ಸರ್ಕಾರದಿಂಧ ವೃದ್ದಾಪ್ಯ, ಅಂಗವಿಕಲ ಮತ್ತು ವಿಧವಾ ವೇತನಕ್ಕೆ ಬ್ರೇಕ್ ?

ಬೆಂಗಳೂರು ಅ 26 : ಕೋವಿಡ್‌ (Covid) ಕಾರಣ ಹೇಳಿ ಸರ್ಕಾರ ವೃದ್ದಾಪ್ಯ, ಅಂಗವಿಕಲ ಮತ್ತು ವಿಧವಾ ವೇತನಗಳನ್ನು (Pension) ಸರ್ಕಾರ ನಿಲ್ಲಿಸಿದ್ದು, ಕೇವಲ ಸುಳ್ಳು ಭರವಸೆಗಳನ್ನು ನೀಡಿ ರಾಜ್ಯದ  ಜನತೆಯ ದಾರಿ ತಪ್ಪಿಸುತ್ತಿದೆ ಎಂದು ಮಾಜಿ ಸಚಿವ ಆರ್‌.ವಿ.ದೇಶಪಾಂಡೆ (RV Deshpande) ಸರ್ಕಾರದ ವಿರುದ್ದ ತಮ್ಮ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ

ಈ ಬಗ್ಗೆ ಹಾನಗಲ್‌ (Hanagal) ತಾಲೂಕಿನ ಕತ್ತರಿಕೊಪ್ಪ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ (By election) ಹಲವಾರು ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಡಬಲ್‌ ಎಂಜಿನ್‌ ಸರ್ಕಾರ ಯಾರ ಪರವಾಗಿ ಕೆಲಸ ಮಾಡುತ್ತಿದೆ  ಬಿಜೆಪಿಗೆ (BJP) ಅನುಕೂಲ ಮಾಡಲು ಜೆಡಿಎಸ್‌ (JDS) ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಜೆಡಿಎಸ್‌ ಮತ ಬಿಜೆಪಿಗೆ ಸಹಾಯ ಮಾಡಲಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದು ಹೇಳಿದರು. ಅಗತ್ಯ ವಸ್ತುಗಳು, ತೈಲ ಬೆಲೆ ಏರಿಕೆ ಮಾಡಿರುವುದೇ ಬಿಜೆಪಿ ಸಾಧನೆ. ಇದರಿಂದ ಕಾರ್ಮಿಕರಿಗೆ (labour), ಕೂಲಿಕಾರರಿಗೆ ತೊಂದರೆ ಆಗಿದೆ. ಇವೆಲ್ಲ ಬೆಳವಣಿಗೆ ಆಡಳಿತ, ಪ್ರತಿಪಕ್ಷಗಳಿಗೆ ಗೌರವ ತರುವುದಿಲ್ಲ ಆದಷ್ಡು ಬೇಗ ಸರ್ಕಾರ ವೃದ್ದಾಪ್ಯ, ಅಂಗವಿಕಲ ಮತ್ತು ವಿಧವಾ ವೇತನಗಳನ್ನು ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದರು.

Exit mobile version