ಋತುಚಕ್ರದ ನೋವು ನಿವಾರಣೆಗೆ ಇದನ್ನು ಬಳಸಿ

ತಿಂಗಳಿಗೊಮ್ಮೆ ಬರುವ ಹೊಟ್ಟೆ ನೋವು ಅನೇಕ ಹೆಣ್ಣು ಮಕ್ಕಳಿಗೆ ಕಾಡುತ್ತದೆ. ಈ ಸಮಸ್ಯೆಗೆ ಮನೆಮದ್ದು ನಮ್ಮ ಅಡಿಗೆಮನೆಯಲ್ಲೇ ಇದೆ. ಇದು ತುಂಬಾ ಸುಲಭದ ಉಪಾಯವಾಗಿದೆ.  ಮೆಂತ್ಯೆ ಎಲ್ಲರಿಗೂ ಗೊತ್ತೇ ಇದೆ. ಇದು ಗುಣದಿಂದ ಕಹಿಯಾಗಿದ್ದರು, ಇದರಲ್ಲಿ ಆರೋಗ್ಯಕರ ಅಂಶಗಳಿವೆ.

ಮೆಂತ್ಯೆಯ ಕಾಳಿನ ಜತೆ ಜೀರಿಗೆ, ಕೊತ್ತಂಬರಿ, ಸಾಸಿವೆ ಇವುಗಳನ್ನು ಹಾಕಿ ಒಂದೆರಡು ಕಾಳು ಮೆಣಸನ್ನು ಸೇರಿಸಿ ನೀರಿನಲ್ಲಿ ನೆನೆಸಿಡಬೇಕು. ಚೆನ್ನಾಗಿ ನೆನೆದ ಬಳಿಕ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.  ರುಬ್ಬುವಾಗ ಒಂದು ಚೂರು ಬೆಲ್ಲ ಹಾಗೂ ಚಿಟಿಕೆ ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. ಆ ಬಳಿಕ ಇದನ್ನು ಕುಡಿದರೆ ಹೊಟ್ಟೆ ನೋವು ನಿಮಿಷದಲ್ಲಿ ಶಮನವಾಗುತ್ತದೆ. ಬೇಕಾದರೆ ನೀರಿನ ಬದಲಿಗೆ, ಕುದಿಸಿ ಆರಿಸಿದ ಹಾಲನ್ನು ಸೇರಿಸಿ, ಕುಡಿಯಬಹುದು. ಇದು ಕೂಡ ಹೊಟ್ಟೆ ನೋವಿನ ಉಪಶಮನಕ್ಕೆ ಸೂಕ್ತ ಔಷಧಿಯಾಗಿದೆ.

ಕರಾವಳಿ ಭಾಗದಲ್ಲಿ ಈ ಜ್ಯೂಸ್‌ ಅನ್ನು ‘ಹಸಿ ಜ್ಯೂಸ್’ ಎಂದೂ ಕರೆಯುತ್ತಾರೆ. ಇದು ಬೇಸಿಗೆ ಹಾಗೂ ಚಳಿಗಾಲದಲ್ಲಿ ಚರ್ಮದ ರಕ್ಷಣೆಗೂ ಒಳ್ಳೆಯದು ಹೇಳಲಾಗುತ್ತದೆ. ಹೆಂಗಸರ ಮುಟ್ಟಿನ ಸಮಸ್ಯೆಗೂ ಒಳ್ಳೆಯ ಮದ್ದು ಎಂದೇ ಹೇಳಬಹುದು. ಈ ಜ್ಯೂಸ್ ದೇಹವನ್ನು ತಂಪಾಗಿಡುತ್ತದೆ, ಹಾಗೂ ತೀವ್ರ ಹೊಟ್ಟೆ ನೋವಿಂದ ಕೂಡಾ ಕಾಪಾಡುತ್ತದೆ.

Exit mobile version