ಕೋಟಿಗೊಬ್ಬ-3 ಪ್ರದರ್ಶನ ವಿಳಂಬಕ್ಕೆ ಅಭಿಮಾನಿಗಳ ಆಕ್ರೋಶ

ಬೆಂಗಳೂರು ಅ 14 :  ಕೊರೋನಾ ಎರಡನೇ ಅಲೆ ತಗ್ಗಿದ ನಂತರ ಸರ್ಕಾರ ಥಿಯೇಟರ್ ಗಳಲ್ಲಿ ಶೇಕಡಾ 100ರ ಆಸನ ಭರ್ತಿಗೆ ಅನುಮತಿ ನೀಡಿದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಕಳೆದ ವಾರ ‘ನಿನ್ನ ಸನಿಹಕೆ’ ಚಿತ್ರ ಬಿಡುಗಡೆಯಾಗಿ ಇಂದು ನವರಾತ್ರಿಯ ಆಯುಧ ಪೂಜೆಯ ಶುಭದಿನ ಎರಡೆರಡು ಚಿತ್ರಗಳು ತೆರೆಗೆ ಬರುತ್ತಿವೆ.

ಕೋಟಿಗೊಬ್ಬ-3 ಬಿಡುಗಡೆಗೆ ತಡೆ : ಆದರೆ ಕೋಟಿಗೊಬ್ಬ-3 ಚಿತ್ರಕ್ಕೆ ಥಿಯೇಟರ್ ಗಳ ಮುಂದೆ ಬೆಳ್ಳಂಬೆಳಗ್ಗೆ ಬಂದ ಕಿಚ್ಚನ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಕೋಟಿಗೊಬ್ಬ-3 ಬೆಳಗಿನ ಶೋ ಪ್ರದರ್ಶನವಾಗಿಲ್ಲ, ಪ್ರೇಕ್ಷಕರಿಗೆ ಟಿಕೆಟ್ ಸಿಕ್ಕಿಲ್ಲ. ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಅಕ್ಟೋಬರ್ 14ರ ಮುಂಜಾನೆ ಅಭಿಮಾನಿಗಳಿಗಾಗಿ ಏರ್ಪಡಿಸಿದ್ದ ವಿಷೇಶ ಪ್ರದರ್ಶನ ನೋಡಲು ಕಿಚ್ಚನ ಅಭಿಮಾನಿಗಳು ಚಿತ್ರ ಮಂದಿರಗಳ ಮುಂದೆ ನೆರೆದಿದ್ದು ಥಿಯೇಟರ್ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. 7 ಗಂಟೆ ಆಗುತ್ತಿದ್ದಂತೆ ಕೋಟಿಗೊಬ್ಬ 3 ಸಿನಿಮಾ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು. ಆದ್ರೆ ತಾಂತ್ರಿಕ ಕಾರಣಗಳಿಂದಾಗಿ ಮಾರ್ನಿಂಗ್ ಶೋ ಕ್ಯಾನ್ಸಲ್ ಆಗಿದೆ. ಶೋ ಕ್ಯಾನ್ಸಲ್ ಮಾಡಿರುವುದಾಗಿ ಚಿತ್ರಮಂದಿರದ ಆಡಳಿತ ಮಂಡಳಿ ಮಂದಿರಗಳ ಮುಂದೆ ಬೋರ್ಡ್ ಹಾಕಿದೆ. ಆನ್ ಲೈನ್ ಮೂಲಕ ಅಮೌಂಟ್ ರೀಫಂಡ್ ಮಾಡುವುದಾಗಿ ತಿಳಿಸಿದೆ. ನೆಚ್ಚಿನ ನಟನ ಸಿನಿಮಾ ನೋಡದೆ ಬೇಸರದಿಂದ ಅಭಿಮಾನಿಗಳು ಆಚೆ ನಿಂತಿದ್ದು ಕೆಲ ಅಭಿಮಾನಿಗಳು ಡಿಸ್ಟ್ರಿಬ್ಯೂಟರ್ಸ್​ಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ವಿಜಯಪುರದಲ್ಲಿ ಕಲ್ಲು ತೂರಾಟ : ತಾಂತ್ರಿಕ ಕಾರಣಗಳಿಂದಾಗಿ ಮಾರ್ನಿಂಗ್ ಶೋ ಕ್ಯಾನ್ಸಲ್ ಆಗಿದ ಹಿನ್ನಲೆಯಲ್ಲಿ ವಿಜಯಪುರದಲ್ಲಿ ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ಕೂಡ ನಡೆದಿದೆ.

Exit mobile version