ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನ ಫರೀದ್‌ಕೋಟ್‌ನಿಂದ ಸ್ಪರ್ಧೆ.

New Delhi: ಈ ಸಲದ ಲೋಕಸಭಾ ಚುನಾವಣೆ (Loksabha Election) ಒಂದಲ್ಲ ಒಂದು ಕಾರಣದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಇದೀಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹಂತಕರಲ್ಲಿ ಒಬ್ಬನಾಗಿದ್ದ ಬಿಯಾಂತ್‌ ಸಿಂಗ್‌ ಪುತ್ರನಾದ ಸರಬ್‌ಜಿತ್‌ ಸಿಂಗ್‌ ಖಲ್ಸಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಫರೀದ್‌ಕೋಟ್‌ (Fareedcoat) ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಈ ಹಿಂದೆ ಕೂಡ ಅವರು ಪಂಜಾಬ್‌ನಿಂದ ಸಂಸತ್ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.

ಸರಬ್ಜಿತ್ ತಾಯಿ ಬಿಮಲ್‌ ಕೌರ್‌ (Bimal Kaur) ಹಾಗೂ ಅಜ್ಜ ಸುಚಾ ಸಿಂಗ್‌ ಸಂಸದರಾಗಿ ಆಯ್ಕೆಯಾಗಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಫತೇಗಢ ಸಾಹಿಬ್ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರಿಗೆ ಕೇವಲ 12,683 ಮತಗಳು ದೊರಕಿದ್ದವು.

1989ರ ಲೋಕಸಭೆ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳ ಪಕ್ಷದ ಅಭ್ಯರ್ಥಿಯಾಗಿ ರೋಪರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸರಬ್‌ಜಿತ್ ಅವರ ತಾಯಿ ಬಿಮಲ್ ಕೌರ್ ಖಲ್ಸಾ ಹಾಗೂ ಬಟಿಂಡಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅಜ್ಜ ಸುಚಾ ಸಿಂಗ್ ಅವರು ಗೆಲುವು ಕಂಡಿದ್ದರು. ಹಾಗಾಗಿ ಈ ಸಲ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಸರಬ್‌ಜಿತ್‌ ಸಿಂಗ್‌ ಖಲ್ಸಾ ಪಿಯುಸಿ (PUC) ಡ್ರಾಪ್‌ ಔಟಾಗಿದ್ದ 45 ವರ್ಷದ ಸರಬ್‌ಜಿತ್‌ ಸಿಂಗ್‌ ಖಲ್ಸಾ ಅವರು 2009 ರಲ್ಲಿ ಭಟಿಂಡಾ, 2014 ರಲ್ಲಿ ಫತೇಗಢ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

ಒಮ್ಮೆ ಬಿಎಸ್‌ಪಿ (BSP) ಅಭ್ಯರ್ಥಿಯಾಗಿ ಕಣಕ್ಕಿಳಿದು ಹೀನಾಯ ಸೋಲುಂಡಿದ್ದರು .ಪ್ರಸ್ತುತ ಫರೀದ್‌ಕೋಟ್ ಕ್ಷೇತ್ರವನ್ನು ಕಾಂಗ್ರೆಸ್ (Congress) ಸಂಸದ ಮೊಹಮ್ಮದ್ ಸಾದಿಕ್ ಪ್ರತಿನಿಧಿಸುತ್ತಿದ್ದಾರೆ. ಆಮ್ ಆದ್ಮಿ (Aam Admi Party) ಪಕ್ಷವು ನಟ ಕರಮ್‌ಜಿತ್ ಸಿಂಗ್ ಅನ್ಮೋಲ್ ಅವರನ್ನು ಕಣಕ್ಕಿಳಿಸಿದ್ದರೆ, ಬಿಜೆಪಿಯು ಗಾಯಕ ಹನ್ಸ್ ರಾಜ್ ಹನ್ಸ್ ಅವರಿಗೆ ಟಿಕೆಟ್ ನೀಡಿದೆ. ಪಂಜಾಬ್‌ನ ಎಲ್ಲಾ 13 ಕ್ಷೇತ್ರಗಳಿಗೆ ಜೂನ್ 1ರಂದು ಮತದಾನ ನಡೆಯಲಿದೆ.

Exit mobile version