ರಷ್ಯಾ-ಉಕ್ರೇನ್ ಯುದ್ಧ: ವಿಫಲವಾಯ್ತಾ ಮೋದಿ ಸರ್ಕಾರ?
ರಷ್ಯಾ – ಉಕ್ರೇನ್ ದಾಳಿಯ ಸುಳಿವು ಭಾರತಕ್ಕೆ ಸಿಗಲಿಲ್ವಾ ?
ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೆ ಬಲಿಯಾಗ್ತಿದ್ದಾರಾ ಭಾರತೀಯರು?
ಯುದ್ಧಗ್ರಸ್ತ ಭೂಮಿಯಿಂದ ಬಚಾವಾಗಿ ಬರ್ತಾರಾ ನಮ್ಮವರು?
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಬಲಿಯಾದ ನಮ್ಮ ಕನ್ನಡದ ಹುಡುಗ ಹಾವೇರಿಯ ರಾಣೆಬೆನ್ನೂರಿನ ನವೀನನ ಮನೆಯವರ ಗೋಳು ಹೇಳತೀರದು. ಎಂಬಿಬಿಎಸ್ ಮಾಡುವ ಕನಸು ಹೊತ್ತು ಉಕ್ರೇನ್‌ಗೆ ಹೋಗಿದ್ದ ನವೀನ ಇವತ್ತು ಯುದ್ಧ ಭೂಮಿಯಲ್ಲಿ ಹೆಣವಾಗಿದ್ದು ದುರಂತ.

ಇದು ಒಂದು ನವೀನನ ಮನೆಯವರ ನೋವಿನ ಕತೆಯಲ್ಲ. ಡಾಕ್ಟರ್ ಆಗೋ ಆಸೆ ಹೊತ್ತು ಉಕ್ರೇನ್ ಸೇರಿದ ಅದೆಷ್ಟೋ ನವೀನರ ಮನೆಯವರ ಆತಂಕದ ವ್ಯಥೆ.
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಬಲಿಯಾದ ನಮ್ಮ ಕನ್ನಡದ ಹುಡುಗ ಹಾವೇರಿಯ ರಾಣೆಬೆನ್ನೂರಿನ ನವೀನನ ಮನೆಯವರ ಗೋಳು ಹೇಳತೀರದು. ಎಂಬಿಬಿಎಸ್ ಮಾಡುವ ಕನಸು ಹೊತ್ತು ಉಕ್ರೇನ್‌ಗೆ ಹೋಗಿದ್ದ ನವೀನ ಇವತ್ತು ಯುದ್ಧ ಭೂಮಿಯಲ್ಲಿ ಹೆಣವಾಗಿದ್ದು ದುರಂತ.
ಇದು ಒಂದು ನವೀನನ ಮನೆಯವರ ನೋವಿನ ಕತೆಯಲ್ಲ. ಡಾಕ್ಟರ್ ಆಗೋ ಆಸೆ ಹೊತ್ತು ಉಕ್ರೇನ್ ಸೇರಿದ ಅದೆಷ್ಟೋ ನವೀನರ ಮನೆಯವರ ಆತಂಕದ ವ್ಯಥೆ.

ಯುದ್ಧದ ಮುನ್ಸೂಚನೆ ಮೊದಲೇ ಸಿಕ್ಕಿತ್ತು? ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರದ ಸೂಚನೆ ಎಲ್ಲರಿಗೂ ಇತ್ತು. ಉಕ್ರೇನ್‌ನ ಕಾರ್ಕೀವ್ ಮೇಲೆ ದಾಳಿ ಮಾಡಲಾಗುತ್ತೆ, ಹಾಗಾಗಿ ಕಾರ್ಕೀವ್ ನಲ್ಲಿ ನೆಲೆಸಿರುವಂತ ಎಲ್ಲಾ ಜನರನ್ನು ತಕ್ಷಣವೇ ಸ್ತಳಾಂತರಿಸಬೇಕು ಅಂತ ಹೇಳಿತ್ತು. ಆದರೆ ರಷ್ಯಾದ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದೇ ಈ ಎಲ್ಲಾ ಅನಾಹುತಕ್ಕೆ ಕಾರಣವಾಗಿದೆ. ರಷ್ಯಾದ ಭೀಕರ ದಾಳಿಗೆ ತುತ್ತಾದ ಕಾರ್ಕೀವ್‌ನಲ್ಲಿ ನೂರಾರು ಭಾರತೀಯರು ಸಿಲುಕಿಕೊಂಡಿದ್ದಾರೆ. ನಮ್ಮ ಸರ್ಕಾರ ಗಡಿ ಭಾಗಗಳಿಗೆ ತಲುಪುವ ಮತ್ತು ಯುಕ್ರೇನ್ ನ ಪೂರ್ವ ಭಾಗಗಳಲ್ಲಿ ಇರುವಂಥ ಭಾರತೀಯರನ್ನ ಮಾತ್ರ ಕರೆದು ತರುವ ಪ್ರಯತ್ನ ಮಾಡುತ್ತಿದೆ. ಆದ್ರೆ ಅತೀ ಹೆಚ್ಚು ಹಾನಿಗೊಳಗಾಗಿರುವ ಕಾರ್ಕಿವ್‌ನಲ್ಲಿ ಸಿಲುಕಿರುವ ಭಾರತೀಯರ ಗತಿ ಏನು ?
ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧ ಸಾರುತ್ತೆ ಅಂದ ಮೇಲೆ ಅದು ಜನಸಾಮಾನ್ಯರಿಗೆ ಗೊತ್ತಾಗದೇ ಇರಬಹುದು, ಆದ್ರೆ ಒಂದು ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಸರ್ಕಾರಕ್ಕೆ ಯುದ್ಧದ ಮಾಹಿತಿ ಮೊದಲೇ ತಿಳಿದಿರಲ್ವಾ. ಅಲ್ಲದೆ ರಷ್ಯಾ ಭಾರತಕ್ಕೆ ಮಿತ್ರ ರಾಷ್ಟ್ರ. ಹೀಗಿರುವಾಗ ನಮ್ಮ ಸರ್ಕಾರ ಯುದ್ಧ ಆರಂಭಕ್ಕೆ ಮುನ್ನವೇ ತನ್ನ ನಾಗರೀಕರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಿಲ್ಲಾ ಯಾಕೆ? ಈ ಪ್ರಶ್ನೆ ಈಗ ಪ್ರತಿಯೊಬ್ಬರನ್ನು ಕಾಡುತ್ತಿದೆ.
ಚುನಾವಣೆ ಗುಂಗಲ್ಲಿ ಎಲ್ಲವೂ ಮರೆತು ಹೋಯ್ತಾ? : ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ನಡೀತಿದೆ. ಇಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ಹಪಾಹಪಿಯಲ್ಲಿರುವ ಬಿಜೆಪಿ, ರಷ್ಯಾ-ಉಕ್ರೇನ್ ಯುದ್ಧ ಪರಿಸ್ಥಿತಿಯನ್ನು ನಿರ್ಲಕ್ಷಿಸಿರೋದು ಇಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತೆ.

ರಕ್ಷಣೆಗೆ ಕಾಯ್ತಿದ್ದಾರೆ 14,000 ಭಾರತೀಯರು : ರಷ್ಯಾ-ಉಕ್ರೇನ್ ಯುದ್ಧ ಆರಂಭವಾಗಿ ಏಳುದಿನಗಳೇ ಕಳೆದಿವೆ. ಯುದ್ಧದ ನಂತರ ಅಲ್ಲಿನ ವಿದ್ಯಾರ್ಥಿಗಳು ಹಾಗೂ ಇತರರು ರಕ್ಷಣೆಗಾಗಿ ಗೋಗರೆದುಕೊಂಡಾಗ ಥಟ್ಟನೆ ಎದ್ದು ಕೂತ ಕೇಂದ್ರ ಸರ್ಕಾರ ಭಾರತೀಯರ ರಕ್ಷಣೆಗೆ ‘ಆಪರೇಷನ್ ಗಂಗಾ’ ಹೆಸರಿನಲ್ಲಿ ಆರು ವಿವಾನಗಳ ಮೂಲಕ 2000 ಭಾರತೀಯರನ್ನು ರಕ್ಷಿಸಲಾಗಿದೆ. ಆದ್ರೆ ಇನ್ನುಳಿದ ಭಾರತೀಯರ ಗತಿ ಏನು?

ರಾಜ ತಾಂತ್ರಿಕತೆಯಲ್ಲಿ ಸಂಪೂರ್ಣ ವೈಫಲ್ಯ?: ಯುದ್ಧದ ಬಗ್ಗೆ ನಮಗೆ ಸುಳಿವೇ ಇರಲಿಲ್ಲ ಅಂತ ಹೆಳೋಕೆ ಆಗಲ್ಲ. ಹಾಗಿದ್ದರೆ ರಾಯಬಾರಿಗಳು ಇರೋದ್ಯಾಕೆ? ಭಾರತದ ರಾಯಾಬಾರಿಗಳು ರಷ್ಯಾದಲ್ಲಿದ್ದಾರೆ,ಯುಕ್ರೇನ್ ನಲ್ಲಿಯೂ ಇದ್ದಾರೆ. ಇದೇ ರೀತಿಯಲ್ಲಿ ರಷ್ಯ ಮತ್ತು ಉಕ್ರೇನ್ ರಾಯಬಾರಿಗಳು ಭಾರತದಲ್ಲೂ ಇದ್ದಾರೆ ಇದಿಷ್ಟೇ ಅಲ್ಲ ಜೋತೆಗೆ ದೇಶದ ಗೂಡಾಚಾರಿಗಳನ್ನೂ ಪ್ರಪಂಚದ ಎಲ್ಲಾ ದೇಶಗಳಲ್ಲೂ ಇರಿಸಲಾಗಿರುತ್ತದೆ. ಇಷ್ಟೆಲ್ಲಾ ವ್ಯವಸ್ಥೆಗಳಿದ್ರೂ ಭಾರತ ಭಾರತೀಯರ ಸುರಕ್ಷತೆಗೆ ಯಾವ ಕ್ರಮವನ್ನೂ ಕೈಗೊಳ್ಳದೆ ಇದ್ದಿದ್ದು ರಾಜತಾಂತ್ರಿಕತೆಯ ವೈಫಲ್ಯ ಅಲ್ಲದೆ ಬೇರೇನೂ ಅಲ್ಲ.
–Ramitha Kamanayakanhalli