ಸಾಕು ನಾಯಿಯೊಂದಿಗೆ ಆಟವಾಡಿ ಕಾಲು ಮುರಿದುಕೊಂಡ ಜೋ ಬೈಡೆನ್

ವಾಷಿಂಗ್ಟನ್, ನ.30 :  ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಅವರಿಗೆ ನಾಯಿಗಳೆಂದರೆ ಬಲುಪ್ರೀತಿ, ತಮ್ಮ ಮನೆಯ ಸಾಕು ನಾಯಿಯೊಂದಿಗೆ ಆಟವಾಡುವಾಗ ಕಾಲಿನ ಮೂಳೆ ಮುರಿದು ಕೊಂಡಿದ್ದಾರೆ. ಜೋ ಬೈಡೆನ್ ಜರ್ಮನ್ ಶೆಫರ್ಡ್ ನಾಯಿಗಳನ್ನು ಸಾಕುತ್ತಿದ್ದಾರೆ.

ನಾಯಿಯೊಂದಿಗೆ ಆಟವಾಡುವಾಗ ಅವರ ಕಾಲಿನ ಪಾದದ ತಿರುಚಿದೆ ಎಂದು ಅವರ ವೈದ್ಯ ಕೆವಿನ್ ಒ ಕಾನರ್ ಸ್ಪಷ್ಟಪಡಿಸಿದ್ದಾರೆ.
ವೈದ್ಯಕೀಯ-ಸಿಟಿ ಸ್ಕ್ಯಾನ್ ಪರೀಕ್ಷೆಯ ಮೂಲಕ ಕಾಲಿನ ಮೂಳೆ ಸಣ್ಣದಾಗಿ ಮುರಿತವಾಗಿರುವುದು ಖಚಿತವಾಗಿದೆ.

ಅವರಿಗೆ ಹಲವು ವಾರಗಳವರೆಗೆ ವಾಕಿಂಗ್ ಬೂಟ್ ಅಗತ್ಯವಿರುತ್ತದೆ ಎಂದು ವೈದ್ಯರು ಸಲಹೆ ಮಾಡಿದ್ದಾರೆ. ಬೆಳಿಗ್ಗೆ ಜಾಗಿಂಗ್ ಸಮಯದಲ್ಲಿ ತಮ್ಮ ಸಾಕು ನಾಯಿ ಜರ್ಮನ್ ಶೆಫರ್ಡ್ ಜೊತೆ ಜಾಗಿಂಗ್ ನಲ್ಲಿ ಆಟವಾಡುತ್ತಿದ್ದಾಗ ಕೆಳಗೆ ಜಾರಿಬಿದ್ದು ಕಾಲಿಗೆ ಗಾಯಮಾಡಿಕೊಂಡಿದ್ದಾರೆ. ಡೆಲಾವರ್ ನಲ್ಲಿರುವ ಮೂಳೆ ತಜ್ಞ ವೈದ್ಯರೊಬ್ಬರಿಂದ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಬೈಡೆನ್ ಕಚೇರಿ ತಿಳಿಸಿದೆ.

Exit mobile version