Bengaluru : ಕಾಂಗ್ರೆಸ್ (Congress) ಸರ್ಕಾರ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂಪಾಯಿ ನೀಡುತ್ತಿದೆ. ಈ ಯೋಜನೆಯ 1ನೇಯ ಕಂತಿನ ಹಣವನ್ನು ಆಗಸ್ಟ್ 30 ರಂದು ಬಿಡುಗಡೆ ಮಾಡಲಾಗಿತ್ತು. ರಾಜ್ಯದ ಸುಮಾರು ಒಂದು ಕೋಟಿಗೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಸುಮಾರು 82 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಈಗಾಗಲೇ ಮೊದಲ ಕಂತಿನ ಹಣ ವರ್ಗಾವಣೆಯಾಗಿದೆ (Money Transfer). ಆದರೆ, ಕೆಲವು ಮಹಿಳೆಯರ ಬ್ಯಾಂಕ್ ಖಾತೆ ಕೆವೈಸಿ ಆಗದ ಕಾರಣ, 18 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಇನ್ನೂ ಮೊದಲ ಕಂತಿನ ಹಣ ಸಿಕ್ಕಿಲ್ಲ. ಇದೀಗ ಎರಡನೇಯ ಕಂತಿನ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಸಿದ್ದತೆ ನಡೆಸಿದೆ.

ಇನ್ನು ಮಹಿಳಾ ಮತ್ತು ಮಕ್ಕ ಳ ಕಲ್ಯಾ ಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, 2ನೇ ಕಂತಿನ ಹಣ ಎಲ್ಲರ ಬ್ಯಾಂಕ್ ಖಾತೆಗೂ ಸೆಪ್ಟೆಂಬರ್ (September) ತಿಂಗಳ 26ರಂದು ಜಮೆ ಆಗಲಿದೆ ಎಂದು ತಿಳಿಸಿದ್ದಾರೆ. ಇನ್ನು ಅರ್ಜಿ ಸಲ್ಲಿಸಿರುವ ಆದರೆ ಕೆವೈಸಿ ಕಾರಣದಿಂದ 1ನೇ ಕಂತಿನ ಹಣವನ್ನು ಪಡೆಯದು ಮಹಿಳೆಯರಿಗೆ ಮೊದಲನೇಯ ಮತ್ತು ಎರಡನೇಯ ಕಂತಿನ ಹಣವನ್ನು ಒಟ್ಟಿಗೆ ಸೇರಿಸಿ 4,000 ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಹೀಗಾಗಿ 1ನೇ ಕಂತಿನ ಹಣವನ್ನು ಪಡೆಯದ ಮಹಿಳೆಯರು ಚಿಂತಿಸಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.
ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಬಹುತೇಕರಿಗೆ ಹಣ ಬಂದಿದೆ. ಆದರೆ, ಇನ್ನೂ ಸಾಕಷ್ಟು ಅರ್ಜಿ ಬಾಕಿ ಇದ್ದು, ಅವುಗಳ ಪರಿಶೀಲನೆಯ ಕಾರ್ಯ ನಡೆಯುತ್ತಿದೆ. ಹೀಗಾಗಿ ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಅರ್ಜಿ ಸಲ್ಲಿಸಿರುವ ಎಲ್ಲ ಮಹಿಳೆಯರ ಖಾತೆಗೂ ಹಣ ಜಮೆ ಮಾಡುವುದಾಗಿ ಮಹಿಳಾ ಮತ್ತು ಮಕ್ಕ ಳ ಕಲ್ಯಾ ಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಭರವಸೆ ನೀಡಿದ್ದಾರೆ.