ಹತ್ತಾರು ಬಡ ವೃದ್ಧರಿಗೆ ವೃದ್ಯಾಪ ವೇತನ ಮಾಡಿಸಿದ ಕರವೇ ಕಾರ್ಯಕರ್ತರು. ಒಳ್ಳೆ ಕೆಲಸಕ್ಕೆ ಕೈ ಜೋಡಿಸಿದ ಕಂದಾಯ ಅಧಿಕಾರಿಗಳಿಗೆ ಕರವೇ ಕಾರ್ಯಕರ್ತರಿಂದ ಧನ್ಯವಾದ.

ಕೊಡಗು : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ಹಲವಾರು ವಯಸ್ಸಾದ ಮಹಿಳೆಯರು ಮತ್ತು ವೃದ್ಧರಿಗೆ ಮಾಸಾಸನ ಬರುತ್ತಿರಲಿಲ್ಲ ಮತ್ತು ಇದಕ್ಕೆ ಯಾವ ದಾಖಲೆಗಳು ಒದಗಿಸಬೇಕು ಎಂದು ಗೊತ್ತಾಗದೆ ಅವರು ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದರು.

ಇದನ್ನ ಮನಗಂಡ ತಾಲ್ಲೂಕಿನ ಕರವೇ ಕಾರ್ಯಕರ್ತರು ಈ ರೀತಿ ತೊಂದರೆಯಲ್ಲಿರುವ ವೃದ್ಧರನ್ನು ಸಂಪರ್ಕಿಸಿ ಅವರ  ದಾಖಲೆಗಳನ್ನು ನೋಡಿ ಅದರಲ್ಲಿ ಆಧಾರ್ ಕಾರ್ಡ್ ಇಲ್ಲದವರಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ಮತ್ತು ಬ್ಯಾಂಕ್ ಖಾತೆ ಇಲ್ಲದವರಿಗೆ ಬ್ಯಾಂಕ್ ಖಾತೆಯನ್ನು ಮಾಡಿಸಿಕೊಟ್ಟು ಅವರ ಅರ್ಜಿಗಳನ್ನು ಭರ್ತಿ ಮಾಡಿ   ಒಟ್ಟು 10 ಜನರಿಗೆ ವೃದ್ಧಾಪ್ಯ ವೇತನಕ್ಕಾಗಿ ಶನಿವಾರಸಂತೆ ಕಂದಾಯ ಅಧಿಕಾರಿಗಳಿಗೆ ಫಲಾನುಭವಿಗಳ ದಾಖಲೆಗಳನ್ನು ಸಲ್ಲಿಸಿದ್ರು. 

ಶನಿವಾರಸಂತೆ ಕಂದಾಯ ಅಧಿಕಾರಿಗಳು  ದಾಖಲೆಗಳನ್ನು ಪರಿಶೀಲನೆ ಮಾಡಿ 10 ಬಡ ಜನರಿಗೆ  ವೃದ್ಧಾಪ್ಯ  ವೇತನ ಮಾಡಿಕೊಟ್ಟಿರುತ್ತಾರೆ .ಮತ್ತು ವೃದ್ಯಾಪ ವೇತನ ದ ಆರ್ಡರ್ ಕಾಪಿ ಯನ್ನು ಸಹ ಫಲಾನುಭವಿಗಳಿಗೆ ಉಪ ತಹಸಿಲ್ದಾರ್ ಮಧುಸೂದನ್ ರವರು ಮತ್ತು ಕಂದಾಯ ಪರಿವೀಕ್ಷಕರಾದ ಮಂಜುನಾಥ್ ರವರು ಈ ಎಲ್ಲ ವೃದ್ಧಾಪ್ಯ ವೇತನ  ಫಲಾನುಭವಿಗಳಿಗೆ  ಆರ್ಡರ್ ಕಾಪಿ ಯನ್ನು ವಿತರಿಸಿದರು.

ವೃದ್ಯಾಪ ವೇತನ ವನ್ನು ಮಾಡಿಸಿ ಕೊಟ್ಟಂತಹ ಉಪ ತಹಸೀಲ್ದಾರರಾದ ಮಧುಸೂದನ್ ರವರಿಗೆ ಕರವೇ ಕಾರ್ಯಕರ್ತರಿಂದ ತುಂಬು ಹೃದಯದ ಧನ್ಯವಾದ ಅರ್ಪಿಸಿದ್ರು. ಹಾಗೆಯೇ ಶನಿವಾರಸಂತೆ ಸುತ್ತಮುತ್ತಲು ಇನ್ನೂ  ಬಡವರು ಯಾರಾದರೂ ವೃದ್ಧಾಪ್ಯ ವೇತನ  ಫಲಾನುಭವಿಗಳು ವೃದ್ಧಾಪ್ಯ  ವೇತನ ಮಾಡಿಸಲು ಇದ್ದರೆ ಕರವೇ ಕಾರ್ಯಕರ್ತರನ್ನು ಸಂಪರ್ಕಿಸಬಹುದು ..9449255831 ಮತ್ತು 9686095831

Exit mobile version