ಸಾರಿಗೆ ನೌಕರರ ಮುಷ್ಕರ; ಜನ ಜೀವನ ಅಸ್ತವ್ಯಸ್ತ

ಬೆಂಗಳೂರು, ಡಿ. 11: ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕೆಂಬ ಬೇಡಿಕೆಯೊಂದಿಗೆ ಸಾರಿಗೆ ನೌಕರರ ಸಂಘಟನೆ ಇಂದು ಧಿಡೀರ್‌ ಮುಷ್ಕರಕ್ಕೆ ಕರೆ ನೀಡಿರುವ ಕಾರಣ  ಕ‍‍ರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಸಂಚಾರದಲ್ಲಿ ಬಹಳ ವ್ಯತ್ಯಾಸವಾಗಿದೆ. ಇನ್ನು ಕೆಲವು ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗವಹಿಸಿದ ವಾಹನ ಚಾಲನೆ ಮಾಡುತ್ತಿದ್ದಾರೆ.. ಖಾಸಗಿ ಬಸ್ ಸಂಚಾರ ಹಾಗೂ ಆಟೋ ಚಾಲನೆ ಇರುವರಿಂದ  ಜನರಿಗೆ ಅಷ್ಟೇನೂ ತೊಂದರೆ ಆಗಿಲ್ಲ .ಆದರೆ  ಖಾಸಗಿ ಬಸ್ ಗಳು ಹಾಗು ಆಟೋ ಚಾಲಕರು ಈ ಸಂದರ್ಭ ಬಳಸಿಕೊಂಡು ಹಣ ಸುಲಿಗೆ ಮಾಡಲು ಮುಂದಾಗಿದ್ದಾರೆ.

ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣವಾದ  ಮೆಜೆಸ್ಟಿಕ್ ಬಸ್​ನಿಲ್ದಾಣದಲ್ಲಿ ಬೆಳಗ್ಗೆ 7ಕ್ಕೆ ಎಂದಿನಂತೆ ಬಸ್ ಸಂಚಾರ ಆರಂಭವಾದ ಹಾಗೇ ಕಾಣಿಸಿತ್ತು ಆದರೆ, ಬಸ್​ಗಳ ಸಂಖ್ಯೆ ಕಡಿಮೆ ಇತ್ತು. ಬಿಎಂಟಿಸಿ ಬಸ್​ಗಳು ಅಲ್ಲಲ್ಲಿ ಚಲಿಸುತ್ತಿದ್ದರು ಅದು ಯಾವ ನಿಲ್ದಾಣದಲ್ಲೂ ನಿಲ್ಲದೇ ಹಾಗೇ ಚಲಿಸುತ್ತಿದೆ. ನಿತ್ಯವೂ 4,100 ಬಸ್ ಸಂಚರಿಸುತ್ತಿದ್ದಲ್ಲಿ ಈಗ 10/20 ಬಸ್​ಗಳಷ್ಟೇ ಓಡಾಟ ನಡೆಸುತ್ತಿದೆ

ಮಂಡ್ಯದಲ್ಲಿ ಸಾರಿಗೆ ನೌಕರರ ಮುಷ್ಕರದ ವಿಚಾರ  ಬಗ್ಗೆ ಗೊಂದಲಕ್ಕೆ ಸಿಲುಕಿದ್ದಾರೆ, ಬೆಳಗ್ಗೆಯಿಂದ ಬಸ್ ಸಂಚಾರ ಶುರುವಾಗಿದೆ. ಆದರೆ ನಿಲ್ದಾಣದಿಂದ ಹೊರಟಿರುವ ಬಸ್‌ಗಳ ಸಂಖ್ಯೆ ಕಡಿಮೆ. ನೌಕರರು ಬಾರದ ಕಾರಣ ಕೆಲವು ಬಸ್​ಗಳು ನಿಲ್ದಾಣದಲ್ಲೇ ಇವೆ.

ಕೆ. ಆರ್. ಪುರಂ ಡಿಪೋ ಯಿಂದ  ಸಿ.ಟಿ.ಮಾರ್ಕೆಟ್ ಗೆ  ಹೊರಡ ಬೇಕಿದ್ದ ಬಸ್ ಗಳು ನಿಂತಲ್ಲೇ ನಿಂತಿದ್ದೆ.ಇಂದು ಕೆಲವೊಂದು ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತರ ಪದವಿ ಪ್ರವೇಶ ಪ್ರಕ್ರೀಯೆಗೆ ಹಲವು ವಿದ್ಯಾರ್ಥಿಗಳು ಮನೆಗಳಿಂದ ಹೊರಟ್ಟಿದ್ದು,ಬಸ್ ನಿಲ್ದಾಣಗಳಲ್ಲಿ ಬಸ್ ಗಳಿಲ್ಲದೇ ಪರದಾಡುತ್ತಿದ್ದಾರೆ.

ಹಾಗೇ ಎಷ್ಟೋ ಜನ ಊರಿಗೆ ಹೊರಟ್ಟಿದ್ದು ಯಾವುದೇ ರೀತಿಯಲ್ಲಿ ಬಸ್ ಗಳಿಲ್ಲದೆ ದಿಕ್ಕು ತೋಚದಂಗೆ ನಿಂತಿದ್ದಾರೆ.

ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಚಾಲಕರು ಹಾಗೂ ಬಸ್ ಕಂಡೆಕ್ಟರ್ ರವರು  ಹಮ್ಮಿಕೊಂಡಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದೆ. ಜಿಲ್ಲಾ  ಕೊಪ್ಪಳ‌ ಹಾಗೂ ಗಂಗಾವತಿ ವಿಭಾಗಗಳಲ್ಲಿ ಬೆಳಗ್ಗೆ ಎಂದಿನಂತೆ ಸಂಚಾರ ಆರಂಭವಾಗಿದೆ. ಆದರೆ, ಕುಷ್ಟಗಿ, ಹಾಗೂ ಕುಕನೂರು ವಿಭಾಗಗಳಲ್ಲಿ ಕಾರ್ಮಿಕರು ಹಾಜರಾಗಿಲ್ಲ.‌ಇದರಿಂದ ಸಂಚಾರ ವ್ಯತ್ಯಯ  ತುಂಬ ಉಂಟಾಗಿದೆ.

ಬಸ್​ಗಳಿಲ್ಲದೆ ಪರದಾಡುತ್ತಿರುವ ಪ್ರಯಾಣಿಕರು ಒಂದುಕಡೆ ಆದರೆ, ಖಾಲಿ ಇರುವ  ಬಸ್​ನಿಲ್ದಾಣ ಮತ್ತೊಂದೆಡೆ. ಇದಕ್ಕೆಲ್ಲ ಕಾರಣ ಸಾರಿಗೆ ನೌಕರರ ದಿಢೀರ್ ಮುಷ್ಕರದ ಪರಿಣಾಮವಿದು. ರಾಮನಗರ ವಿಭಾಗದಿಂದ ಸಾರಿಗೆ ಬಸ್​ಗಳಾವುದೂ ರಸ್ತೆಗೆ ಇಳಿಯಲಿಲ್ಲ.ಮತ್ತು ಬೆಂಗಳೂರು ಪೂರ್ತಿ ಖಾಲಿಯಾಗಿ ಬಸ್ ನಿಲ್ದಾಣಗಳು ಇವೆ. ಹೊರ ಜಿಲ್ಲೆಯಿಂದ ಬರುತ್ತಿರುವ ಅಲ್ಲೊಂದು ಇಲ್ಲೊಂದು ಬಸ್ ಗಳಿಗೆ ಹತ್ತಲು ಪ್ರಯಾಣಿಕರ ನೂಕು ನುಗ್ಗಲು ಉಂಟಾಗಿ ಇದರ ಲಾಭ ಖಾಸಗಿ ಬಸ್ ಗಳು ತುಂಬ ಪಡೆಯುತ್ತಿವೆ.ಆದರೆ ಸರ್ಕಾರ ಈಗಿನವರೆಗೆ ಯಾವುದೇ ರೀತಿಯಲ್ಲಿ ಈ ಮುಷ್ಕರ ತಡೆಯಲು ಹಾಗೂ

ಅದರ ಬಗ್ಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಬಗೆಹರಿಸುವಂತೆ ಕಾಣುತ್ತಿಲ್ಲ. ಮುಂದೆ ಯಾವ ರೀತಿಯಲ್ಲಿ ಈ ಸಾರಿಗೆ ಸಂಸ್ಥೆ ನೌಕರರು ತಮ್ಮ ಬೇಡಿಕೆಗಳ ರೂಪದಲ್ಲಿ ಮುಷ್ಕರ ಮುಂದುವರೆಯುಸುತ್ತಾರೆ ಕಾದು ನೋಡ ಬೇಕಾಗಿದೆ.

Exit mobile version