ಸಬ್ಜಾ ಬೀಜದಿಂದ ಆರೋಗ್ಯ ಮಹತ್ವ

ಸಬ್ಜಾ ಬೀಜ ಅಥವಾ ಕಾಮ ಕಸ್ತೂರಿ ಬೀಜ ಇದನ್ನು ತಿನ್ನುವುದರಿಂದ ದೇಹಕ್ಕೆ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಪೈಬರ್ ಪೊಟಾಷಿಯಂ ಸಿಗುತ್ತದೆ.  ದೇಹದ ಉಷ್ಣತೆಯನ್ನು ನಿವಾರಿಸಲು ಸಬ್ಜಾ ಬೀಜದ ಜ್ಯೂಸ್ ಉತ್ತಮ. ನಿತ್ಯ ಸೇವನೆ ಮಾಡುವುದರಿಂದ ದೇಹದಲ್ಲಿ ಬೆಳೆದ ಅತಿಯಾದ ಕೊಬ್ಬು ನಿವಾರಣೆಯಾಗುತ್ತದೆ.  ದೇಹದ ಉಷ್ಣತೆಗೆ ಬಾಯಿಯಲ್ಲಿ ಗುಳ್ಳೆಗಳು ಆಗಿದ್ದರೆ ಸಬ್ಜಾ ಬೀಜದ ಜ್ಯೂಸ್ ಕುಡಿಯುವುದರಿಂದ ನಿವಾರಣೆಯಾಗುತ್ತದೆ. ಒಂದು ಲೋಟ ಹಾಲಿಗೆ ಒಂದು ಚಮಚ ಸಬ್ಜಾ ಬೀಜವನ್ನು ಹಾಕಿ 20 ನಿಮಷ ಹಾಗೇ ಇಟ್ಟು ಬಳಿಕ ಕುಡಿಯಬೇಕು ಅಥವಾ ಒಂದು ಲೋಟ ಮಜ್ಜಿಗೆಗೆ ಒಂದು ಚಮಚ ಸಬ್ಜಾ ಬೀಜ ಹಾಕಿ  ಬೀಜ ನೆನೆದ ಬಳಿಕ ಕುಡಿಯಬೇಕು.

ದೇಹದ ಉಷ್ಣ ನಿವಾರಣೆಯಾಗಿ ಬಾಯಿಹುಣ್ಣು ನಿವಾರಣೆಯಾಗುತ್ತದೆ. ಅತಿಯಾದ ದಾಹವಾಗುತ್ತಿದ್ದರೆ ಒಂದು ಚಮಚ ಸಬ್ಜಾ ಬೀಜವನ್ನು ನೆನೆಸಿಟ್ಟು ಬಳಿಕ ಒಂದು ಗ್ಲಾಸ್ ಲಿಂಬೆ ಜ್ಯೂಸ್ ಗೆ ನೆನೆಸಿಟ್ಟ ಸಬ್ಜಾ ಬೀಜವನ್ನು ಬೆರೆಸಿ ಕುಡಿದರೆ ದಾಹ ನಿವಾರಣೆಯಾಗುತ್ತದೆ. ಇನ್ನು ರಾತ್ರಿ ಒಂದು ಗ್ಲಾಸ್ ನೀರಲ್ಲಿ ನೆನೆಸಿಟ್ಟ ಸಬ್ಜಾ ಬೀಜವನ್ನು ಬೆಳಿಗ್ಗೆ ಕುಡಿಯುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ  ಅಧಿಕ ರಕ್ತದೊತ್ತಡ ಹಾಗೂ ಮದುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ.

Exit mobile version