ರಷ್ಯಾದ 8 ದಿನಗಳ ಆಕ್ರಮಣದ ನಂತರ ಉಕ್ರೇನ್ ನ ಸ್ಥಿತಿಗತಿಗಳು ಹೀಗಿದೆ!

war

ರಷ್ಯಾದ ಆಕ್ರಮಣ ಸತತ 1 ವಾರಕ್ಕೆ ಕಾಲಿಟ್ಟಿದೆ. ಈ ಅವಧಿಯಲ್ಲಿ ದಕ್ಷಿಣ ಉಕ್ರೇನಿಯನ್ ನಗರದ ಖೆರ್ಸನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಪ್ರಮುಖ ನಗರಗಳಾದ ಖಾರ್ಕಿವ್ ಮತ್ತು ರಾಜಧಾನಿ ಕೀವ್ ರಷ್ಯಾದಿಂದ ತಡೆರಹಿತ ಶೆಲ್ ದಾಳಿಗೆ ಸಾಕ್ಷಿಯಾಗಿದೆ. 1 ಮಿಲಿಯನ್ ಜನರು ಉಕ್ರೇನ್ ನಿಂದ ಪಲಾಯನ. ಈ ಮೇಲಿನ ಸುದ್ದಿಗಳನ್ನು ವಿವರವಾಗಿ ನೋಡೋಣ ಬನ್ನಿ.

ದಕ್ಷಿಣ ಉಕ್ರೇನಿಯನ್ ನಗರ ಖೆರ್ಸನ್ ರಷ್ಯಾದ ವಶಕ್ಕೆ : ರಷ್ಯಾದ ಪಡೆಗಳು ಖೆರ್ಸನ್ ವಶಪಡಿಸಿಕೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ನಮ್ಮ ನಗರ ಆಡಳಿತ ಕಟ್ಟಡವನ್ನು ನಾವೇ ನಿಯಂತ್ರಿಸುತ್ತಿದ್ದೇವೆ ಎಂದು ಉಕ್ರೇನಿಯನ್ ಆಂತರಿಕ ಸಚಿವಾಲಯದ ಸಲಹೆಗಾರ Vadym Denysenko ಹೇಳಿಕೆ ನೀಡಿದ್ದಾರೆ.

ಸರ್ಕಾರ ಸ್ಥಾಪಿಸಲು ರಾಜಧಾನಿ ಕೈವ್ ನ ಮೇಲೆ ರಷ್ಯಾದ ಕಣ್ಣು : ರಷ್ಯಾದ ಟ್ಯಾಂಕರ್ ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳು ಬೃಹತ್ ಬೆಂಗಾವಲು ಬುಧವಾರ ಮೂವತ್ತು ಲಕ್ಷ ಜನಸಂಖ್ಯೆಯಿರುವ ಉಕ್ರೇನ್ ರಾಜಧಾನಿ ಕೀವ್ ಕಡೆಗೆ ಸಾಗಿತು. ಉಕ್ರೇನ್ ನ ಸರ್ಕಾರವನ್ನು ಉರುಳಿಸುವ ಮತ್ತು ತನ್ನ ಹೊಸ ಆಡಳಿತವನ್ನು ಸ್ಥಾಪಿಸುವ ಸ್ಪಷ್ಟ ಗುರಿಯೊಂದಿಗೆ ಸಾಗುತ್ತಿದೆ. ಇವೆಲ್ಲದರ ನಡುವೆಯೂ ಉಕ್ರೇನಿಯನ್ ಪಡೆಗಳು ತಮ್ಮ ತಾಯ್ನಾಡನ್ನು ಕೊನೆ ಉಸಿರು ಇರೋವರೆಗೂ ಹೊರಡುತ್ತೇವೆ ಎಂಬ ಆತ್ಮವಿಶ್ವಾಸದಿಂದ ಮುನ್ನುಗ್ಗಿ ರಷ್ಯಾದ ಪಡೆಗಳನ್ನು ತಡೆಗಟ್ಟುವುದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವಸಂಸ್ಥೆಗೂ ಕೇರ್ ಮಾಡದ ರಷ್ಯಾ , ಖಾರ್ಕಿವ್ ನಲ್ಲಿ ಭಾರೀ ಬಾಂಬ್ ದಾಳಿ : ವಿಶ್ವಸಂಸ್ಥೆಯು ರಷ್ಯಾದ ಆಕ್ರಮಣವನ್ನು ಖಂಡಿಸಿ ಸಾಮಾನ್ಯ ಸಭೆಯ ಮತದಾನದಲ್ಲಿ ಬೇಸರ ವ್ಯಕ್ತಪಡಿಸಿತು. ಇದರ ನಡುವೆಯೂ ರಷ್ಯಾ ಖಾರ್ಕಿವ್ ನ ಮೇಲೆ ಭಾರಿ ದಾಳಿಯನ್ನು ನಡೆಸಿದೆ. ಅನೇಕ ದೇಶಗಳು ಸಾಂಭವ್ಯ ಯುದ್ಧ ಅಪರಾಧಿಗಳ ಕುರಿತು ತನಿಖೆಯನ್ನು ಕೋರಿದವು (Political war crime ) ಉಕ್ರೇನಿಯನ್ನರು ಈಗ ನಿರಾಶ್ರಿತರು.

ರಷ್ಯಾದ ಆಕ್ರಮಣದ ನಂತರ ಹತ್ತು ಲಕ್ಷ ಜನರು ಉಕ್ರೇನ್ ನಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್ (UN) ನಿರಾಶ್ರಿತರ ಸಂಸ್ಥೆ ಹೇಳಿದೆ . (UNHCR) ಯುನೈಟೆಡ್ ನೇಷನ್ಸ್ ಹೈ ಕಮಿಷನ್ ಫಾರ್ ರೆಫ್ಯೂಜಿಸ್ ಪ್ರಕಾರ ಶೇಕಡ 2% ಉಕ್ರೇನಿಯರು ರೆಫ್ಯೂಜಿಸ್ ಆಗಿದ್ದಾರೆ ಹಾಗೂ 4 ಲಕ್ಷ ಜನರು ಉಕ್ರೇನ್ ತೊರೆಯಬಹುದು ಎಂದು ಯುಎನ್ ಏಜೆನ್ಸಿ ಊಹಿಸಿದ್ದಾರೆ.

ಉಕ್ರೇನ್ ನ ಗುಪ್ತಚರ ಸಂಸ್ಥೆಗೆ ಬಿಕ್ಕಟ್ಟು : ಕೈವ್ ನ ಮುಖ್ಯ ಟಿವಿ ಟವರಿನ ಮೇಲೆ ರಷ್ಯಾ ಪಡೆಗಳು ಶೆಲ್ ದಾಳಿ ನಡೆಸಿತು. ಇದರಿಂದ 5 ಜನರು ಮೃತಪಟ್ಟಿದ್ದಾರೆ ಹಾಗೂ ಮತ್ತಷ್ಟು ಜನ ಗಾಯಗೊಂಡಿದ್ದಾರೆ.

Exit mobile version