರಾಶಿ ರಾಶಿ ಕಪ್ಪು ಹಣ ಸೃಷ್ಟಿಯಾಗುತ್ತೆ. ಕೆಲವು ಅಧಿಕಾರಿಗಳು ಗೋಣಿ ಚೀಲದಲ್ಲಿ ಹಣ ತೆಗೆದುಕೊಂಡು ಹೋಗುವ ಉದಾಹರಣೆಗಳೂ ಇವೆ. ಜನರ ರಕ್ತ ಹೀರಿ ಕಪ್ಪು ಹಣ ಸೃಷ್ಟಿಸುವ ಈ ಅಧಿಕಾರಿಗಳ ಲೂಟಿ ಕಾರ್ಯ ಬಿಂದಾಸಾಗಿಯೇ ನಡೆಯುತ್ತಿದೆ. ಯಾರ ಭಯವೂ ಇಲ್ಲದೆ. ಯಾವುದೇ ನೀತಿ ನಿಯಮಗಳಿಲ್ಲದೆ ದರೋಡೆ ಮಾಡುತ್ತಿದ್ದಾರೆ. ಸಾರಿಗೆ ಸಚಿವರಾದ ರಾಮುಲು ಅವರ ಕಣ್ಣಮುಂದೆಯೇ ಈ ದರೋಡೆ ನಡೆಯುತ್ತಿದ್ದರೂ ಸುಮ್ಮನಿದ್ದಾರೆ. ಇದು ಜನರಲ್ಲಿ ಅನುಮಾನ ಮೂಡಿಸುತ್ತಿದೆ.
ಕರ್ನಾಟಕ ದೇಶದಲ್ಲೇ ಲಂಚಕ್ಕೆ ಪ್ರಸಿದ್ಧಿ ಪಡೆಯುತ್ತಿದೆ: ನಮ್ಮ ನೆರೆಯ ಯಾವ ರಾಜ್ಯಗಳಲ್ಲಿ ಆರ್‌ಟಿಓಗಳು ಲಂಚ ಪಡೆಯಲ್ಲ. ಕೇರಳ, ತಮಿಳುನಾಡು, ಆಂಧ್ರ, ಗೋವಾ, ಗುಜರಾತ್‌ ಇಲ್ಲೆಲ್ಲೂ ಆರ್‌ಟಿಓ ಲೂಟಿ ಇಲ್ಲವೇ ಇಲ್ಲ. ಆದ್ರೆ ಕರ್ನಾಟಕದ ರಸ್ತೆಯಲ್ಲಿ ಓಡಾಡೋದು ಅಂದ್ರೆ ಲಾರಿ ಚಾಲಕರು ಭಯಬೀಳ್ತಾರೆ, ಹೇಸಿಗೆ ಪಡ್ತಾರೆ. ಇದೇ ರೀತಿ ಮುಂದುವರೆದ್ರೆ ನಮ್ಮ ರಾಜ್ಯಕ್ಕೆ ಲಾರಿಗಳು ಬರೋಕೆ ಹಿಂದೇಟು ಹಾಕಬಹುದು. ಡಿಜಿಟಲೀಕರಣದ ಈ ಯುಗದಲ್ಲೂ ಆರ್‌ಟಿಓಗಳು ರಸ್ತೆ ಬದಿ ನಿಂತು ಲಾರಿಚಾಲಕರಿಗೆ ಫೈನ್ ಹಾಕ್ತಾರೆ ಅಂದ್ರೆ ನಾಚಿಕೆಗೇಡಿನ ವಿಚಾರ. ಬೇರೆ ರಾಜ್ಯಗಳೆಲ್ಲಾ ಆನ್‌ಲೈನ್‌ನಲ್ಲೇ ಎಲ್ಲಾ ಕೆಲಸಗಳನ್ನು ಮುಗಿಸುವಾಗ ಕರ್ನಾಟಕ ಸರ್ಕಾರ ಯಾಕೆ ಅದನ್ನು ಅಳವಡಿಸಿಕೊಳ್ತಿಲ್ಲ. ಯಾಕೆ ಲಂಚ ಹಣ ಕಡಿಮೆಯಾಗುತ್ತೆ ಅಂತನಾ?
ಕೊಪ್ಪಳ ಆರ್‌ಟಿಓ ಕಚೇರಿಯಲ್ಲಿ ಏಜೆಂಟರ ದರ್ಬಾರು: ಇನ್ನು ಈ ಹೊಸಪೇಟೆ, ದಾವಣಗೆರೆ, ಕೊಪ್ಪಳ ಆರ್‌ಟಿಓಗಳ ಲೂಟಿ ದಂಧೆ ಬರೀ ಹೆದ್ದಾರಿಗೆ ಸೀಮಿತ ಅಲ್ಲ. ಇವರು ಲೈಸೆನ್ಸ್‌ ಕೊಡುವಲ್ಲಿ, ಎಫ್‌ಸಿ ಮಾಡುವಲ್ಲಿ, ಪರ್ಮಿಟ್‌ ಹೀಗೆ ಪ್ರತಿಯೊಂದು ಕೆಲಸದಲ್ಲೂ ಬರೀ ಏಜೆಂಟರನ್ನು ಇಟ್ಟು ಲಂಚ ಪಡೆಯುತ್ತಿದ್ದಾರೆ. ಆರ್‌ಟಿಓ ಅಂದ್ರೆ ಲಂಚದ ಕೇಂದ್ರ ಆಗಿದೆ. ಇಲ್ಲಿ ಹಣ ಕೊಡದೆ ಯಾವ ಕೆಲಸವೂ ನಡೆಯಲ್ಲ. ಇನ್ನು ಡಿಜಿಟಲ್ ಇಂಡಿಯಾದಲ್ಲಿ ಆರ್‌ಟಿಓಗಳ ಲೂಟಿಗೆ ಬ್ರೇಕ್‌ ಹಾಕುವ ಯಾವ ತಂತ್ರಜ್ಜಾನವನ್ನು ಅಳವಡಿಸಲು ಮುಂದಾಗದ ಕರ್ನಾಟಕ ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ. ಜನರನ್ನು ದರೋಡೆ ಮಾಡಿ ಸಚಿವರು, ಅಧಿಕಾರಿಗಳು ಉದ್ಧಾರ ಆಗೋದು ಮಾತ್ರ ಇವರಿಗೆ ಬೇಕಾಗಿದೆ. ಇಂಥಾ ವ್ಯವಸ್ಥೆಗೆ ಧಿಕ್ಕಾರ ಇರಲಿ.

Exit mobile version