ನಾಡಹಬ್ಬಕ್ಕೆ’ಶ್ರೀಕೃಷ್ಣ @gmail. Com’ ತೆರೆಗೆ

ಕನ್ನಡಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸಿರುವ ‘ಶ್ರೀಕೃಷ್ಣ@gmail.Com’ ಚಿತ್ರ ವಿಜಯ ದಶಮಿ ಶುಭದಿನದಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ‘ಶ್ರೀಕೃಷ್ಣ@gmail.Com’ ಚಿತ್ರ  ವಿಜಯ ದಶಮಿ ದಿನದಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ.

ನಾನು ಐವತ್ತರಷ್ಟು ಅನುಮತಿಯಿದಾಗಲೇ ಚಿತ್ರ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದೆ. ಈಗ ಸರ್ಕಾರ ಪೂರ್ಣ ಭರ್ತಿಗೆ ಅನುಮತಿ ನೀಡಿದೆ. ದಸರಾಗೆ ಸಾಲುಸಾಲು ರಜೆ ಇದ್ದು, ಇದು  ಪ್ರೇಕ್ಷಕರು ಬರಲು ಅನುಕೂಲವಾಗುತ್ತದೆ. ಇದೇ ದಸರಾದಲ್ಲಿ ಇನ್ನೂ ಎರಡು ಚಿತ್ರಗಳು ಬಿಡುಗಡೆಯಾಗುತ್ತಿದೆ. ಎಲ್ಲಾ ಚಿತ್ರಗಳಿಗೂ ಒಳ್ಳೆಯದಾಗಲಿ.

ಕೃಷ್ಣ ನಮ್ಮ ಮೈಸೂರಿನ ಹುಡುಗ . ನಿರ್ದೇಶಕರು ಕೃಷ್ಣ ಹೀರೋ ಅಂದಾಗ ಸಂತೋಷವಾಯಿತು. ನಾಗಶೇಖರ್ ಕೂಡ ನಮ್ಮ ಅಮರ್ ಚಿತ್ರವನ್ನು ನಿರ್ದೇಶಿಸಿದ್ದರು. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಸಂದೇಶ್ ನಾಗರಾಜ್.

ನಾನು ಮೈಸೂರಿನವನೇ ಆಗಿರುವುದರಿಂದ ಚಿಕ್ಕಂದಿನಿಂದಲೂ ನಿರ್ಮಾಪಕರನ್ನು ಬಲ್ಲೆ. ಅವರ ಹೋಟೆಲ್ ಗೆ ಹೋಗುತ್ತಿದ್ದೆ. ಈಗ ಅವರ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ನಾಗಶೇಖರ್ ಅವರ ನಿರ್ದೇಶನ ಅಂದ ಮೇಲೆ ಕಥೆ, ಹಾಡುಗಳು ಎಲ್ಲಾ ಚೆನ್ನಾಗಿರುತ್ತದೆ. ಈ ಚಿತ್ರ ಕೂಡ ತುಂಬಾ ಚೆನ್ನಾಗಿದೆ. ದತ್ತಣ್ಣ ಅವರಂತಹ ಹಿರಿಯರೊಂದಿಗೆ ನಟಿಸಿದ್ದು ಮರೆಯಲಾಗದ ಅನುಭವ. ನನ್ನೊಂದಿಗೆ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಸೊಗಸಾಗಿದೆ  ಎಂದರು ನಾಯಕ ಡಾರ್ಲಿಂಗ್ ಕೃಷ್ಣ.

ನಾನು ಕಾರು ಓಡಿಸುತ್ತಿದ್ದಾಗ ಫೋನ್ ಮಾಡಿದ್ದ ನಿರ್ಮಾಪಕರು ತಕ್ಷಣವೇ ಮೈಸೂರಿಗೆ ಬರುವಂತೆ ಹೇಳಿದರು. ತಕ್ಷಣವೇ ಚಿತ್ರ ಆರಂಭಿಸೋಣ ಎಂದರು. ಲಾಕ್ ಡೌನ್ ಸಮಯದಿಂದ  ಎಷ್ಟೋ ಜನರಿಗೆ ಕೆಲಸ ಇಲ್ಲ. ನಾವು ಚಿತ್ರ ಆರಂಭ ಮಾಡಿದರೆ, ಎಷ್ಟೋ ಜನಕ್ಕೆ ಕೆಲಸ ಸಿಗುತ್ತದೆ ಎಂದರು ನಿರ್ಮಾಪಕ ಸಂದೇಶ್ ನಾಗರಾಜ್.

ವಿಭಿನ್ನ ಕಥೆ. ನಾನು ಮತ್ತು ಪ್ರೀತಂ ಗುಬ್ಬಿ ಚಿತ್ರಕಥೆ ಬರೆದಿದ್ದೇವೆ. ಕೃಷ್ಣ – ಭಾವನಾ ಮೆನನ್ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ರಿಷಬ್ ಶೆಟ್ಟಿ ಅವರು ತಾವೊಬ್ಬ ನಾಯಕ, ನಿರ್ದೇಶಕನಾಗಿದ್ದರೂ, ನಾವು ಕೇಳಿದ ತಕ್ಷಣ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಹಿರಿಯ ಕಲಾವಿದರು ಹಾಗೂ ತಂತ್ರಜ್ಞರ ಸಹಕಾರ ಮರೆಯಲಾಗದು. ನಮ್ಮ ಚಿತ್ರ ವಿಜಯದಶಮಿಗೆ ನಿಮ್ಮ ಮುಂದೆ ಬರಲಿದೆ. ಸುಮಾರು ನೂರೈವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ , ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಿರ್ದೇಶಕ ನಾಗಶೇಖರ್ ತಿಳಿಸಿದರು.

ಸಂದೇಶ್ ಪ್ರೊಡಕ್ಷನ್ಸ್  ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಬೃಂದಾ ಎನ್ ಜಯರಾಂ. ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ  ಭಾವನಾ ಮೆನನ್ ನಟಿಸಿದ್ದಾರೆ.  ಚಂದನ್ ಗೌಡ ದ್ವಿತೀಯ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದ ಅತಿಥಿ ಪಾತ್ರದಲ್ಲಿ ನಿರ್ದೇಶಕ, ನಾಯಕ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ದತ್ತಣ್ಣ, ಸಾಧುಕೋಕಿಲ, ಅಚ್ಯುತರಾವ್, ಸಾತ್ವಿಕ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮುಂತಾದ ಅದ್ದೂರಿ ತಾರಾಬಳಗ ಈ ಚಿತ್ರದಲ್ಲಿದೆ.

ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ. ಕವಿರಾಜ್ ಗೀತರಚನೆ ಮಾಡಿದ್ದಾರೆ.  ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ ಶ್ರೀಕೃಷ್ಣ@gmail.com ಚಿತ್ರಕ್ಕೆ ದೀಪು ಎಸ್ ಕುಮಾರ್  ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನವಿದೆ.

Exit mobile version