ದ್ವಿತೀಯ ಪಿಯು ಪರಿಷ್ಕರಣಾ ವೇಳಾಪಟ್ಟಿ ಬಿಡುಗಡೆ ; ಈ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾ.05ರ ಸಂಜೆಯವರೆಗೆ ಕಾಲಾವಕಾಶ!

second Puc

ಈ ಹಿಂದೆ ನೀಡಿದ್ದ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಈಗ ಬದಲಾಗಿದ್ದು, ಮತ್ತೊಂದು ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯಾದ್ಯಂತ ದ್ವಿತೀಯ ಪರೀಕ್ಷೆ ವೇಳಾಪಟ್ಟಿ ಈ ಹಿಂದೆಯೇ ಪ್ರಕಟಿಸಿತ್ತು. ಆದರೆ ಸದ್ಯ ದ್ವಿತೀಯ ಪರೀಕ್ಷೆ ಹಾಗೂ ಜೆಇಇ ಪರೀಕ್ಷೆಯು ಒಟ್ಟೊಟ್ಟಿಗೆ ಬಂದ ಕಾರಣ ದ್ವಿತೀಯ ಪಿಯುಸಿ ವೇಳಾಪಟ್ಟಿಯನ್ನು ಈಗ ಮತ್ತೊಮ್ಮೆ ಬದಲಿಸಿಲಾಗಿದೆ.

ಏಪ್ರಿಲ್ 22 ರಿಂದ ಮೇ 05 ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಪತ್ರಿಕಾ ಪ್ರಕಟಣೆಯೂ ಮಾರ್ಚ್ 05 ರೊಳಗೆ ಪರಿಷ್ಕøತ ತಾತ್ಕಾಲಿಕ ವೇಳಾಪಟ್ಟಿ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದೆ. ಈ ಹಿಂದೆ ಪ್ರಕಟಿಸಿಲಾಗಿದ್ದ ವೇಳಾಪಟ್ಟಿಯಲ್ಲಿ ಏಪ್ರಿಲ್ 16 ರಿಂದ ಮೇ 06 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದೆ ಎಂದು ಪ್ರಕಟವಾಗಿತ್ತು. ಆದರೆ ಈಗ ಬದಲಾವಣೆಯಾಗಿರುವ ವೇಳಾಪಟ್ಟಿಯ ಕ್ರಮೇಣ ತಿಳಿಯುವುದಾದರೆ ಕೆಳಕಂಡಂತೆ ಇದೆ.

ಏಪ್ರಿಲ್ 22 : ವ್ಯವಹಾರ ಅಧ್ಯಯನ, ತರ್ಕಶಾಸ್ತ್ರ
ಏಪ್ರಿಲ್ 23 : ಹಿಂದಿ
ಏಪ್ರಿಲ್ 25 : ಅರ್ಥಶಾಸ್ತ್ರ
ಏಪ್ರಿಲ್ 26 : ಹಿಂದೂಸ್ಥಾನಿ ಸಂಗೀತ, ರಾಸಾಯನ ಶಾಸ್ತ್ರ, ಮನಃಶಾಸ್ತ್ರ
ಏಪ್ರಿಲ್ 27 : ತೆಲುಗು,ತಮಿಳು, ಮಲಯಾಳಂ, ಮರಾಠಿ, ಉರ್ದು, ಸಂಸ್ಕøತ, ಫ್ರೆಂಚ್
ಏಪ್ರಿಲ್ 28 : ಕನ್ನಡ, ಅರೇಬಿಕ್
ಏಪ್ರಿಲ್ 30 : ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಸಮಾಜ ಶಾಸ್ತ್ರ
ಮೇ 2 :ಭೂಗೋಳ ಶಾಸ್ತ್ರ, ಜೀವಶಾಸ್ತ್ರ
ಮೇ 4 :ಆಂಗ್ಲ ಭಾಷೆ
ಮೇ 5 : ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
ಮೇ 6 : ಗಣಿತಶಾಸ್ತ್ರ, ಶಿಕ್ಷಣ ಶಾಸ್ತ್ರ , ಮೂಲಗಣಿತ
ಮೇ 7: ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, ಗೃಹ ವಿಜ್ಞಾನ, ಭೂಗರ್ಭ ಶಾಸ್ತ್ರ
ಮೇ 9 : ಇತಿಹಾಸ, ಭೌತಶಾಸ್ತ್ರ
ಮೇ 11 : ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

Exit mobile version