ರಣಬೀರ್-ಆಲಿಯಾ ಮುಂದಿನ ವರ್ಷದೊಳಗೆ ಮಕ್ಕಳು ಮಾಡ್ಕೊಳಿ : ಸಂಜಯ್ ದತ್!

ranbeer kapoor

ಸಂಜಯ್ ದತ್(Sanjay Dutt) ಮತ್ತು ರಣಬೀರ್ ಕಪೂರ್(Ranbeer Kapoor) ಇಬ್ಬರೂ ತಮ್ಮದೇ ಆದ ಕಾರಣಗಳಿಗಾಗಿ ಬಾಲಿವುಡ್ ನಲ್ಲಿ ಹಲವು ಬಾರಿ ಸುದ್ದಿಯಾದ ಟಾಪ್ ಸೆಲಿಬ್ರಿಟಿಗಳು. ಸಂಜಯ್ ದತ್ ಅವರು ಸದ್ಯ ಕೆಜಿಎಫ್ 2(KGF 2) ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗಿರುವಾಗ, ರಣಬೀರ್ ಹಾಗೂ ಲೇಡಿ ಲವ್ ಆಲಿಯಾ ಭಟ್(Alia Bhat) ಜೋಡಿ ಕುರಿತು ಹಾಸ್ಯಮಯವಾಗಿ ಹೇಳಿಕಯೊಂದನ್ನು ನೀಡಿದ್ದಾರೆ.

ವಾಸ್ತವವಾಗಿ, ಸಂಜಯ್ ಮತ್ತು ರಣಬೀರ್ ಸ್ನೇಹ ಬಹಳ ಹಳೆಯದು, ರಣಬೀರ್ ಮತ್ತು ಆಲಿಯಾ ಅವರ ಮದುವೆ ಸಮಾರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಆರತಕ್ಷತೆಯಲ್ಲಿ ಸಂಜಯ್ ದತ್ ಅತಿಥಿಯಾಗಿ ಬರಬಹುದು ಎಂಬ ಮಾತುಗಳು ಕೇಳಿಬಂದಿವೆ. ಆದಾಗ್ಯೂ, ಸಂಜಯ್ ಈಗಾಗಲೇ ರಣಬೀರ್‌ ಅವರ ಮದುವೆಗೆ ಒಂದೊಳ್ಳೆ ಸಲಹೆಯನ್ನು ಕೂಡ ನೀಡಿದ್ದಾರೆ. ರಣಬೀರ್ ಮತ್ತು ಆಲಿಯಾ ಇಬ್ಬರಿಗೂ ಶುಭ ಹಾರೈಸಿ ಶೀಘ್ರದಲ್ಲೇ ಮಕ್ಕಳನ್ನು ಪಡೆಯಿರಿ ಎಂದು ಹೇಳಿದರು. ರಣಬೀರ್‌ ಅವರಿಗೆ ಸಂಜಯ್‌ ದತ್ ಈ ರೀತಿ ಸಲಹೆ ಕೊಟ್ಟಿದ್ದು, ಕೆಲವರಿಗೆ ಹಾಸ್ಯಮಯ ಅನಿಸಿದರೇ, ಇನ್ನೂ ಕೆಲವರು ನಿಮಗ್ಯಾಕೇ ಅವರ ಮುಂದಿನ ದಿನಗಳ ಬಗ್ಗೆ ಯೋಚನೆ ಎಂಬ ಪ್ರಶ್ನೆ ಹಾಕಿದ್ದಾರೆ.

ಪ್ರಸ್ತುತ ಯಶ್(Yash) ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರಮೋಷನ್ ನಲ್ಲಿ ನಿರತರಾಗಿರುವ ಸಂಜಯ್ ದತ್, ಆಲಿಯಾ ಭಟ್ ಹಾಗೂ ರಣಬೀರ್ ಜೋಡಿಗೆ ದೂರದಿಂದಲೇ ಶುಭಕೋರಿದ್ದಾರೆ. ಪ್ರೀತಿಸಿ ಮದುವೆಯಾಗುತ್ತಿರುವ ಆಲಿಯಾ-ರಣಬೀರ್ ಜೋಡಿಯ ಮದುವೆಗೆ ದೊಡ್ಡ ತಾರಾಗಣ ಬರಬಹುದು ಎಂಬ ಊಹೆಗಳೆಲ್ಲಾ ಸದ್ಯ ಹುಸಿಯಾಗಿದೆ. ಕಾರಣ, ಆಲಿಯಾ-ರಣಬೀರ್ ಮದುವೆಗೆ ಕೇವಲ ಕುಟುಂಬಸ್ಥರು, ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ವಿಶೇಷವಾಗಿ ಕೇವಲ 28 ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Exit mobile version