ಸಾಸಿವೆ ಎಣ್ಣೆ: ಆರೋಗ್ಯಕ್ಕೂ ಸೈ, ಅಡುಗೆಗೂ ಸೈ

ಮೊಣಕಾಲು ಕೈ ಗಂಟುಗಳು ಕುತ್ತಿಗೆ ಹಿಂಬಾಗ ನೋವಿದ್ದರೆ ಮನೆಯಲ್ಲಿ ಸುಲಭವಾಗಿ ಮನೆಮದ್ದನ್ನು ತಯಾರಿಸಿಕೊಂಡು ಈ ನೋವುಗಳನ್ನು ಹೋಗಲಾಡಿಸಬಹುದು. 4 ಚಮಚ ಸಾಸಿವೆ ಎಣ್ಣೆಗೆ ಒಂದು ಚಿಟಿಕೆ ಹರಿಶಿನ ಪುಡಿ, 2 ಚಮಚ ಸೈಂಧವ ಲವಣವನ್ನು ಬರೆಸಿ ಚೆನ್ನಾಗಿ ಕಲಸಿ ನೋವಿರುವ ಜಾಗಕ್ಕೆ ದಿನಕ್ಕೆರಡು ಬಾರಿ ಹಚ್ಚಿ ನಯವಾಗಿ ಮಸಾಜ್ ಮಾಡಬೇಕು.

ಇನ್ನು  ಕೈ ಕಾಲುಗಳು ಸೆಳೆತವಿದ್ದಾಗ  ಸಾಸಿವೆ ಎಣ್ಣೆಯನ್ನು ಕೈ ಕಾಲುಗಳಿಗೆ ಹಚ್ಚಿ 15 ನಿಮಿಷ ಚೆನ್ನಾಗಿ ಮಸಾಜ್ ಮಾಡುವುದರಿಂದ ಕೈ  ಕಾಲಿನ ಸೆಳೆತ ಕಡಿಮೆಯಾಗುತ್ತದೆ.   ಸಾಸಿವೆ ಎಣ್ಣೆಗೆ ಚಿಟಿಕೆ ಅರಿಶಿನ ಪುಡಿ ಹಾಗೂಒಂದು ಚಮಚ ಮೆಂಥೆ ಪುಡಿ ಬೆರೆಸಿ ನಿತ್ಯ ಮೈಗೆ ಹಚ್ಚಿ ಅರ್ದ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಚರ್ಮದಲ್ಲಿ ತುರಿಕೆ, ಅಲರ್ಜಿಯಂತಹ ಸಮಸ್ಯೆ  ಇದ್ದರೆ ನಿವಾರಣೆಯಾಗುತ್ತದೆ.

ಸಾಸಿವೆ ಎಣ್ಣೆಯನ್ನು ಪ್ರತಿದಿನ ಹೊಕ್ಕುಳಿಗೆ ಹಾಕಿ ಮಸಾಜ್ ಮಾಡಿ  20 ನಿಮಿಷಗಳ ಕಾಲ ಅಂಗಾತ ಮಲಗಿದರೆ  ನರಗಳು ಗಟ್ಟಿಯಾಗುವುದಲ್ಲದೆ ಆರೋಗ್ಯಯುತವಾಗಲು ಸಹಾಯಕವಾಗುವುದು. ಕೂದಲಿನ ಬುಡಕ್ಕೂ ಈ ಎಣ್ಣೆಯನ್ನು  ಹಾಕುವುದರಿಂದ ಕೂದಲಿನ ಹೊಟ್ಟು ನಿವಾರಣೆಯಾಗುತ್ತದೆ. ಅಲ್ಲದೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಅಡಿಗೆಯಲ್ಲೂ ಒಗ್ಗರಣೆಗೆ ಸಾಸಿವೆ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯಕ್ಕೆ ಉತ್ತಮ ಸಹಾಯಕವಾಗುವುದು.

Exit mobile version