ರಾಜಕೀಯ ಪ್ರವೇಶಕ್ಕಾಗಿ ಕುಸ್ತಿ ತೊರೆದಿದ್ದಾರೆ: ಕುಸ್ತಿಪಟುಗಳ ವಿರುದ್ಧ ಸಂಜಯ್ ಸಿಂಗ್ ಆರೋಪ

ಭಾರತೀಯ ಕುಸ್ತಿ ಫೆಡರೇಷನ್ (Indian Wrestling Federation)ನಿಂದ ಅಮಾನತಾಗಿರುವ ಅಧ್ಯಕ್ಷ ಸಂಜಯ್ ಸಿಂಗ್ (Sanjay Singh) ಅವರು ಬಜರಂಗ್ ಪುನಿಯಾ ವಿರುದ್ಧ ಕಿಡಿಕಾರಿದ್ದು, ‘ಪುನಿಯಾ ಮತ್ತು ಇತರೆ ಕುಸ್ತಿಪಟುಗಳು ರಾಜಕೀಯ ಪ್ರವೇಶದ ಉದ್ದೇಶದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆಟಗಾರರಾಗಿ ಅವರು ತಮ್ಮ ವ್ಯಾಪ್ತಿಯನ್ನು ಮೀರಿದ್ದಾರೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಭಾನುವಾರ ಕೇಂದ್ರ ಕ್ರೀಡಾ ಸಚಿವಾಲಯವು ಡಬ್ಲ್ಯೂಎಫ್ಐನ (WFI) ಎಲ್ಲಾ ಪದಾಧಿಕಾರಿಗಳ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿದ್ದು, ಅದೇ ಸಮಯದಲ್ಲಿ ಸಚಿವಾಲಯವು, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (Indian Olympic Association)ಗೆ ಸೂಚನೆ ನೀಡಿದೆ. ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯೂಎಫ್‌ಐ) ವ್ಯವಹಾರಗಳನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು ತಾತ್ಕಾಲಿಕ ಸಮಿತಿಯನ್ನು ರಚಿಸುವಂತೆ ನಿರ್ದೇಶನ ನೀಡಿತ್ತು.

‘ಈ ಆಟಗಾರರು ಕುಸ್ತಿ ಆಡುವ ತಮ್ಮ ಪ್ರಾಯ ಮೀರಿದ್ದಾರೆ. ನೀವು ಬಜರಂಗ್ ಪುನಿಯಾ (Bajrang Punia) ಅವರನ್ನು ನೋಡಿ, ಅವರು ತಮ್ಮ ಕೊನೆಯ ಪಂದ್ಯವನ್ನು 10-0 ಅಂತರದಿಂದ ಸೋತರು. ಈಗ ಅವರು ರಾಜಕೀಯ ಸೇರುವುದಕ್ಕಾಗಿ ಕುಸ್ತಿಯನ್ನು ತೊರೆದಿದ್ದಾರೆ. ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿಯಾಗಿ, ಅವರೊಂದಿಗೆ ಕುಸ್ತಿ ಮ್ಯಾಟ್ ಮೇಲೆ ಸೆಣಸಾಡಿದ್ದಾರೆ. ಇದು ಆಟಗಾರರು ಮಾಡುವ ಕೆಲಸವಲ್ಲ’ ಎಂದು ಸಂಜಯ್ ಸಿಂಗ್ ಕಿಡಿಕಾರಿದ್ದಾರೆ.

ಕಾಂಗ್ರೆಸ್ (Congress) ಸಂಸದ ರಾಹುಲ್ ಗಾಂಧಿ ಅವರು ಬುಧವಾರ ಬೆಳಗ್ಗೆ ಜಜ್ಜರ್ ಜಿಲ್ಲೆಯ ಛಾರಾ ಗ್ರಾಮದ ವೀರೇಂದ್ರ ಆರ್ಯ ಅಖಾರಾ ತಲುಪಿ ಒಲಿಂಪಿಯನ್ ಬಜರಂಗ್ ಪುನಿಯಾ ಸೇರಿದಂತೆ ಕುಸ್ತಿಪಟುಗಳೊಂದಿಗೆ ಸಂವಾದ ನಡೆಸಿದ್ದರು. ಪ್ರತಿಭಟನೆ ನಡೆಸುತ್ತಿರುವ ಹಿರಿಯ ಕುಸ್ತಿಪಟುಗಳು ಕಿರಿಯರ ಪ್ರಗತಿ ಬಯಸುತ್ತಿಲ್ಲ. ಅವರ ಪ್ರತಿಭಟನೆಯು ಎಲ್ಲ ಕುಸ್ತಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.

ಅವರು ಕಿರಿಯ ಆಟಗಾರರ ಹಿತ ಬಯಸುವುದಿಲ್ಲ, ಅವರು ರಾಜಕೀಯ ಮಾಡುತ್ತಿದ್ದಾರೆ. ಬೇರೆ ಬೇರೆ ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಇದರಿಂದ ಟ್ರಯಲ್ಸ್ ನಡೆಯದೆ ಜೂನಿಯರ್‌ (Junior)ಗಳಿಗೆ ಸಾಕಷ್ಟು ನಷ್ಟವಾಗುತ್ತಿದೆ. ನಾನು 10-12 ವರ್ಷಗಳಿಂದ ಕುಸ್ತಿಯೊಂದಿಗೆ ಸಂಬಂಧ ಹೊಂದಿದ್ದೇನೆ. ಎಂದಾದರೂ ಕುಸ್ತಿಪಟುವಿಗೆ ಅಗೌರವ ತೋರಿದ್ದಾರೆ. ಅವರು ಅದಕ್ಕೆ ಪುರಾವೆ ತೋರಿಸಬೇಕು ಎಂದು ಸಿಂಗ್ ಹೇಳಿದರು.

ನಾನು ಅಧ್ಯಕ್ಷನಾಗಿ ಆಯ್ಕೆಯಾದ ಕೂಡಲೇ ಪ್ರತಿಭಟನೆ ಆರಂಭಿಸಿದ್ದಾರೆ. ಅದರಲ್ಲಿ ನನ್ನ ತಪ್ಪೇನು’ ಎಂದು ಕುಸ್ತಿಪಟುಗಳನ್ನು ಪ್ರಶ್ನಿಸಿದರು. ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Pogat) ಮತ್ತು ಬಜರಂಗ್ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ ಬಗ್ಗೆ ಕೇಳಿದಾಗ, ‘ಇದು ಅವರ ವೈಯಕ್ತಿಕ ವಿಷಯ; ಆದರೆ, ಅವರು ಹಾಗೆ ಮಾಡಬಾರದು. ಏಕೆಂದರೆ ನಮ್ಮ ನಾಗರಿಕರ ಹಣ ಮತ್ತು ಭಾವನೆಗಳು ಅವರನ್ನು ಇಂದು ಸ್ಟಾರ್‌ಗಳನ್ನಾಗಿ ಮಾಡಿದೆ’ ಎಂದರು.

ಭವ್ಯಶ್ರೀ ಆರ್ ಜೆ

Exit mobile version